ಮೈಸೂರು ದಸರಾ ವೈಭವದ ರಸಮಯ ಕ್ಷಣಗಳ ವೀಕ್ಷಣೆ ಲಭ್ಯ. ವಿಡಿಯೋಗಾಗಿ ನಿರೀಕ್ಷಿಸಿ.
ಪೋಟೋಗ್ಯಾಲರೀಗಾಗಿ ಇಲ್ಲಿ ಕ್ಲಿಕ್ ಮಾಡಿ
Friday, October 19, 2007
ಚಕ್ ದೇಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ
ಶಮಿತ್ ಅಮಿನ್ ನಿರ್ಧೇಶನ ಮತ್ತು ಶಾಹರುಖ್ ಖಾನ್
ಅಭಿನಯದ ಬಾಲಿವುಡ್ ಸುಪರ್ ಹಿಟ್ ಚಿತ್ರ ಚಕ್ ದೇ ಇಂಡಿಯಾ ಈ ಬಾರಿಯ ಆಸ್ಟ್ರೇಲಿಯನ್ ಇಂಡಿಯನ್ ಫಿಲ್ಮ್ ಪೆಸ್ಟಿವಲ್ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಆಸ್ಟ್ರೇಲಿಯದ ನೆಲದಲ್ಲಿ ನಡೆದ ವಿಶ್ವಕಪ್ ಹಾಕಿ ಟೂರ್ನಿಯ ಕಥಾ ಚಿತ್ರವನ್ನು ಒಳಗೊಂಡಿರುವ ಚಿತ್ರವು ಸಿಡ್ನಿ, ಮೇಲ್ಬೋರ್ನ್ಗಳಲ್ಲಿ ಚಿತ್ರಿಕರಣಗೊಂಡಿದೆ. ಚಕ್ ದೇ ಇಂಡಿಯಾ ಚಿತ್ರವು 2002 ರ ಮ್ಯಾಂಚೆಸ್ಟರ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಗೆಲುವಿನ ಆಧಾರದ ಮೇಲೆ ನಿರ್ಮಾಣವಾಗಿದೆ.
ಅಭಿನಯದ ಬಾಲಿವುಡ್ ಸುಪರ್ ಹಿಟ್ ಚಿತ್ರ ಚಕ್ ದೇ ಇಂಡಿಯಾ ಈ ಬಾರಿಯ ಆಸ್ಟ್ರೇಲಿಯನ್ ಇಂಡಿಯನ್ ಫಿಲ್ಮ್ ಪೆಸ್ಟಿವಲ್ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.ಆಸ್ಟ್ರೇಲಿಯದ ನೆಲದಲ್ಲಿ ನಡೆದ ವಿಶ್ವಕಪ್ ಹಾಕಿ ಟೂರ್ನಿಯ ಕಥಾ ಚಿತ್ರವನ್ನು ಒಳಗೊಂಡಿರುವ ಚಿತ್ರವು ಸಿಡ್ನಿ, ಮೇಲ್ಬೋರ್ನ್ಗಳಲ್ಲಿ ಚಿತ್ರಿಕರಣಗೊಂಡಿದೆ. ಚಕ್ ದೇ ಇಂಡಿಯಾ ಚಿತ್ರವು 2002 ರ ಮ್ಯಾಂಚೆಸ್ಟರ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಗೆಲುವಿನ ಆಧಾರದ ಮೇಲೆ ನಿರ್ಮಾಣವಾಗಿದೆ.
Thursday, October 18, 2007
ನಟ ಚಿರಂಜೀವಿ ಮಗಳ ಸಿನಿಮಯ ಮದುವೆ
ಆಂಧ್ರಪ್ರದೇಶದಾದ್ಯಂತ ತಮ್ಮ ಅದ್ಭುತ ನಟನೆಯಿಂದ ಸೂಪರ್ ಸ್ಟಾರ್
ಪಟ್ಟ ಪಡೆದ ನಟ ಚಿರಂಜೀವಿಯ ಮಗಳು ಶ್ರೀಜಾ ಮನೆಯಿಂದ ಓಡಿ ಹೋಗಿ ತನ್ನ ಸ್ನೇಹಿತ ಶಿರಿಶ್ ಭಾರಧ್ವಜ್ ಅವರನ್ನು ನಗರದ ಆರ್ಯ ಸಮಾಜದ ಮಂದಿರದಲ್ಲಿ ಮದುವೆಯಾಗಿದ್ದಾರೆ.
ಪಟ್ಟ ಪಡೆದ ನಟ ಚಿರಂಜೀವಿಯ ಮಗಳು ಶ್ರೀಜಾ ಮನೆಯಿಂದ ಓಡಿ ಹೋಗಿ ತನ್ನ ಸ್ನೇಹಿತ ಶಿರಿಶ್ ಭಾರಧ್ವಜ್ ಅವರನ್ನು ನಗರದ ಆರ್ಯ ಸಮಾಜದ ಮಂದಿರದಲ್ಲಿ ಮದುವೆಯಾಗಿದ್ದಾರೆ.ನಮ್ಮ ಪ್ರೇಮಕ್ಕೆ ತಂದೆ ತಾಯಿಗಳ ವಿರೋಧ ವ್ಯಕ್ತಪಡಿಸಿದರಲ್ಲದೇ ಒಂದು ವರ್ಷಗಳ ಕಾಲ ಮನೆಯಲ್ಲಿ ಕೂಡಿಹಾಕಿದ್ದರು ಎಂದು ಶ್ರೀಜಾ ಆರೋಪಿಸಿದ್ದಾರೆ.
ಕರೀನಾ ಸೈಫ್ ಪ್ರೇಮದ ಅಲೆಯಲ್ಲಿ
ಬಾಲಿವುಡ್ ಚಿತ್ರರಂಗದ ಖ್ಯಾತ ನಟ ರಾಜಕುವರ ಸೈಫ್
ಅಲಿಖಾನ್ ಬಾಲಿವುಡ್ ಬೆಡಗಿ ಖ್ಯಾತ ನಟಿ ಕರೀನಾ ಕಪೂರ್ ಅವರೊಂದಿಗೆ ಪ್ರೇಮಸಂಬಂಧವಿದೆ ಎಂದು ಕರೀನಾಳ ಸಮ್ಮುಖದಲ್ಲಿ ಸೈಫ್ ಲಕ್ಮೆ ಫ್ಯಾಶನ್ ವೀಕ್ ಸಮಾರಂಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಸುದ್ದಿಗಳ ಉಹಾಪೋಹಗಳಿಗೆ ತೆರೆ ಎಳೆಯಲು ಬಯಸಿದ್ದೆನೆ ಎಂದು ಹೇಳಿದ್ದಾರೆ. ಬಾಲಿವುಡ್ ಉದ್ಯಮದ ಹೆಸರಾಂತ ಫ್ಯಾಶನ್ ಡಿಜೈನರ್ ಮನೀಶ್ ಮಲ್ಹೋತ್ರಾ ಅವರು ಆಯೋಜಿಸಿದ ಫ್ಯಾಶನ್ ಕರೀನಾ ಮತ್ತು ಸೈಫ್ ಪರಸ್ಪರ ಆಲಿಂಗಿಸಿಕೊಂಡು ಭಾಗಿಯಾಗಿರುವುದು ಎಲ್ಲರ ಹುಬ್ಬೇರಲು ಕಾರಣವಾಗಿದೆ.
ಅಲಿಖಾನ್ ಬಾಲಿವುಡ್ ಬೆಡಗಿ ಖ್ಯಾತ ನಟಿ ಕರೀನಾ ಕಪೂರ್ ಅವರೊಂದಿಗೆ ಪ್ರೇಮಸಂಬಂಧವಿದೆ ಎಂದು ಕರೀನಾಳ ಸಮ್ಮುಖದಲ್ಲಿ ಸೈಫ್ ಲಕ್ಮೆ ಫ್ಯಾಶನ್ ವೀಕ್ ಸಮಾರಂಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಕಳೆದ ಹಲವು ತಿಂಗಳುಗಳಿಂದ ಸುದ್ದಿಗಳ ಉಹಾಪೋಹಗಳಿಗೆ ತೆರೆ ಎಳೆಯಲು ಬಯಸಿದ್ದೆನೆ ಎಂದು ಹೇಳಿದ್ದಾರೆ. ಬಾಲಿವುಡ್ ಉದ್ಯಮದ ಹೆಸರಾಂತ ಫ್ಯಾಶನ್ ಡಿಜೈನರ್ ಮನೀಶ್ ಮಲ್ಹೋತ್ರಾ ಅವರು ಆಯೋಜಿಸಿದ ಫ್ಯಾಶನ್ ಕರೀನಾ ಮತ್ತು ಸೈಫ್ ಪರಸ್ಪರ ಆಲಿಂಗಿಸಿಕೊಂಡು ಭಾಗಿಯಾಗಿರುವುದು ಎಲ್ಲರ ಹುಬ್ಬೇರಲು ಕಾರಣವಾಗಿದೆ.
Wednesday, October 17, 2007
ನಟಿಗೆ ಕಪಾಳಮೋಕ್ಷ: ನಿರ್ದೇಶಕನಿಗೆ ನಿಷೇಧ
ಶೂಟಿಂಗ್ ವೇಳೆ ನಟಿಯೊಬ್ಬಳ ಕಪಾಳಮೋಕ್ಷ ಮಾಡಿದಲ್ಲಿ, ಆಕೆಯಿಂದ ಅತ್ಯುತ್ತಮ ನಟನೆ ನಿರೀಕ್ಷಿಸಬಹುದು ಎಂಬ ಚಿತ್ರ
ನಿರ್ದೇಶಕರೊಬ್ಬರ ಲೆಕ್ಕಾಚಾರ ಅವರಿಗೇ ಮುಳುವಾಗಿದೆ.ಈ ಘಟನೆ ನಡೆದದ್ದು ಮಿರುಗಂ (ಮೃಗಂ) ಚಿತ್ರದ ಚಿತ್ರೀಕರಣದ ಸಂದರ್ಭ ಎನ್ನುವುದು ಮಾತ್ರ ಕಾಕತಾಳೀಯ.
ನಿರ್ದೇಶಕರೊಬ್ಬರ ಲೆಕ್ಕಾಚಾರ ಅವರಿಗೇ ಮುಳುವಾಗಿದೆ.ಈ ಘಟನೆ ನಡೆದದ್ದು ಮಿರುಗಂ (ಮೃಗಂ) ಚಿತ್ರದ ಚಿತ್ರೀಕರಣದ ಸಂದರ್ಭ ಎನ್ನುವುದು ಮಾತ್ರ ಕಾಕತಾಳೀಯ.ನವನಟಿ ಪದ್ಮಪ್ರಿಯಾ ಎಂಬಾಕೆಗೆ ಹೊಡೆದಿದ್ದಕ್ಕಾಗಿ ಚಿತ್ರ ನಿರ್ದೇಶಕ ಸಾಮಿ ಎಂಬವರು ಒಂದು ವರ್ಷ ಕಾಲ ಯಾವುದೇ ಚಿತ್ರ ನಿರ್ದೇಶಿಸುವುದನ್ನು ತಮಿಳು ಚಿತ್ರೋದ್ಯಮ ನಿಷೇಧಿಸಿದೆ.
ಅಕ್ಷಯ್-ಕತ್ರೀನಾ ಜೋಡಿಯ ಮೋಡಿ
ಅಕ್ಷಯ್ ಕುಮಾರ್ ಯಾವಾಗಲೂ ಯಾವುದೇ ನಾಯಕಿ ನಟಿ ಜತೆ ನಟಿಸುತ್ತಲೇ
ಇರುತ್ತಾರೆ. ವೃತ್ತಿ ಜೀವನದ ಆರಂಭದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಜತೆ ಸೇರಿ ಸಾಕಷ್ಟು ಚಿತ್ರದಲ್ಲಿ ಪಾಲ್ಗೊಂಡಿದ್ದರು.
ಆನಂತರ ಅಕ್ಷಯ್ ಮತ್ತು ಪ್ರಿಯಾಂಕಾ ಚೋಪ್ರಾ ಜೋಡಿಯ ಹಲವು ಚಿತ್ರಗಳು ಬಾಕ್ಸಾಫೀಸ್ನಲ್ಲಿ ಯಶ ಕಂಡವು. ಅಕ್ಷಯ್ ಮತ್ತು ಪ್ರಿಯಾಂಕಾ ಜೋಡಿಯು ತೀರಾ ಹತ್ತಿರವಾಗುತ್ತಿದೆ ಎಂಬ ಸುದ್ದಿ ಟ್ವಿಂಕಲ್ ಖನ್ನಾ ಕಿವಿಗೆ ಬಿದ್ದಾಗ, ಆಕೆ ಅಕ್ಷಯ್ ಕುಮಾರ್ ಪ್ರಿಯಾಂಕಾ ಜತೆ ನಟಿಸುವ ಸಾಧ್ಯತೆಯ ಮಾರ್ಗ ಬಂದ್ ಮಾಡಿಸಿದರು.
ಇರುತ್ತಾರೆ. ವೃತ್ತಿ ಜೀವನದ ಆರಂಭದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಜತೆ ಸೇರಿ ಸಾಕಷ್ಟು ಚಿತ್ರದಲ್ಲಿ ಪಾಲ್ಗೊಂಡಿದ್ದರು.ಆನಂತರ ಅಕ್ಷಯ್ ಮತ್ತು ಪ್ರಿಯಾಂಕಾ ಚೋಪ್ರಾ ಜೋಡಿಯ ಹಲವು ಚಿತ್ರಗಳು ಬಾಕ್ಸಾಫೀಸ್ನಲ್ಲಿ ಯಶ ಕಂಡವು. ಅಕ್ಷಯ್ ಮತ್ತು ಪ್ರಿಯಾಂಕಾ ಜೋಡಿಯು ತೀರಾ ಹತ್ತಿರವಾಗುತ್ತಿದೆ ಎಂಬ ಸುದ್ದಿ ಟ್ವಿಂಕಲ್ ಖನ್ನಾ ಕಿವಿಗೆ ಬಿದ್ದಾಗ, ಆಕೆ ಅಕ್ಷಯ್ ಕುಮಾರ್ ಪ್ರಿಯಾಂಕಾ ಜತೆ ನಟಿಸುವ ಸಾಧ್ಯತೆಯ ಮಾರ್ಗ ಬಂದ್ ಮಾಡಿಸಿದರು.
Tuesday, October 16, 2007
ರಾಮನಿಗಾಗಿ ಮಿಡಿಯಿತೇ ಶಿವಲಿಂಗ ?
ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಲಖ್ನೋದಲ್ಲಿನ ಶಿವಲಿಂಗವೊಂದು ರಾಮ
ಕಟ್ಟಿದ ಸೇತುವೆಗೆ ಧಕ್ಕೆ ಬರುವ ಸೂಚನೆ ಬರುತ್ತಲೇ ತನ್ನ ಬಣ್ಣ ಬದಲಾಯಿಸಿದೆ. ಹಾಗಂತ ಜನಾ ಹೇಳತೊಡಗಿದ್ದಾರೆ. ಲಖ್ನೋದಲ್ಲಿನ ಶಿವಲಿಂಗ ಬಣ್ಣ ಬದಲಾಯಿಸುವ ಮೊದಲು ವಾರಾಣಸಿಯಲ್ಲಿನ ಶಿವಲಿಂಗಗಳು ತಮ್ಮ ಬಣ್ಣ ಬದಲಾಯಿಸಿದ್ದವು. ಒಂದೇ ದಿನದಲ್ಲಿ ಎಲ್ಲ ಲಿಂಗಗಳ ಬಣ್ಣ ಬದಲಾಗಿದ್ದು, ಎಲ್ಲರ ಹುಬ್ಬುಗಳು ಮೇಲೇರುವಂತೆ ಮಾಡಿವೆ.
ಕೆಲ ವರ್ಷಗಳ ಇಂತಹುದೇ ಒಂದೆರಡು ಘಟನೆಗಳು ನಡೆದಿದ್ದವು. ಮೊದಲು ಗಣಪತಿ ಹಾಲು ಕುಡಿದಿದ್ದು, ನಂತರ ಮುಂಬೈನಲ್ಲಿ ಸಮುದ್ರದ ನೀರು ಸಿಹಿಯಾಗಿದ್ದು, ವಿಚಿತ್ರ ಘಟನೆಗಳು.
ಕಟ್ಟಿದ ಸೇತುವೆಗೆ ಧಕ್ಕೆ ಬರುವ ಸೂಚನೆ ಬರುತ್ತಲೇ ತನ್ನ ಬಣ್ಣ ಬದಲಾಯಿಸಿದೆ. ಹಾಗಂತ ಜನಾ ಹೇಳತೊಡಗಿದ್ದಾರೆ. ಲಖ್ನೋದಲ್ಲಿನ ಶಿವಲಿಂಗ ಬಣ್ಣ ಬದಲಾಯಿಸುವ ಮೊದಲು ವಾರಾಣಸಿಯಲ್ಲಿನ ಶಿವಲಿಂಗಗಳು ತಮ್ಮ ಬಣ್ಣ ಬದಲಾಯಿಸಿದ್ದವು. ಒಂದೇ ದಿನದಲ್ಲಿ ಎಲ್ಲ ಲಿಂಗಗಳ ಬಣ್ಣ ಬದಲಾಗಿದ್ದು, ಎಲ್ಲರ ಹುಬ್ಬುಗಳು ಮೇಲೇರುವಂತೆ ಮಾಡಿವೆ.ಕೆಲ ವರ್ಷಗಳ ಇಂತಹುದೇ ಒಂದೆರಡು ಘಟನೆಗಳು ನಡೆದಿದ್ದವು. ಮೊದಲು ಗಣಪತಿ ಹಾಲು ಕುಡಿದಿದ್ದು, ನಂತರ ಮುಂಬೈನಲ್ಲಿ ಸಮುದ್ರದ ನೀರು ಸಿಹಿಯಾಗಿದ್ದು, ವಿಚಿತ್ರ ಘಟನೆಗಳು.
Monday, October 15, 2007
ವಿಶಿಗೆ ಕಿರುಕುಳದ ಸ್ವಾಗತ
ವಿಶ್ವಚಾಂಪಿಯನ್ ಪಟ್ಟ ಗೆದ್ದು ಸ್ವದೇಶಕ್ಕೆ ಮರಳಿದ ಗ್ರ್ಯಾಂಡ್ ಮಾಸ್ಟರ್
ವಿಶ್ವನಾಥನ್ ಅವರಿಗೆ ಅದ್ದೂರಿಯ ಸ್ವಾಗತ ದೊರೆಯುವ ಬದಲು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಕಿರುಕುಳ ಸ್ವಾಗತ ಸಿಕ್ಕಿತು.
ವಿಶ್ವನಾಥನ್ ಅವರಿಗೆ ಅದ್ದೂರಿಯ ಸ್ವಾಗತ ದೊರೆಯುವ ಬದಲು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಕಿರುಕುಳ ಸ್ವಾಗತ ಸಿಕ್ಕಿತು.ಭಾರತದ ಪ್ರಮುಖ ಐಟಿ ಶಿಕ್ಷಣ ಸಂಸ್ಥೆ ಆನಂದ್ ಅವರ ಸ್ವಾಗತದ ಪ್ರಾಯೋಜಕತ್ವದ ಜವಾಬ್ದಾರಿ ವಹಿಸಿಕೊಂಡಿತ್ತು. ವಿಶೇಷ ಎಂದರೆ ಅದೇ ಸಂಸ್ಥೆಯ ಪ್ರಮುಖ ರಾಯಭಾರಿಯಾಗಿ ಆನಂದ್ ಗುರುತಿಸಿಕೊಂಡಿದ್ದಾರೆ.
Saturday, October 13, 2007
ನಮಾಜ್ಗಿಂತ ಮೊದಲು ಸದಕ್-ಎ-ಫಿತ್ರ್ ಪೂರ್ತಿಗೊಳಿಸಿ
ರಂಜಾನ್ ಹಬ್ಬ ಮಾನವರೆಲ್ಲರೂ ಸರಿಸಮಾನರು
ಎನ್ನುವ ಸಂದೇಶವನ್ನು ಸಾರುತ್ತದೆ. ಜನರು ಪರಸ್ಪರ ಸಂತೋಷದಲ್ಲಿ ಭಾಗಿಯಾಗಿ, ಕಷ್ದದಲ್ಲಿದ್ದವರಿಗೆ ತಮ್ಮಿಂದ ಆದಷ್ಟು ಸಹಾಯ ಹಸ್ತ ನೀಡಿ ಪ್ರತಿಯೊಬ್ಬ ಬಡವರು ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುತ್ತದೆ.
ಪೈಗಂಬರ್ ಹಜರತ್ ಮೊಹಮ್ಮದ್ ಅವರು ಸದಕ್- ಎ- ಫಿತ್ರ್ ಅನ್ನು ಅವಶ್ಯಕ ದಾನವೆಂದು ಕರೆದಿದ್ದಾರೆ. ಈ ದಾನವನ್ನು ರಂಜಾನ್ ಉಪವಾಸ ಮುಗಿದ ಮೇಲೆ ನೀಡಲಾಗುತ್ತದೆ. ಈ ದಾನವನ್ನು ಅನ್ಯಾಯ ಮತ್ತು ಅನವಶ್ಯಕ ಮಾತುಗಳಿಂದ ದೂರವಿರಲು ನೀಡಲಾಗುತ್ತದೆ.
ಎನ್ನುವ ಸಂದೇಶವನ್ನು ಸಾರುತ್ತದೆ. ಜನರು ಪರಸ್ಪರ ಸಂತೋಷದಲ್ಲಿ ಭಾಗಿಯಾಗಿ, ಕಷ್ದದಲ್ಲಿದ್ದವರಿಗೆ ತಮ್ಮಿಂದ ಆದಷ್ಟು ಸಹಾಯ ಹಸ್ತ ನೀಡಿ ಪ್ರತಿಯೊಬ್ಬ ಬಡವರು ಹಬ್ಬವನ್ನು ಆಚರಿಸುವಂತೆ ನೋಡಿಕೊಳ್ಳಬೇಕು ಎನ್ನುವ ಸಂದೇಶವನ್ನು ಸಾರುತ್ತದೆ.ಪೈಗಂಬರ್ ಹಜರತ್ ಮೊಹಮ್ಮದ್ ಅವರು ಸದಕ್- ಎ- ಫಿತ್ರ್ ಅನ್ನು ಅವಶ್ಯಕ ದಾನವೆಂದು ಕರೆದಿದ್ದಾರೆ. ಈ ದಾನವನ್ನು ರಂಜಾನ್ ಉಪವಾಸ ಮುಗಿದ ಮೇಲೆ ನೀಡಲಾಗುತ್ತದೆ. ಈ ದಾನವನ್ನು ಅನ್ಯಾಯ ಮತ್ತು ಅನವಶ್ಯಕ ಮಾತುಗಳಿಂದ ದೂರವಿರಲು ನೀಡಲಾಗುತ್ತದೆ.
Thursday, October 11, 2007
ರೋಗಿಯ ಹೃದಯದಲ್ಲಿ ಸ್ಕ್ರೂ ಬಿಟ್ಟ ವೈದ್ಯರು
ರಾಷ್ಟ್ರದ ಪ್ರಮುಖ ವೈದ್ಯ ವಿಜ್ಞಾನ ಸಂಸ್ಥೆ ಎಂದು ಪ್ರಖ್ಯಾತಿ ಪಡೆದಿರುವ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 75 ವರ್ಷದ ರೋಗಿಯೊಬ್ಬನ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ವೈದ್ಯರ ನಿರ್ಲಕ್ಷ್ಯದ ಕಾರಣ ರೋಗಿಯ ಹೃದಯದಲ್ಲಿ ಸ್ಕ್ರೂ ಒಂದು ಉಳಿದ ಪರಿಣಾಮವಾಗಿ ಮೃತಪಟ್ಟಿದ್ದು. ಶಸ್ತ್ರಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಎಸಗಿದ ವೈದ್ಯನನ್ನು ಅಮಾನತುಗೊಳಿಸಲಾಗಿದೆ.
ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 75 ವರ್ಷದ ಹೃದಯ ರೋಗಿಯೋರ್ವನ ಬೈಪಾಸ್ ಶಸ್ತ್ರ ಚಿಕಿತ್ಸೆ ನೆರೆವೆರಿಸುವ ಸಮಯದಲ್ಲಿ ಹೃದಯದಲ್ಲಿ ಸ್ಕ್ರೂ ಒಂದನ್ನು ಬಿಟ್ಟು ರೋಗಿಯ ಸಾವಿಗೆ ಕಾರಣರಾಗಿದ್ದಾರೆ.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 75 ವರ್ಷದ ಹೃದಯ ರೋಗಿಯೋರ್ವನ ಬೈಪಾಸ್ ಶಸ್ತ್ರ ಚಿಕಿತ್ಸೆ ನೆರೆವೆರಿಸುವ ಸಮಯದಲ್ಲಿ ಹೃದಯದಲ್ಲಿ ಸ್ಕ್ರೂ ಒಂದನ್ನು ಬಿಟ್ಟು ರೋಗಿಯ ಸಾವಿಗೆ ಕಾರಣರಾಗಿದ್ದಾರೆ.
ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಭಾರತಕ್ಕೆ ಹೀನಾಯ ಸೋಲು
ಭಾರತೀಯ ಬ್ಯಾಟ್ಸ್ಮನ್ಗಳ ದಯೆ, ಮಿಚೆಲ್ ಜಾನ್ಸನ್ ಆಶಿರ್ವಾದ ಮತ್ತು ಅಡಂ
ಗಿಲ್ಕ್ರಿಸ್ಟ್ ಬೆಂಬಲದ ಮೇಲೆ ಟೀಮ್ ಇಂಡಿಯಾ ತಂಡವು ಆಸ್ಟ್ರೇಲಿಯಾ ವಿರುದ್ಧ ವಡೋದರಾದಲ್ಲಿ ನಡೆದ ಸರಣಿಯ ಐದನೆ ಏಕದಿನ ಪಂದ್ಯದಲ್ಲಿ 9 ವಿಕೆಟ್ಗಳ ಭಾರಿ ಅಂತರದಿಂದ ಸೋಲು ಅನುಭವಿಸಿತು.
ಆಸ್ಟ್ರೇಲಿಯದ ಆಡಂ ಗಿಲ್ಕ್ರಿಸ್ಟ್ ಅಜೇಯ (79) ಮ್ಯಾಥು ಹೆಡನ್ (29) ಮತ್ತು ರಿಕಿ ಪಾಂಟಿಂಗ್ ಅವರ ಅಜೇಯ 39 ರನ್ಗಳ ನೆರವಿನಿಂದ ಭಾರತ ನೀಡಿದ 149 ರನ್ಗಳ ಸವಾಲನ್ನು 25.5 ಓವರುಗಳಲ್ಲಿ ತಲುಪಿ ಸರಣಿಯಲ್ಲಿ 3-1 ರ ಮುನ್ನಡೆ ಸಾಧಿಸಿತು.
ಗಿಲ್ಕ್ರಿಸ್ಟ್ ಬೆಂಬಲದ ಮೇಲೆ ಟೀಮ್ ಇಂಡಿಯಾ ತಂಡವು ಆಸ್ಟ್ರೇಲಿಯಾ ವಿರುದ್ಧ ವಡೋದರಾದಲ್ಲಿ ನಡೆದ ಸರಣಿಯ ಐದನೆ ಏಕದಿನ ಪಂದ್ಯದಲ್ಲಿ 9 ವಿಕೆಟ್ಗಳ ಭಾರಿ ಅಂತರದಿಂದ ಸೋಲು ಅನುಭವಿಸಿತು.ಆಸ್ಟ್ರೇಲಿಯದ ಆಡಂ ಗಿಲ್ಕ್ರಿಸ್ಟ್ ಅಜೇಯ (79) ಮ್ಯಾಥು ಹೆಡನ್ (29) ಮತ್ತು ರಿಕಿ ಪಾಂಟಿಂಗ್ ಅವರ ಅಜೇಯ 39 ರನ್ಗಳ ನೆರವಿನಿಂದ ಭಾರತ ನೀಡಿದ 149 ರನ್ಗಳ ಸವಾಲನ್ನು 25.5 ಓವರುಗಳಲ್ಲಿ ತಲುಪಿ ಸರಣಿಯಲ್ಲಿ 3-1 ರ ಮುನ್ನಡೆ ಸಾಧಿಸಿತು.
ಸಿಕ್ಸರ್ನಂತೆ ನಿತೀಶ್ರನ್ನು ಎಸೆಯುವೆ:ಲಾಲೂ
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಸುವಂತೆ ಆರ್ಜೆಡಿ ವರಿಷ್ಠ ಮತ್ತು
ರೈಲ್ವೆ ಸಚಿವ ಲಾಲು ಪ್ರಸಾದ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಗ್ರಹಿಸಿದ್ದು, ಚುನಾವಣೆ ನಡೆದರೆ ಅವರನ್ನು ಬೌಂಡರಿಯ ಆಚೆ ಸಿಕ್ಸರ್ ಬಾರಿಸಿದಂತೆ ಎಸೆಯುವುದಾಗಿ ಅವರು ಹೇಳಿದರು.
ವಿರೋಧಿಗಳನ್ನು ಶೂನ್ಯಕ್ಕೆ ಔಟ್ ಮಾಡುವುದಾಗಿ ಜಂಬ ಕೊಚ್ಚಿಕೊಳ್ಳುವ ನಿತೀಶ್ ಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಬೌಂಡರಿಯಾಚೆ ಹೋಗಲಿದ್ದಾರೆ ಎಂದು ಹೇಳಿದರು.
ರೈಲ್ವೆ ಸಚಿವ ಲಾಲು ಪ್ರಸಾದ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಗ್ರಹಿಸಿದ್ದು, ಚುನಾವಣೆ ನಡೆದರೆ ಅವರನ್ನು ಬೌಂಡರಿಯ ಆಚೆ ಸಿಕ್ಸರ್ ಬಾರಿಸಿದಂತೆ ಎಸೆಯುವುದಾಗಿ ಅವರು ಹೇಳಿದರು.ವಿರೋಧಿಗಳನ್ನು ಶೂನ್ಯಕ್ಕೆ ಔಟ್ ಮಾಡುವುದಾಗಿ ಜಂಬ ಕೊಚ್ಚಿಕೊಳ್ಳುವ ನಿತೀಶ್ ಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಬೌಂಡರಿಯಾಚೆ ಹೋಗಲಿದ್ದಾರೆ ಎಂದು ಹೇಳಿದರು.
Tuesday, October 9, 2007
ಹದಿನೆಂಟು ಸಾವಿರದ ಗಡಿ ದಾಟಿದ ಸೂಚ್ಯಂಕ
ಮಂಗಳವಾರದ ಪ್ರಾರಂಭಿಕ ವಹಿವಾಟಿನಲ್ಲಿ ರಾಜಕೀಯ ಅಸ್ಥಿರತೆಯ
ಕಾರಣ ಕೆಲಕಾಲ ಮುಗ್ಗರಿಸಿದ್ದ ಮುಂಬೈ ಶೇರು ವ್ಯವಹಾರ ನಂತರದ ವಹಿವಾಟಿನಲ್ಲಿ ಭಾರಿ ಚೇತರಿಕೆಯೊಂದಿಗೆ 18 ಸಾವಿರದ ಗಡಿಯನ್ನು ದಾಟಿತು.
ಒಟ್ಟು 370 ಏರಿಕೆಗೆ ಭಾರಿ ಪ್ರಮಾಣದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಅಸಕ್ತಿ ಕಾರಣ ಎನ್ನಲಾಗಿದೆ. ಮಂಗಳವಾರದಂದು ಶೇರು ಸೂಚ್ಯಂಕ ಮೊದಲ ಬಾರಿಗೆ 18 ಸಾವಿರದ ಗಡಿಯನ್ನು ತಲುಪಿ ಕೆಳಗೆ ಇಳಿಯಿತು.
ಕಾರಣ ಕೆಲಕಾಲ ಮುಗ್ಗರಿಸಿದ್ದ ಮುಂಬೈ ಶೇರು ವ್ಯವಹಾರ ನಂತರದ ವಹಿವಾಟಿನಲ್ಲಿ ಭಾರಿ ಚೇತರಿಕೆಯೊಂದಿಗೆ 18 ಸಾವಿರದ ಗಡಿಯನ್ನು ದಾಟಿತು.ಒಟ್ಟು 370 ಏರಿಕೆಗೆ ಭಾರಿ ಪ್ರಮಾಣದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಅಸಕ್ತಿ ಕಾರಣ ಎನ್ನಲಾಗಿದೆ. ಮಂಗಳವಾರದಂದು ಶೇರು ಸೂಚ್ಯಂಕ ಮೊದಲ ಬಾರಿಗೆ 18 ಸಾವಿರದ ಗಡಿಯನ್ನು ತಲುಪಿ ಕೆಳಗೆ ಇಳಿಯಿತು.
ತಪ್ಪು ಮಾಡಿದೆ, ಕ್ಷಮಿಸಿ: ಕುಮಾರಸ್ವಾಮಿ
ಅಧಿಕಾರ ಹಸ್ತಾಂತರ ವಿಚಾರದಲ್ಲಿ ತಪ್ಪು ಮಾಡಿದೆ, ರಾಜ್ಯದ ಜನತೆ
ನನ್ನನ್ನು ಕ್ಷಮಿಸುತ್ತಾರೆ ಎಂಬ ಭಾವನೆ ನನ್ನದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾನು ತಪ್ಪು ಮಾಡಿದ್ದು ನಿಜ. ಆದರೆ ತನ್ನ ಹಾಗೂ ತಮ್ಮ ಪಕ್ಷದ ಮೇಲೆ ಮಾತ್ರ ತಪ್ಪನ್ನು ಹೊರಿಸುವುದನ್ನು ನಾನು ಒಪ್ಪಲಾರೆ. ಬಿಜೆಪಿಯೂ ಈ ವಿಚಾರದಲ್ಲಿ ತಪ್ಪು ಮಾಡಿದೆ. ಸಂದರ್ಭ ಬಂದಾಗ ಇದನ್ನು ಪ್ರಕಟಿಸುತ್ತೇನೆ ಎಂದರು.
ನನ್ನನ್ನು ಕ್ಷಮಿಸುತ್ತಾರೆ ಎಂಬ ಭಾವನೆ ನನ್ನದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.ಇಂದು ಮಧ್ಯಾಹ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಾನು ತಪ್ಪು ಮಾಡಿದ್ದು ನಿಜ. ಆದರೆ ತನ್ನ ಹಾಗೂ ತಮ್ಮ ಪಕ್ಷದ ಮೇಲೆ ಮಾತ್ರ ತಪ್ಪನ್ನು ಹೊರಿಸುವುದನ್ನು ನಾನು ಒಪ್ಪಲಾರೆ. ಬಿಜೆಪಿಯೂ ಈ ವಿಚಾರದಲ್ಲಿ ತಪ್ಪು ಮಾಡಿದೆ. ಸಂದರ್ಭ ಬಂದಾಗ ಇದನ್ನು ಪ್ರಕಟಿಸುತ್ತೇನೆ ಎಂದರು.
Subscribe to:
Posts (Atom)
ನಿಮ್ಮ ಬ್ಲಾಗಲ್ಲಿ ವೆಬ್ದುನಿಯಾ ತಾಜಾ ಸುದ್ದಿ ಬೇಕೇ?
About Me
- Webdunia
- Chennai, India
- Kannada Portal With Lots of Online options in Kannada- Games, Greetings, Mail, Quiz, Dosti community site and more...
Blog Archive
-
▼
2009
(69)
- ► 07/05 - 07/12 (12)
- ► 06/21 - 06/28 (5)
- ► 06/14 - 06/21 (12)
- ► 06/07 - 06/14 (17)
- ► 05/31 - 06/07 (8)
- ► 05/24 - 05/31 (2)
- ► 03/29 - 04/05 (1)
- ► 03/15 - 03/22 (3)
- ► 02/22 - 03/01 (2)
- ► 02/15 - 02/22 (2)
- ► 01/18 - 01/25 (2)
- ► 01/11 - 01/18 (2)
-
►
2008
(55)
- ► 10/26 - 11/02 (2)
- ► 10/19 - 10/26 (2)
- ► 10/12 - 10/19 (1)
- ► 09/28 - 10/05 (1)
- ► 08/31 - 09/07 (3)
- ► 08/17 - 08/24 (5)
- ► 08/10 - 08/17 (2)
- ► 07/27 - 08/03 (1)
- ► 07/20 - 07/27 (3)
- ► 07/13 - 07/20 (2)
- ► 05/25 - 06/01 (1)
- ► 04/27 - 05/04 (1)
- ► 04/06 - 04/13 (11)
- ► 03/30 - 04/06 (9)
- ► 03/23 - 03/30 (2)
- ► 03/16 - 03/23 (1)
- ► 03/09 - 03/16 (1)
- ► 03/02 - 03/09 (2)
- ► 02/24 - 03/02 (1)
- ► 01/27 - 02/03 (2)
- ► 01/13 - 01/20 (2)
-
►
2007
(93)
- ► 12/23 - 12/30 (2)
- ► 11/25 - 12/02 (2)
- ► 11/18 - 11/25 (2)
- ► 11/04 - 11/11 (6)
- ► 10/28 - 11/04 (4)
- ► 10/21 - 10/28 (5)
- ► 10/14 - 10/21 (9)
- ► 10/07 - 10/14 (7)
- ► 09/30 - 10/07 (7)
- ► 09/23 - 09/30 (6)
- ► 09/16 - 09/23 (10)
- ► 09/09 - 09/16 (6)
- ► 09/02 - 09/09 (12)
- ► 08/26 - 09/02 (6)
- ► 08/19 - 08/26 (7)
- ► 08/12 - 08/19 (2)

