ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Friday, October 31, 2008

ಕನ್ನಡ ಈಗ ಶಾಸ್ತ್ರೀಯ ಭಾಷೆ

ಕನ್ನಡ ಈಗ ಶಾಸ್ತ್ರೀಯ ಭಾಷೆ

ಪೂರ್ಣ ವರದಿ ವೆಬ್‌ದುನಿಯಾದಲ್ಲಿ

ರಾಜ್ಯೋತ್ಸವ: ವೆಬ್‌ದುನಿಯಾದಲ್ಲೇನು ವಿಶೇಷ?

ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ದ್ವಂದ್ವ ಮನಸು ಏಕೆ?

ಒಂದು ಭಾಷೆಗಾಗಿನ ಹೋರಾಟಕ್ಕೆ ರಾಜಕೀಯ ವೇಷವೇಕೆ?

ಬ್ಲಾಗನ್ನಡ ಎಂಬೊಂದು ಸಾಹಿತ್ಯ ಪ್ರಕಾರವಿದೆಯೇ?

ನವೆಂಬರ್‌ನಲ್ಲಿ ಮಾತ್ರವೇಕೆ? ರಾಜ್ಯೋತ್ಸವ ನಿತ್ಯೋತ್ಸವವಾಗಬಾರದೇಕೆ?

ವೆಬ್‌ದುನಿಯಾ "ಕನ್ನಡ ರಾಜ್ಯೋತ್ಸವ"ದ ವಿಶೇಷ ಪುಟ ನೋಡಿ.

Friday, October 24, 2008

ವೆಬ್‌ದುನಿಯಾದಲ್ಲಿ ದೀಪಾವಳಿಗೇನು ವಿಶೇಷ?

ವೆಬ್‌ದುನಿಯಾ ದೀಪಾವಳಿಗೆ ವಿಶೇಷ ಪುಟ ಸಿದ್ಧಪಡಿಸಿದೆ. ಇಲ್ಲಿ ನೋಡಿ.

ವೆಬ್‌ದುನಿಯಾದಲ್ಲಿ ಉಪಸಂಪಾದಕ ಹುದ್ದೆ

ವೆಬ್‌ದುನಿಯಾದಲ್ಲಿ ಉಪಸಂಪಾದಕರ ಹುದ್ದೆ ಖಾಲಿ ಇದೆ. ಆಕಾಂಕ್ಷಿಗಳು ತಕ್ಷಣ ಪ್ರತಿಕ್ರಿಯಿಸಿ.

Tuesday, October 14, 2008

ವಿವಾಹದ ತಕ್ಷಣ ವಿವಾದ: ವರ ಪರಾರಿ, ವಧು ಆಸ್ಪತ್ರೆಗೆ!

ಮದುವೆಯಾದರೆ ಗಂಡ-ಹೆಂಡತಿ ಜಗಳ ತಪ್ಪಿದ್ದಲ್ಲ ಎಂಬ ಕೊಂಕು ನುಡಿ ಕೇಳಿರಬಹುದು. ಅದನ್ನು ಅಕ್ಷರಶಃ ನಿಜವಾಗಿಸಿದ್ದಾರೆ ಆಲಪ್ಪುರದ ನವದಂಪತಿ. ವಿವಾಹ ಬಂಧನಕ್ಕೆ ಸಿಲುಕಿದ ಕೆಲವೇ ಕ್ಷಣಗಳಲ್ಲಿ ವಾಗ್ವಾದ ಉಂಟಾಗಿ, ವರ ಮಹಾಶಯ ನಾಪತ್ತೆಯಾಗಿದ್ದರೆ, ವಧು ಆಸ್ಪತ್ರೆ ಸೇರಿದ ಪ್ರಸಂಗವೊಂದು ಆಲಪ್ಪುರದಲ್ಲಿ ನಡೆದಿದೆ. ಹೆಚ್ಚಿನ ವಿವರಗಳು ಇಲ್ಲಿ ಕ್ಲಿಕ್ ಮಾಡಿ.

Friday, October 3, 2008

ಮಂಗಳೂರು: ಬಾಂಬ್ ಸಹಿತ 11 ಶಂಕಿತ ಉಗ್ರರ ಸೆರೆ

ಇಂಟರ್ನೆಟ್ ಬಳಸಿ ಮಾಹಿತಿ ರವಾನೆ; ಸಿಡಿ, ದೇವಸ್ಥಾನಗಳ ಸ್ಕೆಚ್ ಪತ್ತೆ

ನವರಾತ್ರಿ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯದ ಸಂಚೊಂದು ಬಯಲಾಗಿದ್ದು, ಗುರುವಾರ ತಡ ರಾತ್ರಿ ನಡೆಸಿದ ಭಾರೀ ಕಾರ್ಯಾಚರಣೆಯಲ್ಲಿ ಪೊಲೀಸರು ಶಂಕಿತ ಉಗ್ರಗಾಮಿಗಳೂ ಸೇರಿದಂತೆ 11 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇದರೊಂದಿಗೆ ಕರಾವಳಿ ಪ್ರದೇಶದಲ್ಲಿ ಉಗ್ರಗಾಮಿಗಳು ನೆಲೆಯೂರಿರುವ ವದಂತಿಗಳಿಗೆ ಪುಷ್ಟಿ ದೊರೆತಂತಾಗಿದ್ದು, ಕರಾವಳಿ ಜನತೆ ತಲ್ಲಣಗೊಂಡಿದ್ದಾರೆ.

Saturday, September 6, 2008

ಕರೆಂಟ್ ಕಟ್: ವಧುವಿನ ಗೆಳತಿಗೆ ತಾಳಿ!

ಸಾಮೂಹಿಕ ವಿವಾಹದ ಮಂಟಪದಲ್ಲಿ ಕರೆಂಟ್ ಹೋದ್ರೆ ಏನೆಲ್ಲಾ ಆದೀತು? ಪಕ್ಕದಲ್ಲಿದ್ದವರ ಕೊರಳಿಗೂ ತಾಳಿ ಬಿದ್ದೀತು! ಇಂಥದ್ದೊಂದು ವರದಿ ಇಲ್ಲಿದೆ.

Tuesday, September 2, 2008

ನೈಸ್ ವಿರುದ್ಧ ಹೈಕೋರ್ಟ್ ಮೊರೆ ಹೊಕ್ಕ ಅನಂತಮೂರ್ತಿ

ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (ಬಿಎಂಐಸಿ) ಯೋಜನೆ ವಿರುದ್ಧ ಸಾಹಿತಿ ಯು.ಆರ್. ಅನಂತಮೂರ್ತಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ವೆಬ್‌ದುನಿಯಾದಲ್ಲಿ ಗಣೇಶೋತ್ಸವ ವಿಶೇಷ

ವೆಬ್‌ದುನಿಯಾ ಕನ್ನಡದಲ್ಲಿ ಗಣೇಶೋತ್ಸವ ವಿಶೇಷ ಪುಟ ಇಲ್ಲಿ ಸಿದ್ಧವಾಗಿದೆ.

Saturday, August 23, 2008

ಪ್ರಶ್ನೆ ನಿಮ್ಮದು, ಉತ್ತರ ನಿಮ್ಮದು!

ನಿಮ್ಮ ವೆಬ್‌ದುನಿಯಾವು 'ವೆಬ್‌ದುನಿಯಾ ಕ್ವೆಸ್ಟ್' ಹೆಸರಿನ ಹೊಚ್ಚ ಹೊಸ ಸೇವೆಯೊಂದನ್ನು ಆರಂಭಿಸಿದೆ. ನಿಮ್ಮ ಮನಸ್ಸಿನಲ್ಲಿ ಥಟ್ಟನೇ ಹೊಳೆಯುವ ಎಲ್ಲಾ ಪ್ರಶ್ನೆಗಳನ್ನು ನೀವು ಇಲ್ಲಿ ಪಡೆಯಬಹುದಾಗಿದೆ. ಇಷ್ಟೇ ಅಲ್ಲ, ಬೇರೆ ಯಾರಾದರೂ ಕೇಳಿದ ಪ್ರಶ್ನೆಗಳಿಗೆ ನೀವು ನಿಮಗೆ ತಿಳಿದಿರುವ ಉತ್ತರ ನೀಡಲು ಬಯಸಿದರೆ, ಅದನ್ನೂ ಅಲ್ಲಿ ಬೆರಳಚ್ಚಿಸಿ ಹಾಕಬಹುದು. ಅಂದರೆ ನೀವು ಪ್ರಶ್ನೆ ಕೇಳಬಹುದು, ಬೇರೆಯವರು ನಿಮ್ಮ ಪ್ರಶ್ನೆಗೆ ಉತ್ತರಿಸಬಹುದು ಮತ್ತು ನೀವು ಕೂಡ ಬೇರೆಯವರ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರ ನೀಡಬಹುದಾಗಿದೆ.

ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Friday, August 22, 2008

ವೆಬ್‌ದುನಿಯಾದಲ್ಲಿ 'ಹರಿಣಿ' ನಗಿಸುವ ಗೆರೆಗಳು!

ಕನ್ನಡ ಕಾರ್ಟೂನು ಮತ್ತು ಕ್ಯಾರಿಕೇಚರ್ ಪ್ರಪಂಚದಲ್ಲಿ ಸಿದ್ಧ-ಪ್ರಸಿದ್ಧ ಹೆಸರು ಹರಿಣಿ. ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಕನ್ನಡ ವಿವಿಧ ನಿಯತಕಾಲಿಕಗಳು, ದೈನಿಕಗಳಲ್ಲಿ ಹರಿಣಿ ಅವರ ಗೆರೆಗಳು ಅದೆಷ್ಟೋ ಓದುಗರ ಮುಖದಲ್ಲಿ ನಗುವರಳಿಸಿವೆ.

ಇದೀಗ ವೆಬ್‌ದುನಿಯಾದಲ್ಲಿ ಅವರ ಬೆಳ್ಳಿ ರೇಖೆಗಳು ಮೂಡಿಬರಲಿದೆ.

Wednesday, August 20, 2008

ಬಾಕ್ಸಿಂಗಿನಲ್ಲಿ ಮತ್ತೊಂದು ಪದಕ ಗ್ಯಾರಂಟಿ: ವಿಜೇಂದ್ರ ಸೆ.ಫೈನಲಿಗೆ

ಭಾರತಕ್ಕೆ ಮೂರನೇ ಪದಕ ಗ್ಯಾರಂಟಿ.
ಬಾಕ್ಸಿಂಗಿನಲ್ಲಿ ವಿಜೇಂದ್ರ ಕುಮಾರ್ ಸೆಮಿಫೈನಲಿಗೆ ಪ್ರವೇಶ.

ವೆಬ್ ದುನಿಯಾ ನೋಡಿ.

ಕಾಶ್ಮೀರಕ್ಕೆ ಭಾರತದಿಂದ ಮುಕ್ತಿ ಸಿಗಬೇಕೇ?

ಕಾಶ್ಮೀರಕ್ಕೆ ಭಾರತದಿಂದ ಮುಕ್ತಿ ದೊರಕಿಸಬೇಕೂಂತ ಅರುಂಧತಿ ರಾಯ್ ವಾದ ಮಾಡಿ ಎಲ್ಲೆಡೆಯಿಂದ ತೀಕ್ಷ್ಣ ಟೀಕೆಗೊಳಗಾಗಿದ್ದಾರೆ. ನೀವೇನಂತೀರಿ? ಇಲ್ಲಿ ಕ್ಲಿಕ್ ಮಾಡಿ ಅಭಿಪ್ರಾಯ ಮಂಡಿಸಿ.

ಸುಶೀಲ್: ಸೋತು ಕಂಚು ಗೆದ್ದ ಬಗೆಯೆಂತು?

ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್ ಕೂಟದಲ್ಲಿ ಸೋತರೂ, ಕಂಚು ಗೆದ್ದ ಬಗೆ ಹೇಗೆ?

ಒಲಿಂಪಿಕ್ಸ್ ವಿಶೇಷಗಳ ವರದಿ ಮತ್ತು ಇನ್ನಷ್ಟು ತಾಜಾ ಸುದ್ದಿಗಳಿಗೆ

ವೆಬ್ ದುನಿಯಾ ಕನ್ನಡ ನೋಡಿ.

Thursday, August 14, 2008

ಸ್ವಾತಂತ್ರ್ಯೋತ್ಸವ: ವೆಬ್‌ದುನಿಯಾದಲ್ಲೇನು ವಿಶೇಷ?

ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಗೊಂದು ಮಂದಿರವಿದೆ ಎಂಬುದನ್ನು ಕೇಳಿದ್ದೀರಾ? ವೀಡಿಯೋ ಸಹಿತ ವಿಶೇಷ ಲೇಖನವಿದೆ.

ಖುದೀರಾಮ್ ಬೋಸ್ ನೇಣಿಗೆ ತಲೆಯೊಡ್ಡುವ ಮುನ್ನ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದರೇ?

ಭಾರತವು ಎಲ್ಲ ಏಳು-ಬೀಳುಗಳ ನಡುವೆ ಸೂಪರ್ ಪವರ್ ಆಗುತ್ತಿದೆಯಲ್ಲ.... ಹೇಗೆ?

ಬೊಗಳೆ ರಗಳೆ ಬ್ಯುರೋದ 'ಅನ್ವೇಷಿ' ಅವರು ಇಡೀ ದೇಶವನ್ನೇ ಆಳಿದ ಘಟನೆ ಕೇಳಿದ್ದೀರಾ?

ಕಥೆ: ಪ್ಲಾಸ್ಟಿಕ್ ಧ್ವಜದ ಗುಂಗಿನಲ್ಲಿ

ಸಿನಿಕತನ ಬಿಟ್ಟು ಸ್ವತಂತ್ರರು ನಾವೆಂದು ಹೆಮ್ಮೆ ಪಡೋದು ಯಾವಾಗ?

ಸ್ವತಂತ್ರ ಭಾರತದಲ್ಲಿ ರೈತರ ಪರಿಸ್ಥಿತಿ ಹೇಗಿದೆ? ತಿಳಿಯಬೇಕೇ?

ಸ್ವಾತಂತ್ರ್ಯವಿದ್ದರೂ ಭಯೋತ್ಪಾದಕರಿಂದ ಅತಂತ್ರರಾಗಿದ್ದೇವಲ್ಲಾಯ... ಹೇಗೆ?

ಇವೆಲ್ಲ... ಅಲ್ಲ... ಮತ್ತಷ್ಟು ಹೂರಣಗಳೊಂದಿಗೆ ವೆಬ್‌ದುನಿಯಾದ ವಿಶೇಷ ಸಂಚಿಕೆ ಸಿದ್ಧವಾಗಿದೆ.

ಇಲ್ಲಿ ಕ್ಲಿಕ್ ಮಾಡಿ ನೋಡಿ.

Monday, August 11, 2008

ಒಲಿಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ!!!!

ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ ಮೊದಲ ವೈಯಕ್ತಿಕ ಚಿನ್ನ: ವಿವರಗಳು ಇಲ್ಲಿವೆ.

Tuesday, July 29, 2008

'ಭಾವಬಿಂಬ', 'ತುಳಸಿವನ' ಅನಾವರಣ!

ಸುಪ್ತದೀಪ್ತಿ ಅವರ ಭಾವಬಿಂಬ ಕವನ ಸಂಕಲನ ಮತ್ತು ತ್ರಿವೇಣಿ ಅವರ ತುಳಸಿವನ ಲೇಖನ ಸಂಕಲನದ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

Tuesday, July 22, 2008

ಲೋಕಸಭೆಯಲ್ಲಿ ನೋಟುಗಳ ಕಂತೆ!!!

ಪ್ರಜಾಪ್ರಭುತ್ವದ ಪರಮೋಚ್ಚ ಕೇಂದ್ರವಾಗಿರುವ ಸಂಸತ್ತಿನಲ್ಲಿ ಹಣ ಬಲ ಪ್ರದರ್ಶನವಾಗಿದೆ. ನೋಟುಗಳ ಕಂತೆ ಕಂತೆಯೇ ಹರಿದುಬಂದಿದೆ. ಹೆಚ್ಚಿನ ವಿವರಗಳು ವೆಬ್‌ದುನಿಯಾ ಕನ್ನಡ ನೋಡಿ.

ವಿಶ್ವಾಸ ಮತ ಯಾರಿಗೆ? ಇಲ್ಲಿ ನೋಡಿ...

ಒಂದೆಡೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಹಾಗೂ ಮತ್ತೊಂದೆಡೆ ಎಡಪಕ್ಷಗಳು ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಸಮಬಲದ ಹೋರಾಟ ನಡೆಯುತ್ತಿದೆ. ಸಾಧ್ಯಾಸಾಧ್ಯತೆಗಳೇನು, ಫಲಿತಾಂಶವೇನು ಎಂಬುದನ್ನು ತಕ್ಷಣವೇ ತಿಳಿಯಿರಿ ನಿಮ್ಮ ವೆಬ್‌ದುನಿಯಾ ಕನ್ನಡ ತಾಣದಲ್ಲಿ...

ಟೈ ಆದ್ರೆ ಸ್ಪೀಕರ್ ಚಟರ್ಜಿ ಓಟು ಯಾರಿಗೆ?

ಟೈ ಆದ್ರೆ ಸ್ಪೀಕರ್ ಚಟರ್ಜಿ ಓಟು ಯಾರಿಗೆ?

ವೆಬ್‌ದುನಿಯಾ ಕನ್ನಡ ನೋಡಿ.

Thursday, July 17, 2008

'ವೀರ ಬಾಹು' ಎಂ.ಪಿ.ಶಂಕರ್ ಇನ್ನಿಲ್ಲ

'ವೀರ ಬಾಹು' ಎಂ.ಪಿ.ಶಂಕರ್ ಇನ್ನಿಲ್ಲ

ಹೆಚ್ಚಿನ ವಿವರಗಳು ವೆಬ್‌ದುನಿಯಾ ಕನ್ನಡದಲ್ಲಿ

ವೆಬ್‌ದುನಿಯಾದಲ್ಲಿ ಯಡಿಯೂರಪ್ಪ ಬಜೆಟ್ ವಿವರ

ಮುಖ್ಯಮಂತ್ರಿ ಯಡಿಯೂರಪ್ಪನವರ ಮೂರನೇ ಮತ್ತು ಬಿಜೆಪಿ ಸರಕಾರದ ಚೊಚ್ಚಲ ಕರ್ನಾಟಕ ಬಜೆಟ್ ಮುಖ್ಯಾಂಶಗಳು, ಪ್ರತಿಕ್ರಿಯೆ ಇತ್ಯಾದಿ ಇಲ್ಲಿದೆ.

Sunday, May 25, 2008

ವೆಬ್‌ದುನಿಯಾದಲ್ಲಿ ಚುನಾವಣಾ ಫಲಿತಾಂಶ ಅಪ್‌ಡೇಟ್

ಕರ್ನಾಟಕ ಮತದಾರ ಯಾರನ್ನು ಅಧಿಕಾರಕ್ಕೇರಿಸಲು ತೀರ್ಮಾನಿಸಿದ್ದಾನೆ, ಯಾವ ಪಕ್ಷಕ್ಕಾದರೂ ಸರಳ ಬಹುಮತ ದೊರೆಯುತ್ತದೆಯೇ? ಮತ್ತೆ ಕಾಂಗ್ರೆಸ್-ಜೆಡಿಎಸ್ ಒಂದಾಗಲಿವೆಯೇ? ಅಥವಾ ಕಾಂಗ್ರೆಸ್-ಬಿಜೆಪಿ ಸೇರಿಕೊಳ್ಳಬಹುದೇ? ಗೆದ್ದವರು ಯಾರು? ಬಿದ್ದವರು ಯಾರು? ಠೇವಣಿ ಕಳೆದುಕೊಂಡವರು ಯಾರು ಇತ್ಯಾದಿ ವಿವರಗಳ ಸಮಗ್ರ ಮಾಹಿತಿ ನಿಮ್ಮ ವೆಬ್‌ದುನಿಯಾ ಕನ್ನಡದಲ್ಲಿ.

Friday, May 2, 2008

ಪಿಯುಸಿ ಫಲಿತಾಂಶ ವೆಬ್‌ದುನಿಯಾದಲ್ಲಿ ನೋಡಿ

ಪಿಯುಸಿ ಫಲಿತಾಂಶ ವೆಬ್‌ದುನಿಯಾದಲ್ಲಿ ಪ್ರಕಟವಾಗುತ್ತಿದೆ.

ಆನ್‌ಲೈನಿನಲ್ಲಿ ಫಲಿತಾಂಶ ನೋಡಲು ಇಲ್ಲಿ ಕ್ಲಿಕ್ ಮಾಡಿ

Friday, April 11, 2008

ಬಿಜೆಪಿ: ಟಿಕೆಟ್ ಟಿಕೆಟ್... ಯಾರಿಗುಂಟು ಯಾರಿಗಿಲ್ಲ..!

ಸಾಕಷ್ಟು ಗುದ್ದಾಟ, ಲಾಬಿ ಇತ್ಯಾದಿಗಳ ಮಧ್ಯೆ ಬಿಜೆಪಿಯು 136 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿದೆ. ಕೆಲವೆಡೆ ಪಕ್ಷಾಂತರಿಗಳಿಗೆ ಮಣೆ ಹಾಕಲಾಗಿದ್ದರೆ, ಕಳೆದ ಬಾರಿ ಗೆದ್ದುಬಂದವರು ಕೆಲವರು ಟಿಕೆಟ್ ಇಲ್ಲದೆ ಬಸ್ ಮಿಸ್ ಮಾಡಿಕೊಂಡಿದ್ದಾರೆ.

Thursday, April 10, 2008

ಸಿಹಿ ಸುದ್ದಿ: ನಿಮ್ಮ ಕಾರು ಓಡಿಸಲು ಸಕ್ಕರೆ!

ಇದೋ ಬಂದಿದೆ ಮತ್ತೊಂದು ಆವಿಷ್ಕಾರ. ಸಸ್ಯಜನ್ಯ ಶರ್ಕರವೇ ಇನ್ನು ಮುಂದೆ ಕಾರುಗಳ ಇಂಧನವಾಗಲಿದೆ.

ಇದು ನಿಜ: ಶ್ವಾಸಕೋಶವಿಲ್ಲದ ಕಪ್ಪೆ ಇಲ್ಲಿದೆ

ಶ್ವಾಸಕೋಶವಿಲ್ಲದ ಕಪ್ಪೆಯೊಂದನ್ನು ಇಂಡೊನೇಷಿಯಾದಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಶ್ವಾಸಕೋಶವಿಲ್ಲದ ಜಲಚರ ಕಪ್ಪೆಯು 30 ವರ್ಷಗಳ ನಂತರ ಪತ್ತೆಯಾಗಿದೆ.

ವೆಬ್‌ದುನಿಯಾದಲ್ಲಿ ನಿಮ್ಮದೇ ಪೋರ್ಟಲ್ ರಚಿಸಿ

ಅಕ್ಷರಗಳ ಅಕ್ಕರೆಯ ಜಗತ್ತು ಸೃಷ್ಟಿಸುವುದಕ್ಕಾಗಿಯೇ ಬ್ಲಾಗಿಗಿಂತಲೂ ಹೆಚ್ಚು ಅವಕಾಶಗಳು, ಸಾಧ್ಯತೆಗಳಿರುವ, ನಿಮ್ಮದೇ ಪುಟ್ಟ ತಾಣವೊಂದನ್ನು ನೀವು ಹೊಂದಬಹುದು. ಅದೂ ಉಚಿತವಾಗಿ.

ಶೇ.27 ಒಬಿಸಿ ಕೋಟಾ: ಸುಪ್ರೀಂ ಕೋರ್ಟು ಅಸ್ತು

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗದವರಿಗೆ (ಒಬಿಸಿ) ನೀಡಲಾದ ಶೇ.27 ಮೀಸಲಾತಿ ನಿರ್ಧಾರವನ್ನು ಸುಪ್ರೀಂ ಕೋರ್ಟು ಎತ್ತಿ ಹಿಡಿದಿದೆ.

Wednesday, April 9, 2008

ಭ್ರಷ್ಟರ ಸದ್ದಡಗಿಸೋ ಪತಿಯನ್ನು ಅಮಾನತು ಮಾಡಿ!

ಪತಿಯನ್ನೇ ಅಮಾನತಿನಲ್ಲಿಡುವಂತೆ ಐಎಎಸ್ ಅಧಿಕಾರಿಯೊಬ್ಬರ ಪತ್ನಿಯು ರಾಜ್ಯಪಾಲರಿಗೆ ಮೊರೆ ಹೋಗಿದ್ದಾರೆ! ಇದೇನು ವಿಚಿತ್ರ ಅಂತ ತಿಳಿದುಕೊಂಡಿರಾ? ಹೌದು. ಇಂಥದ್ದೊಂದು ಪ್ರಕರಣ ಕರ್ನಾಟಕದಿಂದಲೇ ವರದಿಯಾಗಿದೆ.

ಹೊಗೆ ನಂದಿಸಲು ಸೋನಿಯಾ ಕಾರಣ ಅಲ್ಲ: ಮೊಯಿಲಿ

ಎಐಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ಎಂ.ವೀರಪ್ಪ ಮೊಯಿಲಿ ಮಾತು ಬದಲಿಸಿದ್ದಾರೆ. ಹೊಗೇನಕಲ್ ಯೋಜನೆಯನ್ನು ತಡೆಹಿಡಿದದ್ದು ಕರುಣಾನಿಧಿಯೇ ಹೊರತು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಧ್ಯಪ್ರವೇಶಿಸಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಬಂತು ಚುನಾವಣೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಗ್ರ ಚಿತ್ರಣಕ್ಕೆ ಇಲ್ಲಿ ಕ್ಲಿಕ್ ಮಾಡಿ

Monday, April 7, 2008

ಆಂತಕ ಒಳ್ಳೆಯದಲ್ಲ ಎಂಬುದು ಜನಸಾಮಾನ್ಯರ ನಂಬುಗೆ. ಇದು ಚಿಕಿತ್ಸೆ ಯೋಗ್ಯ ಸಮಸ್ಯೆ ಎಂದು ವೈದ್ಯರು ಹೇಳಬಹುದು. ಆದರೆ ಒಂದು ಮಟ್ಟದ ತನಕದ ಆತಂಕವು ನಮ್ಮನ್ನು ಸುರಕ್ಷಿತವಾಗಿ ಮತ್ತು ಸುಭದ್ರವಾಗಿಡಲು ಸಹಕರಿಸುತ್ತದಂತೆ!
ಮಧ್ಯಪ್ರದೇಶದ ದೇವಸ್ ನಗರ ಮಾತೆ ತುಳಜಾಭವಾನಿ ಹಾಗೂ ಚಾಮುಂಡಾ ಮಾತೆ ಮಂದಿರಗಳಿಗೆ ಪ್ರಸಿದ್ದವಾದ ಪಟ್ಟಣ .ಎರಡು ಮಂದಿರಗಳು ನಗರದಲ್ಲಿರುವ ಬೆಟ್ಟದ ಮೇಲೆ ನಿರ್ಮಾಣವಾಗಿವೆ.
ಈ ಬಾರಿಯ ಯುಗಾದಿ ಹೊಸತು, ಹೊಸತು ತರುವ ಮೂಲಕ, ಸಿಹಿಯ ಬದಲಾಗಿ ಕಹಿಯನ್ನೇ ಹೆಚ್ಚಾಗಿ ನೀಡಿದೆ. ಮಿತಿಮೀರಿ ಏರುತ್ತಿರುವ ಬೆಲೆ ಒಂದೆಡೆಯಾದರೆ, ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಇಲ್ಲ ಎಂಬ ಕೊರಗು ಇನ್ನೊಂದೆಡೆ.

Saturday, April 5, 2008

ತೇಜಸ್ವಿ ಮರೆಯಾಗಿ ಒಂದು ವರ್ಷ...

ಕನ್ನಡ ಸಾರಸ್ವತ ಲೋಕದ ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ನಮ್ಮನ್ನಗಲಿ ಇಂದಿಗೆ (ಏ.5) ವರುಷ ಸಂದಿದೆ. ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲಿ ಒಬ್ಬರಾಗಿದ್ದ ತೇಜಸ್ವಿಯವರು ಯುವಪೀಳಿಗೆಗೂ ಮೆಚ್ಚಿನ ಸಾಹಿತಿಯಾಗಿದ್ದರು.

ಸದ್ಯಕ್ಕೆ 'ಹೊಗೆ' ಹಾಕುವುದಿಲ್ಲ: ಕರುಣಾನಿಧಿ

ವಿವಾದಾಸ್ಪದ ಹೊಗೇನಕಲ್ ಕುಡಿಯುವ ನಿರಾವರಿ ಯೋಜನೆಯನ್ನು ಕರ್ನಾಟಕದಲ್ಲಿ ಚುನಾವಣೆ ನಡೆಯುವ ತನಕ ತಡೆಹಿಡಿಯಲು ತಮಿಳ್ನಾಡು ಮುಖ್ಯಮಂತ್ರಿ ಕರುಣಾನಿಧಿ ನಿರ್ಧಿರಿಸಿದ್ದಾರೆ.

Thursday, April 3, 2008

ಜ್ಯೋತಿಬಸು ಹಾಗೂ ಹರಿಕಿಶನ್ ಸಿಂಗ್ ಸುರ್ಜಿತ್ ಅವರು ಪಾಲಿಟ್‌ಬ್ಯೂರೋದಿಂದ ನಿರ್ಗಮಿಸಿರುವುದರೊಂದಿಗೆ,90 ವರ್ಷದ ಇತಿಹಾಸವಿರುವ ಕಮ್ಯೂನಿಸ್ಟ್ ಚಳುವಳಿಯ ಭಾಗವಾದ ಸಿಪಿಐ(ಎಂ)ಪಕ್ಷದ ಒಂಬತ್ತು ಸಂಸ್ಥಾಪಕ ಸದಸ್ಯರ ಯುಗವೊಂದು ಅಂತ್ಯವಾದಂತಾಗಿದೆ.

ಉಷ್ಟ್ರಾಸನ

ಸಂಸ್ಕೃತದಲ್ಲಿ ಉಷ್ಟ್ರ ಅಂದರೆ 'ಒಂಟೆ' ಎಂಬರ್ಥ. ಹಾಗಾಗಿ ಈ ಆಸನದ ಭಂಗಿಯನ್ನು ಒಂಟೆ ಭಂಗಿ ಎಂದೂ ಹೇಳಲಾಗುತ್ತದೆ. ಇದು ಭಾಗಿದ(ಧನುರಾಸನ) ಮತ್ತು ಮೇಲ್ಮುಖ ಭಾಗಿರುವ (ಊರ್ಧ್ವ ಧನುರಾಸನ) ನಡುವಿನ ಸ್ಥಿತ್ಯಂತರ ಭಂಗಿ.

Wednesday, April 2, 2008

ವಿಧಾನಸಭೆ ಚುನಾವಣೆ ಘೋಷಣೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಅಖಾಡ ಸಜ್ಜಾಗಿದ್ದು, ಮೇ ತಿಂಗಳಲ್ಲಿ ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿರುವುದಾಗಿ ಮುಖ್ಯ ಚುನಾವಣಾ ಆಯುಕ್ತ ಎನ್.ಗೋಪಾಲಸ್ವಾಮಿ ಅವರು ಬುಧವಾರ ಘೋಷಿಸಿದ್ದಾರೆ.

ಭರ್ತಿ ಎಂಟುಗಂಟೆ ನಿದ್ರಿಸಿ, ಸ್ಲಿಮ್ ಆಗಿ

ಡಯಟೂ, ಡ್ರೈ ಚಪಾತಿ, ಟ್ಯಾಬ್ಲೆಟ್ಟು, ವಾಕೂ ಅಂತ ಸುಸ್ತಾಗಿಯೂ ನಿಮ್ಮ ದೇಹ ಉಬ್ಬುತ್ತಲೇ ಹೋಗುತ್ತಿದೆಯಾದರೆ ಇದನ್ನೂ ಯಾಕೆ ಒಮ್ಮೆ ಟ್ರೈ ಮಾಡಬಾರದೂ? ಹೇಗಿದ್ದರೂ, ಭಾರ ಎತ್ತುವ, ಬೆವರು ಸುರಿಸುವ, ಬಾಯಿ ಕಟ್ಟುವ ಕಷ್ಟ ಇಲ್ವಲ್ಲ?

Tuesday, April 1, 2008

ಹೊಗೇನಕಲ್: ಎಪ್ರಿಲ್ 10ರಂದು ಕರ್ನಾಟಕ ಬಂದ್‌ಗೆ ಕರೆ

ಹೊಗೇನಕಲ್ ಜಲ ಯೋಜನೆ ಕುರಿತಂತೆ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹೇಳಿಕೆ ವಿರುದ್ಧ ಎ.10ರಂದು ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಮಂಗಳವಾರ ಕರೆ ನೀಡಿವೆ. ಹೊಗೇನಕಲ್ ಯೋಜನೆಯನ್ನು ಮುಂದುವರಿಸುವುದಾಗಿ ಎಂ.ಕರುಣಾನಿಧಿ ನೀಡಿದ ಹೇಳಿಕೆಯಿಂದ ವಿವಾದದ ಕಿಡಿ ಸ್ಫೋಟಿಸಿದೆ.

'ಹೊಗೆ'ಯ ಬೆಂಕಿಗೆ ಕರುಣಾನಿಧಿಯಿಂದ ತುಪ್ಪ

'ಸೇತು ನಿರ್ಮಿಸುವುದಕ್ಕಾಗಿ ಶ್ರೀರಾಮ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ್ದ' ಎಂದು ಪ್ರಶ್ನಿಸಿ ಗಮನ ಸೆಳೆದಿದ್ದ ವಯೋವೃದ್ಧ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಮತ್ತೊಮ್ಮೆ ತಮ್ಮ ನಾಲಿಗೆ ಸಡಿಲ ಮಾಡಿದ್ದಾರೆ. ಕರ್ನಾಟಕದವರು ತಮ್ಮ ಬೆನ್ನುಮೂಳೆ ಮುರಿದರೂ, ಹೊಗೇನಕಲ್ ಯೋಜನೆಯನ್ನು ಪೂರ್ಣಗೊಳಿಸಿಯೇ ಸಿದ್ಧ ಎಂಬ ಉಡಾಫೆಯ, ಪ್ರಚೋದಕ ಮಾತುಗಳನ್ನಾಡಿದ್ದಾರೆ.

Monday, March 31, 2008

ಅಹ್ಮದಾಬಾದ್ ಟೆಸ್ಟ್: ಕೈಫ್‍‌ಗೆ ಒಲಿದ ಭಾಗ್ಯ

ಎಪ್ರಿಲ್ 3ರಂದು ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿಯ ದ್ವಿತೀಯ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ಸಚಿನ್ ತೆಂಡೂಲ್ಕರ್ ಆಡುತ್ತಿಲ್ಲ. ಸಚಿನ್ ಸ್ಥಾನವನ್ನು ಮಹ್ಮದ್ ಕೈಫ್ ತುಂಬಲಿದ್ದು, ಹೆಚ್ಚು ಕಡಿಮೆ ಎರಡು ವರ್ಷದ ನಂತರ ಗ್ರೆಗ್ ಶಿಷ್ಯ ಟೆಸ್ಟ್ ಕ್ರಿಕೆಟಿಗೆ ಮರಳುತ್ತಿದ್ದಾರೆ.

Friday, March 28, 2008

ಅಬ್ಬರಿಸಿದ ಸೆಹ್ವಾಗ್ ದ್ವಿಶತಕ: ಚೆನ್ನೈಯಲ್ಲಿ ರನ್ ಮಳೆ

ಬ್ಯಾಟಿಂಗ್ ಪಿಚ್‌ನಲ್ಲಿ ಬ್ಯಾಟ್ಸ್‌ಮನ್‌ಗಳ ಅಬ್ಬರ ಮುಂದುವರಿದಿದ್ದು, ಭಾರತದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಸಿಡಿಲಬ್ಬರದಿಂದ ದ್ವಿಶತಕ ದಾಖಲಿಸಿದ್ದಾರೆ. ಇದರೊಂದಿಗೆ ಭಾರತವು ಮೊದಲ ಟೆಸ್ಟ್‌ನ ಮೂರನೇ ದಿನ ಭಾರತ 1 ವಿಕೆಟ್ ಕಳೆದುಕೊಂಡು 400 ಗಡಿ ತಲುಪಿದೆ.

Wednesday, March 26, 2008

ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೈವ್ ಸ್ಕೋರ್ ಕಾರ್ಡ್

ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಲೈವ್ ಸ್ಕೋರ್ ಕಾರ್ಡ್ ಇಲ್ಲಿದೆ.

Monday, March 17, 2008

ಬೆಂಗಳೂರಿನಲ್ಲಿ ಕನ್ನಡ ಬ್ಲಾಗರ್‌ಗಳ ಮಳೆ

ಬೆಂಗಳೂರಿನಲ್ಲಿ ಕನ್ನಡ ಬ್ಲಾಗರ್‌ಗಳ ಕಲರವ
ನೀವೂ ಬಂದಿದ್ರಾ? ಯಾರೇನು ಹೇಳಿದ್ರು? ನಿಮಗೆ ಕಾಮೆಂಟ್ ಹಾಕೋರನ್ನು ಪರಿಚಯ ಮಾಡ್ಕೊಂಡ್ರಾ?

Wednesday, March 12, 2008

ಕನ್ನಡ ಬ್ಲಾಗಿಗರು ಸೇರುತ್ತಿದ್ದಾರೆ ಬೆಂಗಳೂರಲ್ಲಿ...

ಕನ್ನಡ ಬ್ಲಾಗ್ ಜಗತ್ತು ಎಂದಿಗಿಂತಲೂ ವೇಗದಲ್ಲಿ ಬೆಳೆಯತೊಡಗಿದೆ. ಹಲವಾರು ಬ್ಲಾಗ್ ನಕ್ಷತ್ರಗಳು ಅಂತರ್ಜಾಲವೆಂಬ ಬಾನಂಗಳಲ್ಲಿ ಮಿನುಗುತ್ತಿವೆ, ಮಿಂಚುತ್ತಿವೆ. ಬ್ಲಾಗ್ ಬರೆಯುವವರ ಸಮಾವೇಶ ಮಾಡಿದರೆ ಹೇಗೆ? ಇದು ಕನ್ನಡ ಬ್ಲಾಗ್ ಜಗತ್ತಿಗೆ ಹೊಸದು. ಇಂಥದ್ದೊಂದು ಪ್ರಯತ್ನವನ್ನು ಮಾಡಿದೆ ಬೆಂಗಳೂರಿನ 'ಪ್ರಣತಿ' ಎಂಬ ಪ್ರಕಾಶನ ಸಂಸ್ಥೆ. ಮಾ.16ರಂದು ಈ ಸಮಾವೇಶ ನಡೆಯಲಿದೆ.

Saturday, March 8, 2008

ವೆಬ್‌ದುನಿಯಾದಲ್ಲಿ ಕನ್ನಡ ಬ್ಲಾಗ್‌ಗಳು

ವೆಬ್‌ದುನಿಯಾದಲ್ಲಿ ಬ್ಲಾಗುಗಳ ಕುರಿತ ವಿಶ್ಲೇಷಣೆ ಮತ್ತು ಕನ್ನಡ ಬ್ಲಾಗ್ ಜಗತ್ತಿನ ಮೇಲೊಂದು ಇಣುಕಾಟ...
ಇಲ್ಲಿ ಕ್ಲಿಕ್ ಮಾಡಿ ನೋಡಿ.

Wednesday, March 5, 2008

ರಾಜ್ಯಕ್ಕಾಗಿ 'ಕೈ' ಬಲಪಡಿಸಲು ಕೃಷ್ಣ ವಾಪಸ್

ಮಹಾರಾಷ್ಟ್ರ ರಾಜ್ಯಪಾಲರಾಗಿ ಮುಳ್ಳಿನ ಮೇಲೆ ಕುಳಿತಂತೆ ಚಡಪಡಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೊನೆಗೂ ಎಲ್ಲರೂ ನಿರೀಕ್ಷಿಸಿದಂತೆಯೇ ರಾಜ್ಯಪಾಲ ಸ್ಥಾನಕ್ಕೆ ಸಲಾಂ ಹೊಡೆದು, ಕರ್ನಾಟಕದಲ್ಲಿ ಕಾಂಗ್ರೆಸ್ ಕೈ ಬಲಪಡಿಸಲು ಬರುತ್ತಿದ್ದಾರೆ.

ಪೂರ್ಣ ವರದಿ ಇಲ್ಲಿದೆ.

Friday, February 29, 2008

ಬಜೆಟ್ ಕುರಿತ ಸಮಗ್ರ ವರದಿ

ಎಲ್ಲಾ ವರ್ಗಗಳ ಆದಾಯ ತೆರಿಗೆ ಮಿತಿ ಹೆಚ್ಚಳ, ಅಂಗನವಾಡಿ ಉದ್ಯೋಗಿಗಳ ವೇತನ ಏರಿಕೆ, ರೈತರಿಗೆ ಸಾಲಮನ್ನಾದ ಮಹಾಪೂರ, ಸಣ್ಣ ಕಾರು ಹಾಗೂ ದ್ವಿಚಕ್ರ, ತ್ರಿಚಕ್ರ ವಾಹನಗಳ ಅಬಕಾರಿ ಸುಂಕ ಇಳಿಕೆ, ಸೆಟ್ ಟಾಪ್ ಬಾಕ್ಸ್ ಸುಂಕ ಕಡಿತ, ಜೀವರಕ್ಷಕ ಔಷಧಗಳ ಬೆಲೆ ಕಡಿತ, ಕಾಮನ್ವೆಲ್ತ್ ಕ್ರೀಡೆಗೆ 624 ಕೋಟಿ...
ಕೇಂದ್ರ ಬಜೆಟ್ ಬಗೆಗಿನ ಸಮಗ್ರ ಇಲ್ಲಿದೆ.

Thursday, January 31, 2008

ಕಿಮ್ಸ್‌ನಲ್ಲೂ ಉಗ್ರರ ಬೇರು: ವೈದ್ಯ ವಿದ್ಯಾರ್ಥಿ ಸೆರೆ

ಉಗ್ರಗಾಮಿ ಜಾಲವು ರಾಜ್ಯದಲ್ಲಿ ಎಷ್ಟರಮಟ್ಟಿಗೆ ಬೇರೂರಿದೆ ಎಂಬುದರ ಕುರಿತಾಗಿ ಆಘಾತಕಾರಿ ಸಂಗತಿಗಳು ಹೊರಬರತೊಡಗಿದ್ದು, ಕಿಮ್ಸ್ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಮಹಮದ್ ಆಸಿಫ್, ಇತ್ತೀಚೆಗೆ ಬಂಧಿಸಲಾಗಿರುವ ಲಷ್ಕರ್-ಇ-ತೊಯ್ಬಾದ ಉಗ್ರರ ಜೊತೆ ಸಂಪರ್ಕವಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಕರ್ನಾಟಕದಲ್ಲಿ ಉಗ್ರರ ವ್ಯವಸ್ಥಿತ ಜಾಲವು ಅಸ್ತಿತ್ವದಲ್ಲಿರುವ ಸುದ್ದಿಗೆ ಪುಷ್ಟಿ ಸಿಕ್ಕಂತಾಗಿದೆ.

ಪೂರ್ಣ ವರದಿ ಇಲ್ಲಿದೆ:

ವ್ಯಾಸರಾಯ ಬಲ್ಲಾಳರಿಗೆ ಶ್ರದ್ಧಾಂಜಲಿ

ಕತೆ, ಕಾದಂಬರಿಗಳ ಮೂಲಕ ವಾಸ್ತವ ಜಗತ್ತಿನ ಚಿತ್ರಣವನ್ನು ಅದ್ಭುತವಾಗಿ ಬಿಡಿಸಿಡುತ್ತಿದ್ದ, ಮಾನವೀಯ ಆದರ್ಶಗಳನ್ನು ಮನಮುಟ್ಟುವಂತೆ ಬಿಂಬಿಸುತ್ತಿದ್ದ, ಕನ್ನಡ ಸಾಹಿತ್ಯ ಲೋಕದಲ್ಲಿ "ಬಂಡಾಯ ಬಲ್ಲಾಳರು" ಎಂದೇ ಜನಜನಿತರಾಗಿದ್ದ ಕವಿ ಮನಸಿನ ನಿ.ವ್ಯಾಸರಾಯ ಬಲ್ಲಾಳರೀಗ ನಮ್ಮೊಂದಿಗಿಲ್ಲ. 'ಬಂಡಾಯ ಬಲ್ಲಾಳರು' ಎಂದರೆ ಅವರು ಕಟ್ಟಾ ಬಂಡಾಯ ಸಾಹಿತಿ ಅಂತ ಅರ್ಥವಲ್ಲ. ಅವರ 'ಬಂಡಾಯ' ಎಂಬ ಕಾದಂಬರಿಯು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟಿತ್ತು, ಈ ಸಿದ್ಧಿಗೇ ಆ ಹೆಸರಿನ ಪ್ರಸಿದ್ಧಿ.

ಬಡತನವನ್ನು ಒಡಲಲ್ಲಿ ಕಟ್ಟಿಕೊಂಡು ಅನ್ನಕ್ಕಾಗಿ ಉದ್ಯೋಗ ಅರಸುತ್ತಾ ಮುಂಬಯಿ ಎಂಬ ಮಾಯಾನಗರಿ ಸೇರಿಕೊಂಡಿದ್ದ ಬಲ್ಲಾಳರು, ತೈಲ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರೂ, ಅದರ ಜೊತೆಗೇ ಸಾಹಿತ್ಯದ ಹಸಿವನ್ನು ನೀಗಿಸುವ ಕಾರ್ಯದಲ್ಲೂ ತಮ್ಮನ್ನು ಮುಳುಗಿಸಿಕೊಂಡರು. ಮುಂಬಯಿ ಬದುಕಿನ ತಳಮಳಗಳನ್ನು ಅತ್ಯಂತ ಸಮೀಪದಿಂದ ಕಂಡು ಜೀವಂತವಾಗಿಯೇ ಅವರು ತಮ್ಮ ಕೃತಿಗಳಲ್ಲೂ ಸೆರೆಹಿಡಿದು ಸೈ ಅನ್ನಿಸಿಕೊಂಡರು.
ಲೇಖನದ ಪೂರ್ಣ ರೂಪ ಇಲ್ಲಿದೆ:

Friday, January 18, 2008

ಪರ್ಯಾಯ ಸಂಪ್ರದಾಯಗಳ ಸಾಗರವೇ ಉಲ್ಲಂಘನೆ

ಉಡುಪಿ ಶ್ರೀ ಕೃಷ್ಣ ಮಠದ ಪೂಜಾ ಕೈಂಕರ್ಯದ ಪರ್ಯಾಯ ಪೀಠಾರೋಹಣ ಮಾಡಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಪೀಠದೆಡೆಗಿನ ನಡಿಗೆ ಅಷ್ಟು ಸುಲಭದ್ದಾಗಿರಲಿಲ್ಲ. ಅಲ್ಲಿ ಅವರನ್ನು ಸ್ವಾಗತಿಸಲು ಅಷ್ಟ ಮಠಾಧೀಶರಿರಲಿಲ್ಲ. ಅವರಿಗೆ ಬೀಗದ ಕೀಲಿ, ಅಕ್ಯ ಪಾತ್ರ ಹಸ್ತಾಂತರಿಸಲು ನಿರ್ಗಮನ ಪರ್ಯಾಯ ಸ್ವಾಮೀಜಿ ಇರಲಿಲ್ಲ. ಅಷ್ಟ ಮಠಾಧೀಶರಿಗೆ ಪಾದಪೂಜೆಯೂ ನಡೆಯಲಿಲ್ಲ.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ಪುತ್ತಿಗೆ ಶ್ರೀಗಳಿಂದ ಪರ್ಯಾಯ ಪೀಠಾರೋಹಣ

ಅಷ್ಟಮಠದ ಏಳು ಸ್ವಾಮೀಜಿಗಳಿಲ್ಲದೆಯೇ ಪರ್ಯಾಯ ಪೀಠಾರೋಹಣಗೈದ ಪುತ್ತಿಗೆ ಸ್ವಾಮೀಜಿ.

ಪೂರ್ಣ ವರದಿ ಇಲ್ಲಿದೆ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger