ಇದೀಗ ಕನ್ನಡ ಬ್ಲಾಗ್ ಲೋಕ ಸಮೃದ್ಧಗೊಳ್ಳುತ್ತಿರುವಂತೆ ಬ್ಲಾಗ್

ವೈವಿಧ್ಯತೆಗಳೂ ಕಣ್ಣಿಗೆ ಬೀಳುತ್ತಿವೆ. ಕನ್ನಡ ಬ್ಲಾಗ್‌ಗಳಲ್ಲಿ ಪ್ರಸಕ್ತ ಆತ್ಮಕಥನಗಳೇ ಹೆಚ್ಚಾಗಿರುವುವಾದರೂ ಕೆಲವಾರು ಬ್ಲಾಗುಗಳು ಸರಿಯಾದ, ಒಂದು ಉದ್ದೇಶವಿರುವ ಜಾಡು ಹಿಡಿದುಕೊಂಡಿವೆ. ಇಂತಹ ಬ್ಲಾಗುಗಳಲ್ಲಿ 'ಏನ್ ಗುರು' (
http://enguru.blogspot.com/) ಎಂಬ ಬ್ಲಾಗ್ ಕೂಡ ಒಂದು.
ಕನ್ನಡಪರ ಕಾಳಜಿ ಪ್ರಮುಖವಾಗಿ ವ್ಯಕ್ತವಾಗುವ 'ಏನ್ ಗುರು' ಎಂಬ ಬ್ಲಾಗ್ ಹೆಸರಿನಿಂದಲೇ ಅದರಲ್ಲಿ ಯಾವ ಶೈಲಿಯ ಬರಹಗಳು ಇರುತ್ತವೆ ಎಂಬುದನ್ನು ಅಂದಾಜಿಸಬಹುದು. "ಏನ್ ಗುರು" ಬ್ಲಾಗಿಗರು ತಮ್ಮ ಕನ್ನಡಪರ ವಾದವನ್ನು ಸ್ವಲ್ಪ ಉಗ್ರವಾಗಿಯೇ ಪ್ರತಿಭಟಿಸುತ್ತಾರಾದರೂ ನಿಮಗೆ ಎಲ್ಲೂ ಅತಿ ಅನಿಸುವುದಿಲ್ಲ, ಅಥವಾ ತರ್ಕ ಮೀರಿ ದೂರ ಹೋಗುವುದಿಲ್ಲ.
0 comments:
Post a Comment