ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Friday, October 19, 2007

ವೆಬ್‌ದುನಿಯಾ ವಾರದ ಬ್ಲಾಗ್: ಏನ್ ಗುರು

ಇದೀಗ ಕನ್ನಡ ಬ್ಲಾಗ್ ಲೋಕ ಸಮೃದ್ಧಗೊಳ್ಳುತ್ತಿರುವಂತೆ ಬ್ಲಾಗ್ ವೈವಿಧ್ಯತೆಗಳೂ ಕಣ್ಣಿಗೆ ಬೀಳುತ್ತಿವೆ. ಕನ್ನಡ ಬ್ಲಾಗ್‌ಗಳಲ್ಲಿ ಪ್ರಸಕ್ತ ಆತ್ಮಕಥನಗಳೇ ಹೆಚ್ಚಾಗಿರುವುವಾದರೂ ಕೆಲವಾರು ಬ್ಲಾಗುಗಳು ಸರಿಯಾದ, ಒಂದು ಉದ್ದೇಶವಿರುವ ಜಾಡು ಹಿಡಿದುಕೊಂಡಿವೆ. ಇಂತಹ ಬ್ಲಾಗುಗಳಲ್ಲಿ 'ಏನ್ ಗುರು' (http://enguru.blogspot.com/) ಎಂಬ ಬ್ಲಾಗ್ ಕೂಡ ಒಂದು.

ಕನ್ನಡಪರ ಕಾಳಜಿ ಪ್ರಮುಖವಾಗಿ ವ್ಯಕ್ತವಾಗುವ 'ಏನ್ ಗುರು' ಎಂಬ ಬ್ಲಾಗ್ ಹೆಸರಿನಿಂದಲೇ ಅದರಲ್ಲಿ ಯಾವ ಶೈಲಿಯ ಬರಹಗಳು ಇರುತ್ತವೆ ಎಂಬುದನ್ನು ಅಂದಾಜಿಸಬಹುದು. "ಏನ್ ಗುರು" ಬ್ಲಾಗಿಗರು ತಮ್ಮ ಕನ್ನಡಪರ ವಾದವನ್ನು ಸ್ವಲ್ಪ ಉಗ್ರವಾಗಿಯೇ ಪ್ರತಿಭಟಿಸುತ್ತಾರಾದರೂ ನಿಮಗೆ ಎಲ್ಲೂ ಅತಿ ಅನಿಸುವುದಿಲ್ಲ, ಅಥವಾ ತರ್ಕ ಮೀರಿ ದೂರ ಹೋಗುವುದಿಲ್ಲ.


ಮೈಸೂರು ದಸರಾ

ಮೈಸೂರು ದಸರಾ ವೈಭವದ ರಸಮಯ ಕ್ಷಣಗಳ ವೀಕ್ಷಣೆ ಲಭ್ಯ. ವಿಡಿಯೋಗಾಗಿ ನಿರೀಕ್ಷಿಸಿ.

ಪೋಟೋಗ್ಯಾಲರೀಗಾಗಿ ಇಲ್ಲಿ ಕ್ಲಿಕ್ ಮಾಡಿ

ಚಕ್‌ ದೇಗೆ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ

ಶಮಿತ್ ಅಮಿನ್ ನಿರ್ಧೇಶನ ಮತ್ತು ಶಾಹರುಖ್ ಖಾನ್ ಅಭಿನಯದ ಬಾಲಿವುಡ್ ಸುಪರ್ ಹಿಟ್ ಚಿತ್ರ ಚಕ್ ದೇ ಇಂಡಿಯಾ ಈ ಬಾರಿಯ ಆಸ್ಟ್ರೇಲಿಯನ್ ಇಂಡಿಯನ್ ಫಿಲ್ಮ್ ಪೆಸ್ಟಿವಲ್‌ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಆಸ್ಟ್ರೇಲಿಯದ ನೆಲದಲ್ಲಿ ನಡೆದ ವಿಶ್ವಕಪ್ ಹಾಕಿ ಟೂರ್ನಿಯ ಕಥಾ ಚಿತ್ರವನ್ನು ಒಳಗೊಂಡಿರುವ ಚಿತ್ರವು ಸಿಡ್ನಿ, ಮೇಲ್ಬೋರ್ನ್‌ಗಳಲ್ಲಿ ಚಿತ್ರಿಕರಣಗೊಂಡಿದೆ. ಚಕ್ ದೇ ಇಂಡಿಯಾ ಚಿತ್ರವು 2002 ರ ಮ್ಯಾಂಚೆಸ್ಟರ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ ಹಾಕಿ ತಂಡದ ಗೆಲುವಿನ ಆಧಾರದ ಮೇಲೆ ನಿರ್ಮಾಣವಾಗಿದೆ.


Thursday, October 18, 2007

ನಟ ಚಿರಂಜೀವಿ ಮಗಳ ಸಿನಿಮಯ ಮದುವೆ

ಆಂಧ್ರಪ್ರದೇಶದಾದ್ಯಂತ ತಮ್ಮ ಅದ್ಭುತ ನಟನೆಯಿಂದ ಸೂಪರ್ ಸ್ಟಾರ್ ಪಟ್ಟ ಪಡೆದ ನಟ ಚಿರಂಜೀವಿಯ ಮಗಳು ಶ್ರೀಜಾ ಮನೆಯಿಂದ ಓಡಿ ಹೋಗಿ ತನ್ನ ಸ್ನೇಹಿತ ಶಿರಿಶ್ ಭಾರಧ್ವಜ್ ಅವರನ್ನು ನಗರದ ಆರ್ಯ ಸಮಾಜದ ಮಂದಿರದಲ್ಲಿ ಮದುವೆಯಾಗಿದ್ದಾರೆ.

ನಮ್ಮ ಪ್ರೇಮಕ್ಕೆ ತಂದೆ ತಾಯಿಗಳ ವಿರೋಧ ವ್ಯಕ್ತಪಡಿಸಿದರಲ್ಲದೇ ಒಂದು ವರ್ಷಗಳ ಕಾಲ ಮನೆಯಲ್ಲಿ ಕೂಡಿಹಾಕಿದ್ದರು ಎಂದು ಶ್ರೀಜಾ ಆರೋಪಿಸಿದ್ದಾರೆ.


ಕರೀನಾ ಸೈಫ್ ಪ್ರೇಮದ ಅಲೆಯಲ್ಲಿ

ಬಾಲಿವುಡ್ ಚಿತ್ರರಂಗದ ಖ್ಯಾತ ನಟ ರಾಜಕುವರ ಸೈಫ್ ಅಲಿಖಾನ್ ಬಾಲಿವುಡ್ ಬೆಡಗಿ ಖ್ಯಾತ ನಟಿ ಕರೀನಾ ಕಪೂರ್ ಅವರೊಂದಿಗೆ ಪ್ರೇಮಸಂಬಂಧವಿದೆ ಎಂದು ಕರೀನಾಳ ಸಮ್ಮುಖದಲ್ಲಿ ಸೈಫ್ ಲಕ್ಮೆ ಫ್ಯಾಶನ್ ವೀಕ್ ಸಮಾರಂಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕಳೆದ ಹಲವು ತಿಂಗಳುಗಳಿಂದ ಸುದ್ದಿಗಳ ಉಹಾಪೋಹಗಳಿಗೆ ತೆರೆ ಎಳೆಯಲು ಬಯಸಿದ್ದೆನೆ ಎಂದು ಹೇಳಿದ್ದಾರೆ. ಬಾಲಿವುಡ್ ಉದ್ಯಮದ ಹೆಸರಾಂತ ಫ್ಯಾಶನ್ ಡಿಜೈನರ್ ಮನೀಶ್ ಮಲ್ಹೋತ್ರಾ ಅವರು ಆಯೋಜಿಸಿದ ಫ್ಯಾಶನ್ ಕರೀನಾ ಮತ್ತು ಸೈಫ್ ಪರಸ್ಪರ ಆಲಿಂಗಿಸಿಕೊಂಡು ಭಾಗಿಯಾಗಿರುವುದು ಎಲ್ಲರ ಹುಬ್ಬೇರಲು ಕಾರಣವಾಗಿದೆ.


Wednesday, October 17, 2007

ನಟಿಗೆ ಕಪಾಳಮೋಕ್ಷ: ನಿರ್ದೇಶಕನಿಗೆ ನಿಷೇಧ

ಶೂಟಿಂಗ್ ವೇಳೆ ನಟಿಯೊಬ್ಬಳ ಕಪಾಳಮೋಕ್ಷ ಮಾಡಿದಲ್ಲಿ, ಆಕೆಯಿಂದ ಅತ್ಯುತ್ತಮ ನಟನೆ ನಿರೀಕ್ಷಿಸಬಹುದು ಎಂಬ ಚಿತ್ರ ನಿರ್ದೇಶಕರೊಬ್ಬರ ಲೆಕ್ಕಾಚಾರ ಅವರಿಗೇ ಮುಳುವಾಗಿದೆ.ಈ ಘಟನೆ ನಡೆದದ್ದು ಮಿರುಗಂ (ಮೃಗಂ) ಚಿತ್ರದ ಚಿತ್ರೀಕರಣದ ಸಂದರ್ಭ ಎನ್ನುವುದು ಮಾತ್ರ ಕಾಕತಾಳೀಯ.

ನವನಟಿ ಪದ್ಮಪ್ರಿಯಾ ಎಂಬಾಕೆಗೆ ಹೊಡೆದಿದ್ದಕ್ಕಾಗಿ ಚಿತ್ರ ನಿರ್ದೇಶಕ ಸಾಮಿ ಎಂಬವರು ಒಂದು ವರ್ಷ ಕಾಲ ಯಾವುದೇ ಚಿತ್ರ ನಿರ್ದೇಶಿಸುವುದನ್ನು ತಮಿಳು ಚಿತ್ರೋದ್ಯಮ ನಿಷೇಧಿಸಿದೆ.


ಅಕ್ಷಯ್-ಕತ್ರೀನಾ ಜೋಡಿಯ ಮೋಡಿ

ಅಕ್ಷಯ್ ಕುಮಾರ್ ಯಾವಾಗಲೂ ಯಾವುದೇ ನಾಯಕಿ ನಟಿ ಜತೆ ನಟಿಸುತ್ತಲೇ ಇರುತ್ತಾರೆ. ವೃತ್ತಿ ಜೀವನದ ಆರಂಭದಲ್ಲಿ ಶಿಲ್ಪಾ ಶೆಟ್ಟಿ ಮತ್ತು ರವೀನಾ ಟಂಡನ್ ಜತೆ ಸೇರಿ ಸಾಕಷ್ಟು ಚಿತ್ರದಲ್ಲಿ ಪಾಲ್ಗೊಂಡಿದ್ದರು.

ಆನಂತರ ಅಕ್ಷಯ್ ಮತ್ತು ಪ್ರಿಯಾಂಕಾ ಚೋಪ್ರಾ ಜೋಡಿಯ ಹಲವು ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಯಶ ಕಂಡವು. ಅಕ್ಷಯ್ ಮತ್ತು ಪ್ರಿಯಾಂಕಾ ಜೋಡಿಯು ತೀರಾ ಹತ್ತಿರವಾಗುತ್ತಿದೆ ಎಂಬ ಸುದ್ದಿ ಟ್ವಿಂಕಲ್ ಖನ್ನಾ ಕಿವಿಗೆ ಬಿದ್ದಾಗ, ಆಕೆ ಅಕ್ಷಯ್ ಕುಮಾರ್ ಪ್ರಿಯಾಂಕಾ ಜತೆ ನಟಿಸುವ ಸಾಧ್ಯತೆಯ ಮಾರ್ಗ ಬಂದ್ ಮಾಡಿಸಿದರು.


Tuesday, October 16, 2007

ರಾಮನಿಗಾಗಿ ಮಿಡಿಯಿತೇ ಶಿವಲಿಂಗ ?

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಲಖ್ನೋದಲ್ಲಿನ ಶಿವಲಿಂಗವೊಂದು ರಾಮ ಕಟ್ಟಿದ ಸೇತುವೆಗೆ ಧಕ್ಕೆ ಬರುವ ಸೂಚನೆ ಬರುತ್ತಲೇ ತನ್ನ ಬಣ್ಣ ಬದಲಾಯಿಸಿದೆ. ಹಾಗಂತ ಜನಾ ಹೇಳತೊಡಗಿದ್ದಾರೆ. ಲಖ್ನೋದಲ್ಲಿನ ಶಿವಲಿಂಗ ಬಣ್ಣ ಬದಲಾಯಿಸುವ ಮೊದಲು ವಾರಾಣಸಿಯಲ್ಲಿನ ಶಿವಲಿಂಗಗಳು ತಮ್ಮ ಬಣ್ಣ ಬದಲಾಯಿಸಿದ್ದವು. ಒಂದೇ ದಿನದಲ್ಲಿ ಎಲ್ಲ ಲಿಂಗಗಳ ಬಣ್ಣ ಬದಲಾಗಿದ್ದು, ಎಲ್ಲರ ಹುಬ್ಬುಗಳು ಮೇಲೇರುವಂತೆ ಮಾಡಿವೆ.

ಕೆಲ ವರ್ಷಗಳ ಇಂತಹುದೇ ಒಂದೆರಡು ಘಟನೆಗಳು ನಡೆದಿದ್ದವು. ಮೊದಲು ಗಣಪತಿ ಹಾಲು ಕುಡಿದಿದ್ದು, ನಂತರ ಮುಂಬೈನಲ್ಲಿ ಸಮುದ್ರದ ನೀರು ಸಿಹಿಯಾಗಿದ್ದು, ವಿಚಿತ್ರ ಘಟನೆಗಳು.

Monday, October 15, 2007

ವಿಶಿಗೆ ಕಿರುಕುಳದ ಸ್ವಾಗತ

ವಿಶ್ವಚಾಂಪಿಯನ್ ಪಟ್ಟ ಗೆದ್ದು ಸ್ವದೇಶಕ್ಕೆ ಮರಳಿದ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಅವರಿಗೆ ಅದ್ದೂರಿಯ ಸ್ವಾಗತ ದೊರೆಯುವ ಬದಲು ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಕಿರುಕುಳ ಸ್ವಾಗತ ಸಿಕ್ಕಿತು.

ಭಾರತದ ಪ್ರಮುಖ ಐಟಿ ಶಿಕ್ಷಣ ಸಂಸ್ಥೆ ಆನಂದ್ ಅವರ ಸ್ವಾಗತದ ಪ್ರಾಯೋಜಕತ್ವದ ಜವಾಬ್ದಾರಿ ವಹಿಸಿಕೊಂಡಿತ್ತು. ವಿಶೇಷ ಎಂದರೆ ಅದೇ ಸಂಸ್ಥೆಯ ಪ್ರಮುಖ ರಾಯಭಾರಿಯಾಗಿ ಆನಂದ್ ಗುರುತಿಸಿಕೊಂಡಿದ್ದಾರೆ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...

Blog Archive

Powered By Blogger