ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Thursday, January 31, 2008

ಕಿಮ್ಸ್‌ನಲ್ಲೂ ಉಗ್ರರ ಬೇರು: ವೈದ್ಯ ವಿದ್ಯಾರ್ಥಿ ಸೆರೆ

ಉಗ್ರಗಾಮಿ ಜಾಲವು ರಾಜ್ಯದಲ್ಲಿ ಎಷ್ಟರಮಟ್ಟಿಗೆ ಬೇರೂರಿದೆ ಎಂಬುದರ ಕುರಿತಾಗಿ ಆಘಾತಕಾರಿ ಸಂಗತಿಗಳು ಹೊರಬರತೊಡಗಿದ್ದು, ಕಿಮ್ಸ್ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಮಹಮದ್ ಆಸಿಫ್, ಇತ್ತೀಚೆಗೆ ಬಂಧಿಸಲಾಗಿರುವ ಲಷ್ಕರ್-ಇ-ತೊಯ್ಬಾದ ಉಗ್ರರ ಜೊತೆ ಸಂಪರ್ಕವಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಕರ್ನಾಟಕದಲ್ಲಿ ಉಗ್ರರ ವ್ಯವಸ್ಥಿತ ಜಾಲವು ಅಸ್ತಿತ್ವದಲ್ಲಿರುವ ಸುದ್ದಿಗೆ ಪುಷ್ಟಿ ಸಿಕ್ಕಂತಾಗಿದೆ.

ಪೂರ್ಣ ವರದಿ ಇಲ್ಲಿದೆ:

ವ್ಯಾಸರಾಯ ಬಲ್ಲಾಳರಿಗೆ ಶ್ರದ್ಧಾಂಜಲಿ

ಕತೆ, ಕಾದಂಬರಿಗಳ ಮೂಲಕ ವಾಸ್ತವ ಜಗತ್ತಿನ ಚಿತ್ರಣವನ್ನು ಅದ್ಭುತವಾಗಿ ಬಿಡಿಸಿಡುತ್ತಿದ್ದ, ಮಾನವೀಯ ಆದರ್ಶಗಳನ್ನು ಮನಮುಟ್ಟುವಂತೆ ಬಿಂಬಿಸುತ್ತಿದ್ದ, ಕನ್ನಡ ಸಾಹಿತ್ಯ ಲೋಕದಲ್ಲಿ "ಬಂಡಾಯ ಬಲ್ಲಾಳರು" ಎಂದೇ ಜನಜನಿತರಾಗಿದ್ದ ಕವಿ ಮನಸಿನ ನಿ.ವ್ಯಾಸರಾಯ ಬಲ್ಲಾಳರೀಗ ನಮ್ಮೊಂದಿಗಿಲ್ಲ. 'ಬಂಡಾಯ ಬಲ್ಲಾಳರು' ಎಂದರೆ ಅವರು ಕಟ್ಟಾ ಬಂಡಾಯ ಸಾಹಿತಿ ಅಂತ ಅರ್ಥವಲ್ಲ. ಅವರ 'ಬಂಡಾಯ' ಎಂಬ ಕಾದಂಬರಿಯು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟಿತ್ತು, ಈ ಸಿದ್ಧಿಗೇ ಆ ಹೆಸರಿನ ಪ್ರಸಿದ್ಧಿ.

ಬಡತನವನ್ನು ಒಡಲಲ್ಲಿ ಕಟ್ಟಿಕೊಂಡು ಅನ್ನಕ್ಕಾಗಿ ಉದ್ಯೋಗ ಅರಸುತ್ತಾ ಮುಂಬಯಿ ಎಂಬ ಮಾಯಾನಗರಿ ಸೇರಿಕೊಂಡಿದ್ದ ಬಲ್ಲಾಳರು, ತೈಲ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರೂ, ಅದರ ಜೊತೆಗೇ ಸಾಹಿತ್ಯದ ಹಸಿವನ್ನು ನೀಗಿಸುವ ಕಾರ್ಯದಲ್ಲೂ ತಮ್ಮನ್ನು ಮುಳುಗಿಸಿಕೊಂಡರು. ಮುಂಬಯಿ ಬದುಕಿನ ತಳಮಳಗಳನ್ನು ಅತ್ಯಂತ ಸಮೀಪದಿಂದ ಕಂಡು ಜೀವಂತವಾಗಿಯೇ ಅವರು ತಮ್ಮ ಕೃತಿಗಳಲ್ಲೂ ಸೆರೆಹಿಡಿದು ಸೈ ಅನ್ನಿಸಿಕೊಂಡರು.
ಲೇಖನದ ಪೂರ್ಣ ರೂಪ ಇಲ್ಲಿದೆ:

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...
Powered By Blogger