ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Saturday, October 13, 2007

ನಮಾಜ್‌ಗಿಂತ ಮೊದಲು ಸದಕ್-ಎ-ಫಿತ್ರ್ ಪೂರ್ತಿಗೊಳಿಸಿ

ರಂಜಾನ್ ಹಬ್ಬ ಮಾನವರೆಲ್ಲರೂ ಸರಿಸಮಾನರು ಎನ್ನುವ ಸಂದೇಶವನ್ನು ಸಾರುತ್ತದೆ. ಜನರು ಪರಸ್ಪರ ಸಂತೋಷದಲ್ಲಿ ಭಾಗಿಯಾಗಿ, ಕಷ್ದದಲ್ಲಿದ್ದವರಿಗೆ ತಮ್ಮಿಂದ ಆದಷ್ಟು ಸಹಾಯ ಹಸ್ತ ನೀಡಿ ಪ್ರತಿಯೊಬ್ಬ ಬಡವರು ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುತ್ತದೆ.

ಪೈಗಂಬರ್ ಹಜರತ್ ಮೊಹಮ್ಮದ್ ಅವರು ಸದಕ್- ಎ- ಫಿತ್ರ್ ಅನ್ನು ಅವಶ್ಯಕ ದಾನವೆಂದು ಕರೆದಿದ್ದಾರೆ. ಈ ದಾನವನ್ನು ರಂಜಾನ್ ಉಪವಾಸ ಮುಗಿದ ಮೇಲೆ ನೀಡಲಾಗುತ್ತದೆ. ಈ ದಾನವನ್ನು ಅನ್ಯಾಯ ಮತ್ತು ಅನವಶ್ಯಕ ಮಾತುಗಳಿಂದ ದೂರವಿರಲು ನೀಡಲಾಗುತ್ತದೆ.


ದಸರಾ ಫೋಟೋ ಗ್ಯಾಲರಿಗೆ ಭೇಟಿ ನೀಡಿ


Thursday, October 11, 2007

ರೋಗಿಯ ಹೃದಯದಲ್ಲಿ ಸ್ಕ್ರೂ ಬಿಟ್ಟ ವೈದ್ಯರು

ರಾಷ್ಟ್ರದ ಪ್ರಮುಖ ವೈದ್ಯ ವಿಜ್ಞಾನ ಸಂಸ್ಥೆ ಎಂದು ಪ್ರಖ್ಯಾತಿ ಪಡೆದಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 75 ವರ್ಷದ ರೋಗಿಯೊಬ್ಬನ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದ ಕಾರಣ ರೋಗಿಯ ಹೃದಯದಲ್ಲಿ ಸ್ಕ್ರೂ ಒಂದು ಉಳಿದ ಪರಿಣಾಮವಾಗಿ ಮೃತಪಟ್ಟಿದ್ದು. ಶಸ್ತ್ರಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಎಸಗಿದ ವೈದ್ಯನನ್ನು ಅಮಾನತುಗೊಳಿಸಲಾಗಿದೆ.

ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 75 ವರ್ಷದ ಹೃದಯ ರೋಗಿಯೋರ್ವನ ಬೈಪಾಸ್ ಶಸ್ತ್ರ ಚಿಕಿತ್ಸೆ ನೆರೆವೆರಿಸುವ ಸಮಯದಲ್ಲಿ ಹೃದಯದಲ್ಲಿ ಸ್ಕ್ರೂ ಒಂದನ್ನು ಬಿಟ್ಟು ರೋಗಿಯ ಸಾವಿಗೆ ಕಾರಣರಾಗಿದ್ದಾರೆ.

ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತಕ್ಕೆ ಹೀನಾಯ ಸೋಲು

ಭಾರತೀಯ ಬ್ಯಾಟ್ಸ್‌ಮನ್‌ಗಳ ದಯೆ, ಮಿಚೆಲ್ ಜಾನ್ಸನ್ ಆಶಿರ್ವಾದ ಮತ್ತು ಅಡಂ ಗಿಲ್‌ಕ್ರಿಸ್ಟ್ ಬೆಂಬಲದ ಮೇಲೆ ಟೀಮ್ ಇಂಡಿಯಾ ತಂಡವು ಆಸ್ಟ್ರೇಲಿಯಾ ವಿರುದ್ಧ ವಡೋದರಾದಲ್ಲಿ ನಡೆದ ಸರಣಿಯ ಐದನೆ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಭಾರಿ ಅಂತರದಿಂದ ಸೋಲು ಅನುಭವಿಸಿತು.

ಆಸ್ಟ್ರೇಲಿಯದ ಆಡಂ ಗಿಲ್‌ಕ್ರಿಸ್ಟ್ ಅಜೇಯ (79) ಮ್ಯಾಥು ಹೆಡನ್ (29) ಮತ್ತು ರಿಕಿ ಪಾಂಟಿಂಗ್ ಅವರ ಅಜೇಯ 39 ರನ್‌ಗಳ ನೆರವಿನಿಂದ ಭಾರತ ನೀಡಿದ 149 ರನ್‌ಗಳ ಸವಾಲನ್ನು 25.5 ಓವರುಗಳಲ್ಲಿ ತಲುಪಿ ಸರಣಿಯಲ್ಲಿ 3-1 ರ ಮುನ್ನಡೆ ಸಾಧಿಸಿತು.


ಸಿಕ್ಸರ್‌ನಂತೆ ನಿತೀಶ್‌ರನ್ನು ಎಸೆಯುವೆ:ಲಾಲೂ

ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಸುವಂತೆ ಆರ್‌ಜೆಡಿ ವರಿಷ್ಠ ಮತ್ತು ರೈಲ್ವೆ ಸಚಿವ ಲಾಲು ಪ್ರಸಾದ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಗ್ರಹಿಸಿದ್ದು, ಚುನಾವಣೆ ನಡೆದರೆ ಅವರನ್ನು ಬೌಂಡರಿಯ ಆಚೆ ಸಿಕ್ಸರ್ ಬಾರಿಸಿದಂತೆ ಎಸೆಯುವುದಾಗಿ ಅವರು ಹೇಳಿದರು.

ವಿರೋಧಿಗಳನ್ನು ಶೂನ್ಯಕ್ಕೆ ಔಟ್ ಮಾಡುವುದಾಗಿ ಜಂಬ ಕೊಚ್ಚಿಕೊಳ್ಳುವ ನಿತೀಶ್ ಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಬೌಂಡರಿಯಾಚೆ ಹೋಗಲಿದ್ದಾರೆ ಎಂದು ಹೇಳಿದರು.

Tuesday, October 9, 2007

ಹದಿನೆಂಟು ಸಾವಿರದ ಗಡಿ ದಾಟಿದ ಸೂಚ್ಯಂಕ

ಮಂಗಳವಾರದ ಪ್ರಾರಂಭಿಕ ವಹಿವಾಟಿನಲ್ಲಿ ರಾಜಕೀಯ ಅಸ್ಥಿರತೆಯ ಕಾರಣ ಕೆಲಕಾಲ ಮುಗ್ಗರಿಸಿದ್ದ ಮುಂಬೈ ಶೇರು ವ್ಯವಹಾರ ನಂತರದ ವಹಿವಾಟಿನಲ್ಲಿ ಭಾರಿ ಚೇತರಿಕೆಯೊಂದಿಗೆ 18 ಸಾವಿರದ ಗಡಿಯನ್ನು ದಾಟಿತು.

ಒಟ್ಟು 370 ಏರಿಕೆಗೆ ಭಾರಿ ಪ್ರಮಾಣದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಅಸಕ್ತಿ ಕಾರಣ ಎನ್ನಲಾಗಿದೆ. ಮಂಗಳವಾರದಂದು ಶೇರು ಸೂಚ್ಯಂಕ ಮೊದಲ ಬಾರಿಗೆ 18 ಸಾವಿರದ ಗಡಿಯನ್ನು ತಲುಪಿ ಕೆಳಗೆ ಇಳಿಯಿತು.


ತಪ್ಪು ಮಾಡಿದೆ, ಕ್ಷಮಿಸಿ: ಕುಮಾರಸ್ವಾಮಿ

ಅಧಿಕಾರ ಹಸ್ತಾಂತರ ವಿಚಾರದಲ್ಲಿ ತಪ್ಪು ಮಾಡಿದೆ, ರಾಜ್ಯದ ಜನತೆ ನನ್ನನ್ನು ಕ್ಷಮಿಸುತ್ತಾರೆ ಎಂಬ ಭಾವನೆ ನನ್ನದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾನು ತಪ್ಪು ಮಾಡಿದ್ದು ನಿಜ. ಆದರೆ ತನ್ನ ಹಾಗೂ ತಮ್ಮ ಪಕ್ಷದ ಮೇಲೆ ಮಾತ್ರ ತಪ್ಪನ್ನು ಹೊರಿಸುವುದನ್ನು ನಾನು ಒಪ್ಪಲಾರೆ. ಬಿಜೆಪಿಯೂ ಈ ವಿಚಾರದಲ್ಲಿ ತಪ್ಪು ಮಾಡಿದೆ. ಸಂದರ್ಭ ಬಂದಾಗ ಇದನ್ನು ಪ್ರಕಟಿಸುತ್ತೇನೆ ಎಂದರು.



ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger