ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Saturday, October 6, 2007

ಇದು ರಾಜಕೀಯ ಕಣ್ರೀ

ಮಾಡಿದರೆ ರಾಜಕೀಯ ಗೌಡರ ತರಹ ಮಾಡಬೇಕು. ತಂದೆಗೆ ತಕ್ಕ ಮಗ ಈ ಕುಮಾರಸ್ವಾಮಿ. ಅಂದು ರಾಜಕೀಯದಲ್ಲಿ ಮೂಲೆಗೆ ಬಿದ್ದ ಗೌಡರನ್ನು ಹೆಗಡೆ ಎತ್ತಿದ್ದೇ ದೊಡ್ಡ ತಪ್ಪಾಯಿತು. ಅಂದು ಗೌಡರ ಮುಖ್ಯಮಂತ್ರಿ ಪದವಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೆಗಡೆಗೆ ಬಿದ್ದ ಧರ್ಮದೇಟುಗಳು ಇಂದಿಗೂ ಮನಸ್ಸಿನಿಂದ ದೂರವಾಗಿಲ್ಲ. ಅದು ಮಾಡಿದ್ದು ಯಾರೋ ಅನ್ನುವುದು ಇಂದು ಅಸಂಗತ.

ಅಂತಹ ವ್ಯಕ್ತಿ ಇಂದು ಯಡಿಯೂರಪ್ಪನವರಿಗೆ; ಅದೃಷ್ಟಕ್ಕೆ ಆ ಧರ್ಮದೇಟು ನೀಡಿಲ್ಲ. ನೀಡಬೇಕಾದ ಜಾಗದಲ್ಲಿ ಏನು ನೀಡಬೇಕೊ ಅದನ್ನು ನೀಡಿಯಾಗಿದೆ. ಅಧಿಕಾರಕ್ಕೆ ಹಪಹಪಿಸುತ್ತಿದ್ದವರಿಗೆ ಅಧಿಕಾರ ಅಷ್ಟು ಸುಲಭದ ತುತ್ತಲ್ಲ. ರಾಮನಾಮ ಜಪಿಸಿದರೆ ಸಾಲದು. ರಾಮನಂತೆ ಇದ್ದರೂ ಸಾಲದು. ಅದಕ್ಕೆ ಇನ್ನು ಏನೇನೊ ಆಗಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಶಹಬ್ಬಾಸ್ ಕುಮಾರಸ್ವಾಮಿ.

ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಜೆಪಿ ಬೆಂಬಲ ವಾಪಸ್: ಸರಕಾರ ಪತನ ಕ್ಷಣಗಣನೆ

"ವಚನಭ್ರಷ್ಟ" ಜೆಡಿಎಸ್ ಅಧಿಕಾರ ಹಸ್ತಾಂತರಿಸಲು ಅಸಹಕಾರ ತೋರಿದ್ದು, ಅದರ ಜತೆಗಿನ ಮೈತ್ರಿ ಮುರಿಯಲು ಬಿಜೆಪಿ ನಿರ್ಧರಿಸಿದೆ. ಒಮ್ಮೆ ಜೆಡಿಎಸ್ ಜತೆ ಕೈಜೋಡಿಸಿ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್, ಮರು ಮೈತ್ರಿಗೆ ನಿರ್ಧಾರ ಮಾಡದೇ ಹೋದಲ್ಲಿ ಇದರೊಂದಿಗೆ ರಾಜ್ಯದಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.

ಇದರೊಂದಿಗೆ 20 ತಿಂಗಳ ಬಿಜೆಪಿ-ಜೆಡಿಎಸ್ ಮದುವೆ ಮುರಿದುಬೀಳುತ್ತಿದ್ದು, ರಾಜ್ಯ ರಾಜಕೀಯದಲ್ಲಿನ ಬಿಕ್ಕಟ್ಟು ಮತ್ತು ಪ್ರಹಸನಕ್ಕೆ ಅಂಕದ ಪರದೆ ಬೀಳಲಿದೆ.

ಚುನಾವಣೆ ಎದುರಿಸಲು ನಾವು ಸಿದ್ಧ ಎಂದು ಘೋಷಿಸಿರುವ ಬಿಜೆಪಿ, ಭಾನುವಾರ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ರಾಜಭವನಕ್ಕೆ ತೆರಳಿ ಬೆಂಬಲ ಹಿಂತೆಗೆದುಕೊಳ್ಳಲಿದೆ.

ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Friday, October 5, 2007

ಕ್ರಿಕೆಟ್ : ಭಾರತ ವಿರುದ್ಧ ಆಸ್ಟ್ರೇಲಿಯಾ ಲೈವ್ ಸ್ಕೋರ್ ಕಾರ್ಡ್

ಹೈದರಾಬಾದ್ , ಶುಕ್ರವಾರ, 5 ಅಕ್ಟೋಬರ್ 2007( 09:30 IST )
ಟಾಸ್ ಗೆದ್ದ ಆಸ್ಟ್ರೇಲಿಯ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದು, ವಿಕೆಟ್ ನಷ್ಟವಿಲ್ಲದೇ ಅದು 4.2 ಓವರುಗಳಲ್ಲಿ 28 ರನ್ ಮಾಡಿದೆ. ಕ್ರೀಸ್‌ನಲ್ಲಿರುವ ಅಡಂ ಗಿಲ್‍ಕ್ರಿಸ್ಟ್ (9), ಮ್ಯಾಥು ಹೆಡನ್ (18) ರನ್ ಮಾಡಿದ್ದಾರೆ.ಸ್ಕೋರ್ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.

Thursday, October 4, 2007

ಸಿಎಂ ಮನೆಯಲ್ಲಿ ಜೆಡಿಎಸ್ ಮಹತ್ವದ ಸಭೆ

ಬಿಜೆಪಿಗೆ ಅಧಿಕಾರ ಹಸ್ತಾಂತರಿಸುವ ವಿವಾದಕ್ಕೆ ಸಂಬಂಧಿಸಿ ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯವರ ಮನೆಯಲ್ಲಿ ಜಾತ್ಯತೀತ ಜನತಾ ದಳದ ತುರ್ತು ಸಭೆ ಆರಂಭಗೊಂಡಿದೆ. ಮೈತ್ರಿಪಕ್ಷಗಳ ನಡುವೆ ಬಿಕ್ಕಟ್ಟು ನಡೆದಿರುವ ಹಿನ್ನೆಲೆಯಲ್ಲಿ ಈ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.

ಒಂದೆಡೆ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿಯವರೇ ಮುಂದುವರಿಯಬೇಕು ಎಂದು ಜೆಡಿಎಸ್ ಪಕ್ಷದ ಬಹುತೇಕ ಶಾಸಕರು ಪಟ್ಟು ಹಿಡಿದಿದ್ದು, ಇದು ಬಿಜೆಪಿಗೆ ಅಧಿಕಾರ ಹಸ್ತಾಂತರವನ್ನು ಸುಲಭವಾಗಿ ನಿರಾಕರಿಸುವ ಒಂದು ತಂತ್ರ ಎಂದೇ ಹೇಳಲಾಗುತ್ತಿದೆ.


ಋಷಿ ಕಪೂರ್ ಪುತ್ರ 'ಸಾಂವರಿಯಾ' ಹೀರೋ

ಕಪೂರ್ ಕುಟುಂಬದಿಂದ ಬಂದವನೆಂಬ ಹೆಮ್ಮೆ: ರಣಬೀರ್ ಕಪೂರ್ ಋಷಿ ಕಪೂರ್ ಪುತ್ರ ರಣಬೀರ್ ಕಪೂರ್ ಅವರು 'ಸಾಂವರಿಯಾ' ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಜಯ್ ಲೀಲಾ ಭನ್ಸಾಲಿಯಂತಹ ಖ್ಯಾತ ನಿರ್ದೇಶಕ ಇರುವ ಈ ಚಿತ್ರ ಸಹಜವಾಗಿಯೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ನವೆಂಬರ್ 9ರಂದು ಈ ಚಿತ್ರ ತೆರೆ ಕಾಣಲಿದೆ. ಈ ಬಗ್ಗೆ ರಣಧೀರ್ ಕಪೂರ್ ಜತೆಗೆ ಮಾತುಕತೆಯ ತುಣುಕುಗಳು ಇಲ್ಲಿವೆ:

ಆರ್‌ಕೆ ಬ್ಯಾನರ್ ಈಗಾಗಲೇ ದೊಡ್ಡ ದೊಡ್ಡ ಚಿತ್ರಗಳನ್ನು ನೀಡಿದೆ. ನಿಮ್ಮ ಪರಿವಾರದಲ್ಲೇ ಹಲವಾರು ಚಿತ್ರ ನಿರ್ದೇಶಕರಿದ್ದಾರೆ. ಹಾಗಿದ್ದೂ ಹೊರಗಿನವರ ಬ್ಯಾನರ್‌ನಡಿಯಲ್ಲೇ ನೀವು ಚಿತ್ರರಂಗಕ್ಕೆ ಕಾಲಿಡಲು ನಿರ್ಧರಿಸಿದ್ದೇಕೆ?


Wednesday, October 3, 2007

ಗಡುವಿನ ಗೊಡವೆ ಬೇಕಿಲ್ಲ: ಮುಖ್ಯಮಂತ್ರಿ

ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿ ಅಂತಿಮ ಗಡುವು ವಿಧಿಸಲಾಗದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಮಧ್ಯರಾತ್ರಿಯವರೆಗೂ ನಡೆದ ಜೆಡಿಎಸ್ ಶಾಸಕಾಂಗ ಪಕ್ಷ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸಚಿವರ ಕ್ರಮವನ್ನು ಟೀಕಿಸಿದರು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ಜೆಡಿಎಸ್‌ಗೆ ಕಾಂಗ್ರೆಸ್ ಬಾಹ್ಯ ಬೆಂಬಲ?

ಹಸ್ತಾಂತರ ಪ್ರಹಸನ: ಬಿಜೆಪಿ ಸಚಿವರ ಸಾಮೂಹಿಕ ರಾಜೀನಾಮೆ

ಉಪಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಸಚಿವರು ಮಂಗಳವಾರ ರಾತ್ರಿ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದು, ಅಕ್ಟೋಬರ್ 5ರವರೆಗೆ ಕಾಯುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಸಚಿವರಿಗೆ ಸಲಹೆ ಮಾಡಿದ್ದಾರೆ.

ಯಡಿಯೂರಪ್ಪ ನೇತೃತ್ವದಲ್ಲಿ 18 ಸಚಿವರು ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ರಾತ್ರಿ 8.15ಕ್ಕೆ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದರು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger