ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Saturday, April 5, 2008

ತೇಜಸ್ವಿ ಮರೆಯಾಗಿ ಒಂದು ವರ್ಷ...

ಕನ್ನಡ ಸಾರಸ್ವತ ಲೋಕದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ನಮ್ಮನ್ನಗಲಿ ಇಂದಿಗೆ (ಏ.5) ವರುಷ ಸಂದಿದೆ. ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲಿ ಒಬ್ಬರಾಗಿದ್ದ ತೇಜಸ್ವಿಯವರು ಯುವಪೀಳಿಗೆಗೂ ಮೆಚ್ಚಿನ ಸಾಹಿತಿಯಾಗಿದ್ದರು.

ಸದ್ಯಕ್ಕೆ 'ಹೊಗೆ' ಹಾಕುವುದಿಲ್ಲ: ಕರುಣಾನಿಧಿ

ವಿವಾದಾಸ್ಪದ ಹೊಗೇನಕಲ್ ಕುಡಿಯುವ ನಿರಾವರಿ ಯೋಜನೆಯನ್ನು ಕರ್ನಾಟಕದಲ್ಲಿ ಚುನಾವಣೆ ನಡೆಯುವ ತನಕ ತಡೆಹಿಡಿಯಲು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ನಿರ್ಧಿರಿಸಿದ್ದಾರೆ.

Thursday, April 3, 2008

ಜ್ಯೋತಿಬಸು ಹಾಗೂ ಹರಿಕಿಶನ್ ಸಿಂಗ್ ಸುರ್ಜಿತ್ ಅವರು ಪಾಲಿಟ್‌ಬ್ಯೂರೋದಿಂದ ನಿರ್ಗಮಿಸಿರುವುದರೊಂದಿಗೆ,90 ವರ್ಷದ ಇತಿಹಾಸವಿರುವ ಕಮ್ಯೂನಿಸ್ಟ್ ಚಳುವಳಿಯ ಭಾಗವಾದ ಸಿಪಿಐ(ಎಂ)ಪಕ್ಷದ ಒಂಬತ್ತು ಸಂಸ್ಥಾಪಕ ಸದಸ್ಯರ ಯುಗವೊಂದು ಅಂತ್ಯವಾದಂತಾಗಿದೆ.

ಉಷ್ಟ್ರಾಸನ

ಸಂಸ್ಕೃತದಲ್ಲಿ ಉಷ್ಟ್ರ ಅಂದರೆ 'ಒಂಟೆ' ಎಂಬರ್ಥ. ಹಾಗಾಗಿ ಈ ಆಸನದ ಭಂಗಿಯನ್ನು ಒಂಟೆ ಭಂಗಿ ಎಂದೂ ಹೇಳಲಾಗುತ್ತದೆ. ಇದು ಭಾಗಿದ(ಧನುರಾಸನ) ಮತ್ತು ಮೇಲ್ಮುಖ ಭಾಗಿರುವ (ಊರ್ಧ್ವ ಧನುರಾಸನ) ನಡುವಿನ ಸ್ಥಿತ್ಯಂತರ ಭಂಗಿ.

Wednesday, April 2, 2008

ವಿಧಾನಸಭೆ ಚುನಾವಣೆ ಘೋಷಣೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಅಖಾಡ ಸಜ್ಜಾಗಿದ್ದು, ಮೇ ತಿಂಗಳಲ್ಲಿ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರು ಬುಧವಾರ ಘೋಷಿಸಿದ್ದಾರೆ.

ಭರ್ತಿ ಎಂಟುಗಂಟೆ ನಿದ್ರಿಸಿ, ಸ್ಲಿಮ್ ಆಗಿ

ಡಯಟೂ, ಡ್ರೈ ಚಪಾತಿ, ಟ್ಯಾಬ್ಲೆಟ್ಟು, ವಾಕೂ ಅಂತ ಸುಸ್ತಾಗಿಯೂ ನಿಮ್ಮ ದೇಹ ಉಬ್ಬುತ್ತಲೇ ಹೋಗುತ್ತಿದೆಯಾದರೆ ಇದನ್ನೂ ಯಾಕೆ ಒಮ್ಮೆ ಟ್ರೈ ಮಾಡಬಾರದೂ? ಹೇಗಿದ್ದರೂ, ಭಾರ ಎತ್ತುವ, ಬೆವರು ಸುರಿಸುವ, ಬಾಯಿ ಕಟ್ಟುವ ಕಷ್ಟ ಇಲ್ವಲ್ಲ?

Tuesday, April 1, 2008

ಹೊಗೇನಕಲ್: ಎಪ್ರಿಲ್ 10ರಂದು ಕರ್ನಾಟಕ ಬಂದ್‌ಗೆ ಕರೆ

ಹೊಗೇನಕಲ್ ಜಲ ಯೋಜನೆ ಕುರಿತಂತೆ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹೇಳಿಕೆ ವಿರುದ್ಧ ಎ.10ರಂದು ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಮಂಗಳವಾರ ಕರೆ ನೀಡಿವೆ. ಹೊಗೇನಕಲ್ ಯೋಜನೆಯನ್ನು ಮುಂದುವರಿಸುವುದಾಗಿ ಎಂ.ಕರುಣಾನಿಧಿ ನೀಡಿದ ಹೇಳಿಕೆಯಿಂದ ವಿವಾದದ ಕಿಡಿ ಸ್ಫೋಟಿಸಿದೆ.

'ಹೊಗೆ'ಯ ಬೆಂಕಿಗೆ ಕರುಣಾನಿಧಿಯಿಂದ ತುಪ್ಪ

'ಸೇತು ನಿರ್ಮಿಸುವುದಕ್ಕಾಗಿ ಶ್ರೀರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ' ಎಂದು ಪ್ರಶ್ನಿಸಿ ಗಮನ ಸೆಳೆದಿದ್ದ ವಯೋವೃದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮತ್ತೊಮ್ಮೆ ತಮ್ಮ ನಾಲಿಗೆ ಸಡಿಲ ಮಾಡಿದ್ದಾರೆ. ಕರ್ನಾಟಕದವರು ತಮ್ಮ ಬೆನ್ನುಮೂಳೆ ಮುರಿದರೂ, ಹೊಗೇನಕಲ್ ಯೋಜನೆಯನ್ನು ಪೂರ್ಣಗೊಳಿಸಿಯೇ ಸಿದ್ಧ ಎಂಬ ಉಡಾಫೆಯ, ಪ್ರಚೋದಕ ಮಾತುಗಳನ್ನಾಡಿದ್ದಾರೆ.

Monday, March 31, 2008

ಅಹ್ಮದಾಬಾದ್ ಟೆಸ್ಟ್: ಕೈಫ್‍‌ಗೆ ಒಲಿದ ಭಾಗ್ಯ

ಎಪ್ರಿಲ್ 3ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಸಚಿನ್ ತೆಂಡೂಲ್ಕರ್ ಆಡುತ್ತಿಲ್ಲ. ಸಚಿನ್ ಸ್ಥಾನವನ್ನು ಮಹ್ಮದ್ ಕೈಫ್ ತುಂಬಲಿದ್ದು, ಹೆಚ್ಚು ಕಡಿಮೆ ಎರಡು ವರ್ಷದ ನಂತರ ಗ್ರೆಗ್ ಶಿಷ್ಯ ಟೆಸ್ಟ್ ಕ್ರಿಕೆಟಿಗೆ ಮರಳುತ್ತಿದ್ದಾರೆ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger