ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Saturday, September 29, 2007

ವೆಬ್‌ದುನಿಯಾ ವಾರದ ಬ್ಲಾಗ್: ಋಜುವಾತು

ಕನ್ನಡ ಬ್ಲಾಗಿಗರತ್ತ ಒಮ್ಮೆ ಕಣ್ಣು ಹಾಯಿಸಿದರೆ ತತ್‌ಕ್ಷಣ ಗಮನ ಸೆಳೆಯುವ ಹೆಸರು ಯು.ಆರ್.ಅನಂತಮೂರ್ತಿ. ಜ್ಞಾನಪೀಠ ಪ್ರಶಸ್ತಿ ಪಡೆದ ಒಬ್ಬ ಗಣ್ಯರು ಬ್ಲಾಗ್ ಬರೆಯುತ್ತಿರುವುದು ಇತರ ಬ್ಲಾಗಿಗರಿಗೆ ದೊಡ್ಡ ಸ್ಫೂರ್ತಿ.

ಹೆಸರಾಂತ ಬರಹಗಾರರು, ಉದಯೋನ್ಮುಖ ಬರಹಗಾರರು, ಪ್ರವೃತ್ತಿ ಬರಹಗಾರರು ಮತ್ತಿತರರು ಬ್ಲಾಗುಗಳನ್ನು ಆರಂಭಿಸಿ ಪರ್ಯಾಯ ಸಾಹಿತ್ಯ ಲೋಕ ಸೃಷ್ಟಿಸಬೇಕಿದ್ದರೆ ಅನಂತಮೂರ್ತಿಯಂತಹವರ ಉಪಸ್ಥಿತಿ ಬಹುಮುಖ್ಯ. "ಋಜುವಾತು" (http://rujuvathu.sampada.net) ಎಂಬ ಹೆಸರಿನ ಬ್ಲಾಗನ್ನು ನಡೆಸುತ್ತಿರುವ ಅವರು ಇದರಲ್ಲಿ ಗಂಭೀರ ಮತ್ತು ಚಿಂತನಶೀಲ ಬರಹಗಳನ್ನು ಪ್ರಕಟಿಸುತ್ತಾರೆ.

ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕ್ರಿಕೆಟ್ : ಭಾರತ ವಿರುದ್ಧ ಆಸ್ಟ್ರೇಲಿಯಾ ಲೈವ್ ಸ್ಕೋರ್ ಕಾರ್ಡ್

ಭಾರತ ವಿರುದ್ಧ ಆಸ್ಟ್ರೇಲಿಯಾ ವಿರುದ್ದದ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ಕ್ಷಣ ಕ್ಷಣದ ವಿವರಗಳಿಗಾಗಿ ವೆಬ್ ದುನಿಯಾದಿಂದ ಲೈವ್ ಸ್ಕೋರ್ ಕಾರ್ಡ್ ವೀಕ್ಷಿಸಿ.

ಲೈವ್ ಸ್ಕೋರ್ ಕಾರ್ಡ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Friday, September 28, 2007

ಆಹಾರ ಬಡಿಸಿದ ರಾಖಿ ಸಾವಂತ್

10ನೇ ವರ್ಷದಿಂದಲೇ ರಾಖಿ ಸಾವಂತ್ ಟೀನಾ ಅಂಬಾನಿ ವಿವಾಹದಲ್ಲಿ ಆಹಾರವನ್ನು ಬಡಿಸಿದ್ದಳು. ಈಗ ಮುಂಬೈನ ಸಬರ್ಬ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಮಾಲಕಿ. ನನ್ನ ಕಥೆ ಕೇಳುವುದಕ್ಕೆ ಮುಂಚೆ ನಿಮ್ಮ ಕರವಸ್ತ್ರವನ್ನು ಸಿದ್ಧವಾಗಿಡಿ ಎನ್ನುತ್ತಾ ರಾಖಿ ಸಾವಂತ್ ಸಂದರ್ಶನದಲ್ಲಿ ಹೇಳುತ್ತಾಳೆ.

ನಾನು ಬಾಲಕಿಯಾಗಿದ್ದಾಗ ಪುರುಷರು ದುರುಗುಟ್ಟಿಕೊಂಡು ನೋಡಿ ಹೆದರಿಸುತ್ತಿದ್ದರು. ಬಾಲ್ಕನಿಗಳಲ್ಲಿ ನಿಂತುಕೊಳ್ಳುವ ಹಾಗಿಲ್ಲ. ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವಂತಿಲ್ಲ. ನವರಾತ್ರಿ ಸಮಯದಲ್ಲಿ ನೃತ್ಯ ಮಾಡುವಂತಿಲ್ಲ. ಇದರಿಂದ ಬಂಡಾಯ ಪ್ರವೃತ್ತಿ ಬೆಳೆಸಿಕೊಂಡು ಎಲ್ಲ ನಿಯಮಗಳನ್ನು ಮುರಿಯಲು ನಿರ್ಧರಿಸಿದೆ.


Thursday, September 27, 2007

ಸೈಫ್-ಕರೀನಾ ಓಡಾಟದ ಗುಲ್ಲು

ಯಶರಾಜ್ ಫಿಲ್ಮ್ಸ್‌ನ ತಾಷಾನ್ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದೆ. ಅನಿಲ್ ಕಪೂರ್, ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಒಟ್ಟಿಗೆ ನಟಿಸಿರುವುದು ಒಂದು ಕಾರಣ. ಅಕ್ಷಯ್ ಮತ್ತು ಅನಿಲ್ ಕುಮಾರ್ ಯಶ್ ರಾಜ್ ಚಿತ್ರದಲ್ಲಿ ಬಹಳ ಸಮಯದ ಬಳಿಕ ನಟಿಸುತ್ತಿದ್ದಾರೆ.



Tuesday, September 25, 2007

ನಾಯಿ ಕಡಿತಕ್ಕೆ ಚರಂಡಿ ಸ್ನಾನ ಮದ್ದು!

ಆಹಾ ! ಜಗತ್ತಿನಲ್ಲಿ ಇನ್ನೂ ಎಂತೆಂತಹ ಪರಿಹಾರಗಳನ್ನು ಮನುಷ್ಯ ಶೋಧಿಸುತ್ತಾನೆ ಎಂದರೆ ಲೆಕ್ಕವಿಲ್ಲ. ಅದ್ಕೆ ಮನುಷ್ಯ ಎನ್ನುವವನಿಗೆ ಬುದ್ಧಿ ಹೆಚ್ಚು ಎಂದು ಹೇಳುವುದು. ಅಕಸ್ಮಾತ್ ಸರಿರಾತ್ರಿಯಲ್ಲಿ ಹೋಗುವಾಗ ನಾಯಿಯೊಂದು ಕಚ್ಚಿತು ಅಂತಿಟ್ಕೊಳ್ಳಿ. ಆಗ ನೀವೇನು ಮಾಡುತ್ತಿರಿ ? ಡಾಕ್ಟರ್ ಹತ್ತಿರ ಹೋಗಿ ಇಂಜಕ್ಷನ್ ಮಾಡಿಸಿಕೊಳ್ಳುತ್ತೀರಿ. ಬಹುಶಃ ಅದು ಹುಚ್ಚು ನಾಯಿ ಆಗಿದ್ದರೆ ಹೊಕ್ಕಳ ಸುತ್ತ ಭರ್ತಿ ಹದಿನಾಲ್ಕು ಇಂಜಕ್ಷನ್ ಮಾಡಿಸ್ಕೋಬೇಕು. ಬಿಡದ ಕರ್ಮ, ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೆಬೇಕು.

ಇಲ್ಲಿದೆ ಪರಿಹಾರ, ಲಕ್ನೋದಲ್ಲಿ, ಅಲ್ಲಿಯ ಒಂದು ಚರಂಡಿಯಲ್ಲಿ ಸ್ನಾನ ಮಾಡಿದರೆ ಸಾವಿರ ರೂಪಾಯಿಗಳು ಉಳೀತದೆ. ಹೆಚ್ಚಾಗಿ ಹೊಕ್ಕಳ ಇಂಜಕ್ಷನ್ ನರಕದಿಂದ ನೀವು ಬೈಪಾಸ್ ಆಗಬಹುದು. ಲಕ್ನೋದಿಂದ ಫೈಜಾಬಾದ್ ಸೇತುವೆ ಕೆಳಗೆ ಇರುವ ಈ ಹಳ್ಳಕ್ಕೆ ಕುಕ್ರೇಲ್ ನಾಲಾ ಎಂದು ಹೆಸರು. ಅದಕ್ಕೆ ನಾವಿಟ್ಟ ಹೆಸರು ಚರಂಡಿ ಎಂದು. ಇದಕ್ಕಿಂತ ಉತ್ತಮ ಶಬ್ದ ನಮ್ಮಲಿಲ್ಲ. ಇದ್ದರೆ ನೀವೆ ನಾಮಕರಣ ಮಾಡಿಬಿಡಿ.


ಭಾರತಕ್ಕೆ ಚೊಚ್ಚಲ ಟ್ವೆಂಟಿ 20 ಕಿರೀಟ

ಅಕ್ಷರಶಃ ಕದನವೇ ಏರ್ಪಟ್ಟಂತಿದ್ದ ಫೈನಲ್ ಪಂದ್ಯದ ಕೊನೆಯ ಓವರಿನ ಥ್ರಿಲ್ಲರ್‌ನಲ್ಲಿ ಭಾರತ ಮೇಲುಗೈ ಸಾಧಿಸಿ ಚೊಚ್ಚಲ ಐಸಿಸಿ ಟ್ವೆಂಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತಲ್ಲದೆ, ಇತಿಹಾಸ ಸೃಷ್ಟಿಸಿತು.

ಅದ್ಭುತ ಬೌಲಿಂಗ್ ಸಂಘಟಿಸಿದ ಭಾರತೀಯ ಪಾಳಯದ ಬೌಲರುಗಳು ಪಾಕಿಸ್ತಾನೀ ದಾಂಡಿಗರ ಹೆಡೆಮುರಿ ಕಟ್ಟಿದರು. ಮಧ್ಯೆ ಮಧ್ಯೆ ಸಿಕ್ಸರ್ ಹೊಡೆಸಿಕೊಳ್ಳುತ್ತಿದ್ದಾಗಲೆಲ್ಲಾ ಕೆರಳುತ್ತಿದ್ದ ಬೌಲರುಗಳು ಅದೇ ವೇಗದಲ್ಲಿ ವಿಕೆಟ್‌ಗಳನ್ನೂ ಪಡೆಯುತ್ತಿದ್ದರು. ಅರ್ಹವಾಗಿಯೇ ಇರ್ಫಾನ್ ಪಠಾಣ್ (4 ಓವರ್ 16 ರನ್ 3 ವಿಕೆಟ್ ) ಪಂದ್ಯಶ್ರೇಷ್ಠರಾಗಿ ಪುರಸ್ಕೃತರಾದರು.

ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger