ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Friday, September 21, 2007

"ಶಾಣ್ಯಾರ ಕೂಡಿ ಶ್ಯಾವಿಗಿಗಿ ಉಪ್ಪ ಹಾಕಿದ್ದರಂತ"..

ಧರ್ಮಾಂಧತೆ ಮತ್ತು ಭಾಷಾಂಧತೆ ಮತ್ತು ಬುದ್ದಿಜೀವಿಗಳನ್ನು ಮತ್ತು ಅಂತಹ ಗುಣ ಸಂಪನ್ನರನ್ನು ಒಂದು ಕಡೆ ಸೇರಿಸಿದರೆ ಏನಾಗುತ್ತದೆ ? ಎನ್ನುವುದಕ್ಕೆ ರಾಮ ಸೇತು ವಿವಾದ ಚೆಂದದ ಉದಾಹರಣೆಯಾಗಬಲ್ಲದು. ತಮಿಳುನಾಡಿನಲ್ಲಿ ಕರುಣಾನಿಧಿ, ರಾಮ ಅನ್ನೊ ವ್ಯಕ್ತಿ ಶಾಲೆ ಕಲಿತಿಲ್ಲ ಅವನಿಗೆ ಅಕ್ಷರ ಜ್ಞಾನ ಇಲ್ಲ ಎಂದು ಹೇಳಿದರೆ ಅಲ್ಲಿ ದೂರದ ಬೆಂಗಳೂರಿನಲ್ಲಿ ರಾಮ ಭಕ್ತರು ಏನೂ ಗೊತ್ತಿರದ ಸೆಲ್ವಿ ಮನೆಯ ಮೇಲೆ ಪೆಟ್ರೋಲ್ ಬಾಂಬ್ ದಾಳಿ ಮಾಡ್ತಾರೆ.


ಇದೇ ಅವಕಾಶ ಸಿಕ್ತು ಅಂತ ಕೆಲವರಿಂದ , ಏನೂ ಅರಿಯದ ತನ್ನ ಪಾಡಿಗೆ ಬುರ್ರ ಎಂದು ಹೋಗುವ-ಬರುವ ತಮಿಳು ನಾಡಿನ ಬಸ್ಸು (ಬಂಡಿ) ಬೆಂಕಿಗೆ ಆಹುತಿಯಾಗುತ್ತದೆ.

ರಾಮನ ವಿಚಾರದಿಂದಲೇ ಪ್ರಾರಂಭಿಸೋಣ.. ತನಗೆ ದೇವರು ಅನ್ನೊ ಕಲ್ಪನೆ ಬೇಡ ಎಂದ ಮಾತ್ರಕ್ಕೆ ಇತರರಿಗೂ ಬೇಡವೆ ? ಓಟು ಬ್ಯಾಂಕ್ ಲೆಕ್ಕಾಚಾರ ಬದಿಗಿಟ್ಟರೂ ಕರುಣಾನಿಧಿ ಹೇಳಿಕೆ ತಪ್ಪು. ದೇವರು ಬೇಡ. ಅವನ ಏಜೆಂಟರಾದ ಬ್ರಾಹ್ಮಣರೂ ಬೇಡ ಎಂದು ಹೇಳಿದ್ದ ಪೆರಿಯಾರ್ ರಾಮಸ್ವಾಮಿ ಗುಂಪಿಗೆ ಸೇರಿದ ಕರುಣಾನಿಧಿ, ತಾವೊಬ್ಬರು ಸೇರಿದರೆ ಜಗತ್ತೇ ಸೇರಿದೆ ಎಂಬಂತೆ ಯಾಕೆ ಮಾತನಾಡಬೇಕು.
ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್ ಮಾಡಿ

0 comments:

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger