
ಅಂತಹ ನಂಬಿಕೆಯಲ್ಲಿ ಕಾಲಸರ್ಪ ಯೋಗವೂ ಒಂದು. ನಂಬಿಕೆ, ಅಪನಂಬಿಕೆಗಳ ನಡುವೆ ಸಾಗುತ್ತಿರುವ ನಮ್ಮ ಪಯಣ ಸದ್ಯ ತ್ರ್ಯಂಬಕೇಶ್ವರ ಎಂಬ ಗ್ರಾಮಕ್ಕೆ ಬಂದು ನಿಂತಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಗ್ರಾಮ ಕಾಲ ಸರ್ಪ ಯೋಗ ವಿಮೋಚನೆಗೆ ಪ್ರಸಿದ್ದಿ ಪಡೆದಿದೆ ಎಂಬ ಪ್ರತೀತಿ ಇದೆ. ಗ್ರಾಮಕ್ಕೆ ತೆರಳಿ ಅಲ್ಲಿ ನಡೆಯುವ ಸರ್ಪದೋಷ ವಿಮೋಚನೆಗಳನ್ನು ಕಣ್ಣಾರೆ ಕಾಣಬೇಕು ಎಂಬ ಉತ್ಸಾಹ ಮೇಲಾಗಿ ತಣಿಯದ ಕುತೂಹಲ ನಮ್ಮನ್ನಿಂದು ತ್ರ್ಯಂಬಕ ಗ್ರಾಮಕ್ಕೆ ಬರುವಂತೆ ಮಾಡಿದೆ. ಗ್ರಾಮಕ್ಕೆ ಹೋಗುವುದಕ್ಕೆ ಎಂದು ನಾವು ಟ್ಯಾಕ್ಸಿಗೆ ಕಾಯುತ್ತಿದ್ದೆವು. ಅಲ್ಲಿಗೆ ಬಂದ ಒಂದು ಟ್ಯಾಕ್ಸಿಯನ್ನೇರಿ ತ್ರ್ಯಂಬಕದತ್ತ ಸಾಗಿತು ನಮ್ಮ ನಂಬಿಕೆ, ಅಪನಂಬಿಕೆಗಳ ಪಯಣ...
0 comments:
Post a Comment