ಆಹಾ ! ಜಗತ್ತಿನಲ್ಲಿ ಇನ್ನೂ ಎಂತೆಂತಹ ಪರಿಹಾರಗಳನ್ನು ಮನುಷ್ಯ ಶೋಧಿಸುತ್ತಾನೆ ಎಂದರೆ

ಲೆಕ್ಕವಿಲ್ಲ. ಅದ್ಕೆ ಮನುಷ್ಯ ಎನ್ನುವವನಿಗೆ ಬುದ್ಧಿ ಹೆಚ್ಚು ಎಂದು ಹೇಳುವುದು. ಅಕಸ್ಮಾತ್ ಸರಿರಾತ್ರಿಯಲ್ಲಿ ಹೋಗುವಾಗ ನಾಯಿಯೊಂದು ಕಚ್ಚಿತು ಅಂತಿಟ್ಕೊಳ್ಳಿ. ಆಗ ನೀವೇನು ಮಾಡುತ್ತಿರಿ ? ಡಾಕ್ಟರ್ ಹತ್ತಿರ ಹೋಗಿ ಇಂಜಕ್ಷನ್ ಮಾಡಿಸಿಕೊಳ್ಳುತ್ತೀರಿ. ಬಹುಶಃ ಅದು ಹುಚ್ಚು ನಾಯಿ ಆಗಿದ್ದರೆ ಹೊಕ್ಕಳ ಸುತ್ತ ಭರ್ತಿ ಹದಿನಾಲ್ಕು ಇಂಜಕ್ಷನ್ ಮಾಡಿಸ್ಕೋಬೇಕು. ಬಿಡದ ಕರ್ಮ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೆಬೇಕು.
ಇಲ್ಲಿದೆ ಪರಿಹಾರ, ಲಕ್ನೋದಲ್ಲಿ, ಅಲ್ಲಿಯ ಒಂದು ಚರಂಡಿಯಲ್ಲಿ ಸ್ನಾನ ಮಾಡಿದರೆ ಸಾವಿರ ರೂಪಾಯಿಗಳು ಉಳೀತದೆ. ಹೆಚ್ಚಾಗಿ ಹೊಕ್ಕಳ ಇಂಜಕ್ಷನ್ ನರಕದಿಂದ ನೀವು ಬೈಪಾಸ್ ಆಗಬಹುದು. ಲಕ್ನೋದಿಂದ ಫೈಜಾಬಾದ್ ಸೇತುವೆ ಕೆಳಗೆ ಇರುವ ಈ ಹಳ್ಳಕ್ಕೆ ಕುಕ್ರೇಲ್ ನಾಲಾ ಎಂದು ಹೆಸರು. ಅದಕ್ಕೆ ನಾವಿಟ್ಟ ಹೆಸರು ಚರಂಡಿ ಎಂದು. ಇದಕ್ಕಿಂತ ಉತ್ತಮ ಶಬ್ದ ನಮ್ಮಲಿಲ್ಲ. ಇದ್ದರೆ ನೀವೆ ನಾಮಕರಣ ಮಾಡಿಬಿಡಿ.
0 comments:
Post a Comment