"ಇಲ್ಲಿ ಋಷಿಗಳ ವೇಷ ತೊಟ್ಟವರು ಆರಾಮವಾಗಿ ಸಿಗರೇಟು ಸೇದುತ್ತಾರೆ. ಸೀರೆ

ಉಟ್ಟ ಹುಡುಗ, ಸೆರಗು ಯಾವ ಹೆಗಲಿಗೆಂದು ಗಲಿಬಿಲಿಗೊಳ್ಳುತ್ತಾನೆ. ರೈತನ ವೇಷ ತೊಟ್ಟ ಪೇಟೆ ಹುಡುಗಿ ನಾಚಿಕೆಯಿಂದ ಮುದುಡಿಹೋಗುತ್ತಾಳೆ. ಒಂದರ ಹಿಂದೊಂದು ಪ್ರವೇಶ. ಪರದೆ ಎಳೆಯುವವನೇ ಇಲ್ಲ ! ಚಂಪಕಾವತಿಯ ಎಣ್ಣೆ ಕೊಪ್ಪರಿಗೆಗೆ ಇಲ್ಲಿಂದ ಒಂದೇಒಂದು ಉರುಳು ! ಸ್ವಾಗತವು ನಿಮಗೆ."
ಇವು ಚಂಪಕಾವತಿ ಬ್ಲಾಗಿನ ಹಣೆಬರಹದ ಕೆಳಗೆ ಕಾಣಿಸುವ ಸಾಲುಗಳು. ಇವುಗಳನ್ನು ಓದಿದ ಕೂಡಲೇ ಈ ಬ್ಲಾಗಿನ ಉದ್ದೇಶ ನಮ್ಮ ಮುಂದೆ ಗರಿಗೆದರುತ್ತದೆ. ರಂಗಭೂಮಿ ಕ್ಷೇತ್ರದಲ್ಲಿ ಅಪರಿಮಿತ ಆಸಕ್ತಿ ಹೊಂದಿರುವಂತೆ ತೋರುವ ಸುಧನ್ವಾ ಅವರು ಚಂಪಕಾವತಿಯಲ್ಲಿ (
http://deraje.blogspot.com/) ತಮ್ಮ ಅನುಭವಗಳನ್ನು ತೋಡಿಕೊಳ್ಳುತ್ತಾರೆ ಹಾಗೂ ಚರ್ಚಿಸುತ್ತಾರೆ.
0 comments:
Post a Comment