
ಈಕೆ ಬಾಲನಟಿಯಾಗಿ ತನ್ನ 7ನೇ ವರ್ಷದಲ್ಲಿ ಕಿರುತೆರೆ ನಟಿಯಾಗಿ ಬಣ್ಣದ ಬದುಕಿಗೆ ಪ್ರವೇಶಿಸಿದವಳು. ಡಾ.ಗಿರಿಜಮ್ಮ ಅವರ ಧಾರಾವಾಹಿ "ಸುಪ್ತಮನಸ್ಸಿನ ಸಪ್ತಸ್ವರಗಳು", ಸುನೀಲ್ ಕುಮಾರ್ ದೇಸಾಯಿಯವರ ಚಿತ್ರ "ಪರ್ವ"ದಲ್ಲಿ ಸಣ್ಣದೊಂದು ಪಾತ್ರ, ನಾಗಾಭರಣ ಅವರ "ಗೆಳತಿ" ಧಾರಾವಾಹಿ, ವೈಶಾಲಿ ಕಾಸರವಳ್ಳಿಯವರ "ಮೂಕರಾಗ", ಗಿರೀಶ್ ಕಾಸರವಳ್ಳಿ ನಿರ್ದೇಶನದ "ಗೃಹಭಂಗ", ಯೋಗರಾಜ ಭಟ್ಟರ "ಎಲ್ಲೋ ಜೋಗಪ್ಪ ನಿನ್ನ ಅರಮನೆ", ಹೀಗೆ ವಿವಿಧ ಧಾರಾವಾಹಿಗಳಲ್ಲಿ ತನ್ನ ನೈಜ ಅಭಿನಯದಿಂದಾಗಿ ಎಸ್.ನಾರಾಯಣ್ ಗಮನ ಸೆಳೆದಳು. ಪರಿಣಾಮ ಗೋಲ್ಡನ್ ಸ್ಟಾರ್ ಗಣೇಶ್‌ಗೆ ನಾಯಕಿಯಾಗುವ ಅವಕಾಶ.
ಇಂದು ನಟಿ ಅಮೂಲ್ಯ ಅತ್ಯಂತ ಬ್ಯುಸಿ. ಬೆಳಗ್ಗೆ ಎಂಟು ಗಂಟೆಯಿಂದ ಶಾಲೆ. ಅದಾದ ಬಳಿಕ ಶೂಟಿಂಗ್, ಜತೆಗೆ ಅಭಿಮಾನಿಗಳ ದೂರವಾಣಿ ಹಾರೈಕೆ. ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮದವರ ಸಂದರ್ಶನ ಹೀಗೆ. ಶಾಲೆಗೆ ಹೊರಡುವ ತರಾತುರಿಯಲ್ಲಿ ವೆಬ್ ದುನಿಯಾದೊಂದಿಗೆ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದು ಹೀಗೆ:
ಚಿಕ್ಕ ವಯಸ್ಸಿನಲ್ಲೇ ನಟಿಯಾಗಿ ನಾಯಕಿಯಾಗಿರುವ ಬಗ್ಗೆ ಏನನಿಸುತ್ತದೆ ?
ತುಂಬಾನೇ ಖುಷಿಯಾಗುತ್ತಿದೆ. ನಟಿಯಾಗಿ ನಟಿಸಿದ ಮೊದಲ ಚಿತ್ರವೇ ಯಶಸ್ವಿಯಾಗಿದೆ. ಇದಕ್ಕೆ ಪ್ರೋತ್ಸಾಹಿಸಿದ ನಿರ್ದೇಶಕ ನಾರಾಯಣ್ ಹಾಗೂ ನನ್ನನ್ನು ಪ್ರೋತ್ಸಾಹಿಸಿದ ಪೋಷಕರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಈ ವೆಬ್ ದುನಿಯಾ ಕನ್ನಡ ಕಥೆಯ ಸಂಪೂರ್ಣ ಆವೃತ್ತಿಯನ್ನು ಓದಲು, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
1 comments:
she is cute....
Post a Comment