ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Wednesday, November 7, 2007

ಈ ಪುಟಾಣಿ ಬಳಿ 40000 ಅಪರೂಪದ ನಾಣ್ಯಗಳು

ಒಂದು ಸಾಮಾನ್ಯ ಹವ್ಯಾಸವು ಇಡೀ ಜೀವನವನ್ನು ಸಂಭ್ರಮಿಸಲು ಹೇಗೆ ಸಾಧ್ಯವಾಗಬಹುದು ಎಂಬುದನ್ನು ಒರಿಸ್ಸಾದ 13 ವರ್ಷದ ಹುಡುಗನೊಬ್ಬ ತೋರಿಸಿಕೊಟ್ಟಿದ್ದಾನೆ. ನಾಣ್ಯ ಸಂಗ್ರಹಣೆಯ ತನ್ನ ಹವ್ಯಾಸವನ್ನು ಮುಂದುವರಿಸಿ ಆತ ಈಗಾಗಲೇ 40 ಸಾವಿರ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳ ಒಡೆಯನಾಗಿದ್ದಾನೆ!

ದೇವಿ ಪ್ರಸಾದ್ ಮಂಗರಾಜ್ ಈಗ 130 ದೇಶದಳಿಗೆ ಸೇರಿದ ಅಪರೂಪದ ನಾಣ್ಯ-ನೋಟುಗಳ ಒಡೆಯ. ಇವುಗಳಲ್ಲಿ ಕೆಲವಂತೂ 800 ವರ್ಷಕ್ಕೂ ಹಳೆಯವು ಮತ್ತು ಯಾವುದೇ ವಸ್ತು ಸಂಗ್ರಹಾಲಯದಲ್ಲೂ ಇರಲಾರದಂತಹ ಅಪರೂಪದವುಗಳು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

4 ಕಾಲು, 4 ಕೈಗಳ ಪುಟಾಣಿ ಲಕ್ಷ್ಮಿ ಶಸ್ತ್ರಚಿಕಿತ್ಸೆ ಯಶಸ್ವಿ

ವೈದ್ಯಲೋಕಕ್ಕೆ ಸವಾಲಾಗಿದ್ದ, ನಾಲ್ಕು ಕಾಲು, ನಾಲ್ಕು ಕೈಗಳುಳ್ಳ ಮಗುವಿನ ಅನವಶ್ಯಕ ಅಂಗಗಳನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಬೆಂಗಳೂರು ವೈದ್ಯಕೀಯ ಜಗತ್ತು ಮತ್ತೊಂದು ದಾಖಲೆ ಮಾಡಿದೆ. ಸ್ಪರ್ಶ ಆಸ್ಪತ್ರೆಯಲ್ಲಿ ವಿಶೇಷ ಶಸ್ತ್ರ ಚಿಕಿತ್ಸೆಗೆ ದಾಖಲಾಗಿರುವ ಪುಟಾಣಿ ಲಕ್ಷ್ಮಿಗೆ ವಿಶೇಷ ಶಸ್ತ್ರ ಚಿಕಿತ್ಸೆ ಇಂದು ಬೆಳಗ್ಗೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Tuesday, November 6, 2007

ನಂಬಿಕೆಗಾಗಿ ನಾಲಿಗೆಯನ್ನೇ ಕೊಯ್ದುಕೊಳ್ಳುವವರು!

ನಂಬಿಕೆಯ ಹೆಸರಿನಲ್ಲಿ ಮತ್ತದರ ಉನ್ಮತ್ತತೆಯಲ್ಲಿ ಇವರು ತಮಗೆ ತಾವೇ ಮಾಡಿಕೊಳ್ಳುವ ಹಿಂಸೆಗೆ ಲೆಕ್ಕ ಇಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಾವು ಹೇಳುವ ಇಂದಿನ ಕಥೆಯಲ್ಲಿ ದೇವರಿಗೆ ಅರ್ಪಿಸುವ ಹೆಸರಿನಲ್ಲಿ ನಾಲಿಗೆಯನ್ನೇ ಕೊಯ್ದುಕೊಳ್ಳುತ್ತಾರೆ ಎಂದರೆ ನಂಬುತ್ತಿರಾ? ಇಂತಹದೊಂದು ವಿಚಿತ್ರ ನಂಬಿಕೆ ಮಧ್ಯಪ್ರದೇಶದ ಮಂಡ್ಸೌರ್ ಗ್ರಾಮದಲ್ಲಿದೆ.

ಸಾಮಾನ್ಯವಾಗಿ ಶಕ್ತಿದೇವತೆಯ ಆರಾಧನೆಯ ಸಮಯದಲ್ಲಿ ಇಂತಹ ಭಕ್ತಿಯ ಪರಾಕಾಷ್ಠೆಯಲ್ಲಿ ದೇವಿಯ ಪೂಜಾರಿಯ ಮುಂದಾಳುತ್ವದಲ್ಲಿ ದೇಹಕ್ಕೆ ಮಾಡಿಕೊಳ್ಳುವ ಹಿಂಸೆಯ ಪರಿ ಇದೆಯಲ್ಲ, ಅದು ಮನಸ್ಸಿಗೆ ಮಂಕು ಹಿಡಿಸುವುದು ಖಂಡಿತ.



4 ಕೈ, 4 ಕಾಲಿನ ಮಗುವಿಗೆ ಶಸ್ತ್ರಚಿಕಿತ್ಸೆ ಆರಂಭ

ನಾಲ್ಕುಕೈ, ನಾಲ್ಕು ಕಾಲುಗಳುಳ್ಳ ಎರಡು ವರ್ಷ ಪ್ರಾಯದ ಬಾಲಕಿಯೊಬ್ಬಾಕೆಯ ಜನ್ಮಜಾತ ವೈಕಲ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ 40 ಗಂಟೆಗಳ ಅವಿರತ ಶಸ್ತ್ರಚಿಕಿತ್ಸೆ ಕಾರ್ಯವು ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಆರಂಭವಾಗಿದೆ.

ತಲೆಯಿಲ್ಲದ ಅವಳಿ ಮಕ್ಕಳ ಸಂಯೋಗದಿಂದಾಗಿ ಈ ವೈಕಲ್ಯ ಉಂಟಾಗಿದ್ದು, ಬಾಲಕಿ ಲಕ್ಷ್ಮಿಯು ಬಿಹಾರದ ಅರಾರಿಯಾ ಜಿಲ್ಲೆಯ ಪುಟ್ಟ ಹಳ್ಳಿಯವಳು.


Monday, November 5, 2007

ಸಂಗೀತ ಸಾಮ್ರಾಟ್ ಬಟೂಕ ಭೈರವ

ಇದು ಲಕ್ನೋ ನಗರಕ್ಕೆ ತೀರ ಸಮಿಪ ಇರುವ ಕನಸ್ರಾಬಾಗ್‌ದಲ್ಲಿ ಇರುವ ಸಂಗೀತ ಸಾಮ್ರಾಟ್, ಗಾನಪ್ರಿಯ ಬಟೂಕ ಭೈರವನ ಕಥೆ. ಲಯಕರ್ತೃ ಶಿವನು ಸಂಗೀತ ಮತ್ತು ನಾಟ್ಯ ಪ್ರಿಯ ಅದರಂತೆ ಮದ್ಯಪ್ರಿಯನು ಹೌದು. ಈ ಮಂದಿರಕ್ಕೆ ಭಕ್ತರು ಸೇರಿದಂತೆ ಸಂಗೀತಾರಾಧಕರು ಮತ್ತು ಸಂಗೀತ ಕಲೆಯ ಉಪಾಸಕರು ಬರುವುದು ವಾಡಿಕೆ.

ಸಂಗೀತಕ್ಕೆ ಮತ್ತು ಕಥಕ್ ನೃತ್ಯಕ್ಕೆ ಹೆಸರು ಮಾಡಿರುವ ಇದು ಕಥಕ್ ಘರಾನಾದ ಮೂಲ ಎಂದು ಪ್ರತೀತಿ ಇದೆ. ಹಿಂದೂಸ್ತಾನಿ ಸಂಗೀತದಲ್ಲಿ ಘರಾನಾ ಶಬ್ದ ಬಳಕೆಯಲ್ಲಿದ್ದು. ವಿಶಿಷ್ಟ ರೀತಿಯ ಸಂಗೀತವನ್ನು ಅಳವಡಿಸಿಕೊಂಡ ನಂತರ ಬರುವ ಶೈಲಿಗೆ, ಆ ಮನೆತನದ ಇಲ್ಲವೆ, ಆ ಪ್ರದೇಶದ ಹೆಸರನ್ನು ಮುಂದೆ ಸೂಚಿಸುವ ಮೂಲಕ ಆ ಶೈಲಿಯ ಸಂಗೀತದ ವ್ಯುತ್ಪನ್ನದ ಮೂಲವನ್ನು ಘರಾನಾ ಶಬ್ದ ತಿಳಿಸುತ್ತದೆ.


ಕ್ರಿಕೆಟ್‌ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

ಕ್ರಿಕೆಟ್‌ ಸ್ಕೋರ್‌ಗಾಗಿ ಇಲ್ಲಿ ಕ್ಲಿಕ್ಕಿಸಿ

Saturday, November 3, 2007

ಬಿಜೆಪಿ-ಜೆಡಿಎಸ್ ಶಾಸಕರಿಂದ ಧರಣಿ ಆರಂಭ

ಸರಕಾರ ರಚನೆಗೆ ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರಕಾರದ ಧೋರಣೆ ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಮಿತ್ರಪಕ್ಷಗಳ ಶಾಸಕರು ನಗರದಲ್ಲಿಂದು ಅನಿರ್ದಿಷ್ಠಾವಧಿ ಧರಣಿ ಆರಂಭಿಸಿದರು.

ಬಿಜೆಪಿ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಸರಕಾರ ರಚನೆಗೆ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರಿಂದ ಅಹ್ವಾನ ಕರೆ ಬರುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಉಭಯ ಪಕ್ಷದ ಮೂಲಗಳು ತಿಳಿಸಿವೆ.


ವೆಬ್‌ದುನಿಯಾ ವಾರದ ಬ್ಲಾಗ್: ಚಂಪಕಾವತಿ

"ಇಲ್ಲಿ ಋಷಿಗಳ ವೇಷ ತೊಟ್ಟವರು ಆರಾಮವಾಗಿ ಸಿಗರೇಟು ಸೇದುತ್ತಾರೆ. ಸೀರೆ ಉಟ್ಟ ಹುಡುಗ, ಸೆರಗು ಯಾವ ಹೆಗಲಿಗೆಂದು ಗಲಿಬಿಲಿಗೊಳ್ಳುತ್ತಾನೆ. ರೈತನ ವೇಷ ತೊಟ್ಟ ಪೇಟೆ ಹುಡುಗಿ ನಾಚಿಕೆಯಿಂದ ಮುದುಡಿಹೋಗುತ್ತಾಳೆ. ಒಂದರ ಹಿಂದೊಂದು ಪ್ರವೇಶ. ಪರದೆ ಎಳೆಯುವವನೇ ಇಲ್ಲ ! ಚಂಪಕಾವತಿಯ ಎಣ್ಣೆ ಕೊಪ್ಪರಿಗೆಗೆ ಇಲ್ಲಿಂದ ಒಂದೇಒಂದು ಉರುಳು ! ಸ್ವಾಗತವು ನಿಮಗೆ."

ಇವು ಚಂಪಕಾವತಿ ಬ್ಲಾಗಿನ ಹಣೆಬರಹದ ಕೆಳಗೆ ಕಾಣಿಸುವ ಸಾಲುಗಳು. ಇವುಗಳನ್ನು ಓದಿದ ಕೂಡಲೇ ಈ ಬ್ಲಾಗಿನ ಉದ್ದೇಶ ನಮ್ಮ ಮುಂದೆ ಗರಿಗೆದರುತ್ತದೆ. ರಂಗಭೂಮಿ ಕ್ಷೇತ್ರದಲ್ಲಿ ಅಪರಿಮಿತ ಆಸಕ್ತಿ ಹೊಂದಿರುವಂತೆ ತೋರುವ ಸುಧನ್ವಾ ಅವರು ಚಂಪಕಾವತಿಯಲ್ಲಿ (http://deraje.blogspot.com/) ತಮ್ಮ ಅನುಭವಗಳನ್ನು ತೋಡಿಕೊಳ್ಳುತ್ತಾರೆ ಹಾಗೂ ಚರ್ಚಿಸುತ್ತಾರೆ.


Tuesday, October 30, 2007

ಜಗತ್ತಿನ ಅತಿದೊಡ್ಡ ಶ್ರೀಮಂತ ಅಂಬಾನಿ

ಈಗ ಭಾರತ ಪ್ರಕಾಶಿಸುತ್ತಿದೆ... ನಾವೂ ಶ್ರೀಮಂತರು ಎಂಬುದನ್ನು ಭಾರತೀಯ ಉದ್ಯಮಿಗಳು ಜಗತ್ತಿಗೆ ತೋರಿಸುತ್ತಿದ್ದಾರೆ. ಯಾಕೆಂದರೆ, ಜಗತ್ತಿನ ಅತಿ ದೊಡ್ಡ ಶ್ರೀಮಂತ ವ್ಯಕ್ತಿ ಈಗ ಭಾರತೀಯನಾಗಿದ್ದಾನೆ. ಅವರು ಬೇರೆ ಯಾರು ಅಲ್ಲ, ಅವರೇ ರಿಲಯನ್ಸ್ ಕಂಪೆನಿಯ ಮುಖೇಶ್ ಅಂಬಾನಿ.

ಇಲ್ಲಿವರೆಗೆ ಜಗತ್ತಿನ ಅತಿದೊಡ್ಡ ಶ್ರೀಮಂತ ಸ್ಥಾನದಲ್ಲಿ ಕುಳಿತಿದ್ದ ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಬಿಲೆನಿಯರ್ ಮುಖೇಶ್ ಅಂಬಾನಿ ಆ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ. ಬಿಲ್ ಗೇಟ್ಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಎರಡನೇ ಸ್ಥಾನಕ್ಕೆ ಮ್ಯಾಕ್ಸಿಕನ್ ವ್ಯಾಪಾರಿ ದೈತ್ಯ ಕಾರ್ಲಸ್ ಸ್ಲಿಮ್ ಹಲು ಮತ್ತು ಇನ್ವೆಸ್ಟ್‌ಮೆಂಟ್ ಗುರು ವಾರೆನ್ ಬಫೆಟ್ ಜಿಗಿದಿದ್ದಾರೆ.


ಇಲ್ಲಿ ತುಪ್ಪದ ಕಾಲುವೆಯೇ ಹರಿಯುತ್ತದೆ...!

ನೀವು ಎಂದಾದರೂ ತುಪ್ಪ ಹೊಳೆಯಾಗಿ ಹರಿಯುವುದನ್ನು ಕೇಳಿದ್ದೀರಾ? ನಿಮ್ಮ ಉತ್ತರ ಖಂಡಿತವಾಗಿ ಇಲ್ಲ ಎಂದು ಬರುತ್ತದೆ ಎಂಬುದು ಗೊತ್ತು. ನಮ್ಮ ಹಿರಿಯರು ಹೇಳುತ್ತಿದ್ದರು ಒಂದು ಕಾಲದಲ್ಲಿ ಹಾಲು ತುಪ್ಪದ ಹೊಳೆ ಹರಿಯುತ್ತಿತ್ತು ಅಂತ... ಅದನ್ನು ಕೇಳಿದ್ದಿದೆ.

ಗುಜರಾತ್‌ನ ರೂಪಾಲ್ ಪಲ್ಲಿ ಎಂಬ ಕುಗ್ರಾಮದಲ್ಲಿ ಪ್ರತಿವರ್ಷ ನವರಾತ್ರಿಯ ಕೊನೆಯ ದಿನದಂದು ತುಪ್ಪದ ಹೊಳೆ ಇಂದಿಗೂ ಹರಿಯುತ್ತಿದೆ. ಈ ವರ್ಷದ ನವರಾತ್ರಿಯ ಕೊನೆಯ ದಿನದಂದು ಆರು ಲಕ್ಷ ಕಿಲೋ ತುಪ್ಪ ನದಿ ರೂಪದಲ್ಲಿ ಹರಿದಿದೆ.


Saturday, October 27, 2007

ವೆಬ್‌ದುನಿಯಾ ವಾರದ ಬ್ಲಾಗ್: ನೆನಪು ನೇವರಿಕೆ

ಬ್ಲಾಗ್ ಅವಕಾಶಗಳ ಫಲವಾಗಿ ಕುಡಿಯೊಡೆದ ಪ್ರತಿಭೆಗಳಲ್ಲಿ ಸಿಂಧು ಕೂಡ ಒಬ್ಬರು. ಎಲ್ಲ ನೋಟಗಳಾಚೆಗಿನ್ನೊಂದು ಚಿತ್ರವಿದೆ ಎಂದು ತಲೆಬರಹ ಹಾಕಿಕೊಂಡು ನೆನಪು ನೇವರಿಕೆ (http://nenapu-nevarike.blogspot.com/) ನಡೆಸುತ್ತಿರುವ ಸಿಂಧು ಅವರು ಯುವ ಬ್ಲಾಗಿಗರಿಗೆ ಆದರ್ಶಪ್ರಾಯ.

ಈಗಿನ ಅನೇಕ ಯುವ ಬರಹಗಾರರು ತಮ್ಮ ಲೇಖನಗಳಲ್ಲಿ ರವಿ ಬೆಳಗೆರೆಯವರ ಬರಹಶೈಲಿಯನ್ನು ಅನುಕರಿಸಲು ಪ್ರಯತ್ನಿಸುತ್ತಾರೆ. ರವಿ ಬೆಳಗೆರೆಯಂತೆ ಸಾಮಾನ್ಯ ಇಂಗ್ಲೀಷ್ ಪದಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ ಬೀಗುತ್ತಾರೆ. ಆದರೆ ಬೆಳಗೆರೆ ಲೇಖನಗಳಲ್ಲಿರುವ ವಾಕ್ಯಗಳ ಸರಳತೆ ಮತ್ತು ತೀಕ್ಷ್ಣತೆ, ಅವರ ನಿರೂಪಣಾ ಶೈಲಿ, ಅವರು ಮನಸ್ಸಿಗೆ ನಾಟುವ ಕ್ಷಣಗಳಿಗೆ ಹೆಚ್ಚು ಒತ್ತು ನೀಡಿ ಬರೆಯುವ ಪರಿ ನಿಜಕ್ಕೂ ಅನುಕರಣೀಯ. ದುರದೃಷ್ಟವಶಾತ್, ಯುವಬರಹಗಾರರಲ್ಲಿ ಇಂಗ್ಲೀಷ್ ಪದ ಬಳಕೆ ಮಾತ್ರವೇ ಅನುಕರಣೀಯವಾಗಿಬಿಟ್ಟಿರುತ್ತದೆ.


ನಾನು ಮಲಗಬೇಕು

ಪುಟ್ಟ ಆನೆಮರಿ ಬಹಾದುರ ಬಹಳ ಮರೆಯುವ ಮಗು. ಒಂದು ಸಲ ಅವನು ನೀರು ಕುಡಿಯುವುದು ಹೇಗೆ ಎಂಬುದನ್ನೇ ಮರೆತಿದ್ದ. ನೀರು ಕುಡಿಯಲು ನಿನ್ನ ಮೂಗು ಉಪಯೋಗಿಸಬೇಕು ಮಗೂ ಎಂದು ಅವನ ಅಮ್ಮ ಅವನಿಗೆ ಹೇಳಿದ್ದಳು.

ಈ ಸಲ ಬಹಾದುರನ ಅಮ್ಮ ಗೀತಾ ಚಿಕ್ಕಮ್ಮನನ್ನು ಭೇಟಿ ಮಾಡಲು ಹೋಗಿದ್ದರು. ಪುಟ್ಟ ಬಹಾದುರನಿಗೆ ಬಹಳ ನಿದ್ದೆ ಆದರೆ ನಿದ್ದೆ ಮಾಡುವುದು ಹೇಗೆ ಎಂಬುದೇ ನೆನಪು ಬರುತ್ತಿಲ್ಲ.


Wednesday, October 24, 2007

ಹೆಬ್ಬೆಟ್ಟು ಒತ್ತಿ ಭವಿಷ್ಯ ತಿಳಿಯಿರಿ!

ಭಾರತದಲ್ಲಿ ಅನೇಕ ವಿಧದ ಜ್ಯೋತಿಷ್ಯ ಪ್ರಕಾರಗಳಿವೆ. ಹಸ್ತ ಸಾಮುದ್ರಿಕ, ಸಂಖ್ಯಾಶಾಸ್ತ್ರ, ಗ್ರಹಕುಂಡಲಿ ಮುಂತಾದವುಗಳು ಪ್ರಮಖವಾದವುಗಳು. ನೂರಾರು ವರ್ಷಗಳಿಂದ ಪ್ರಚಲಿತದಲ್ಲಿರುವ ನಾಡಿ ಜ್ಯೋತಿಷ್ಯ ಕೂಡ ಒಂದು.

ನಂಬಿದರೆ ನಂಬಿ ಬಿಟ್ಟರೆ ಬಿಡಿ ಪಯಣದಲ್ಲಿ ಈ ಬಾರಿ ನಾವು ವೈಧೀಶ್ವರಂ ದೇವಾಲಯಕ್ಕೆ ತಮ್ಮನ್ನು ಕರೆದುಕೊಂಡು ಹೋಗುತ್ತಿದ್ದೇವೆ. ವೈಧೀಶ್ವರಂ ಮಂದಿರದ ವೈಶಿಷ್ಠ್ಯ ಎಂದರೆ ಈ ದೇವಾಲಯದ ಸುತ್ತಲೂ ನೂರಾರು ಕುಟುಂಬಗಳಿವೆ. ಅವುಗಳಿಗೆ ಜ್ಯೋತಿಷ್ಯ ಹೇಳುವುದು ಜೀವಾನಾಧಾರ ವೃತ್ತಿ . ಅಂದ ಮಾತ್ರಕ್ಕೆ ಬೇಕಾ ಬಿಟ್ಟಿ ದುಡ್ಡು ಕೀಳುತ್ತಾರೆ ಎಂದು ತಿಳಿಯಬೇಕಾಗಿಲ್ಲ. ಅವರು ಹೇಳಿದ್ದು ನೂರಕ್ಕೆ ನೂರು ಸರಿಯಾಗಿದ್ದರೆ ಮಾತ್ರ ನೀಡಿದ ಸೇವೆಗೆ ದುಡ್ಡು ತೆಗೆದುಕೊಳ್ಳುತ್ತಾರೆ.


ಮರುಮೈತ್ರಿ ತಳಮಳ: ವಿದಳನೆಯತ್ತ ದಳ

ಇಬ್ಬರ ಜಗಳದಿಂದಾಗಿ ಕೋಲಾಹಲದ ಗೂಡಾಗಿರುವ ಕರ್ನಾಟಕ ರಾಜಕೀಯ ಮತ್ತೊಂದು ಮಗ್ಗುಲಿನತ್ತ ಹೊರಳುತ್ತಿದ್ದು, ಜಾತ್ಯತೀತ ಜನತಾ ದಳ ಒಡಕಿನ ಹಂತ ತಲುಪಿದೆ.

ಪಕ್ಷದ ಬಹುತೇಕ ಶಾಸಕರು ದೇವೇಗೌಡ ಮತ್ತು ಅವರ ಕುಟುಂಬ ರಾಜಕಾರಣದ ವಿರುದ್ಧ ಬಂಡೆದಿದ್ದಾರೆ. ಮಾಜಿ ಸಚಿವ ಎಂ.ಪಿ.ಪ್ರಕಾಶ್ ಅವರನ್ನು ನಾಯಕರನ್ನಾಗಿ ಘೋಷಿಸಿಕೊಂಡಿರುವ ಶಾಸಕರು, ಕಾಂಗ್ರೆಸ್ ಜತೆ ಮರು ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಸಿದ್ಧತೆ ನಡೆಸಿದ್ದಾರೆ.


Monday, October 22, 2007

ಪರಮ ಪಾವನೆ ಭಕ್ತವತ್ಸಲೆ ಕೊಲ್ಲೂರು ಶ್ರೀಮೂಕಾಂಬಿಕೆ

ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿರುವ ಕೊಲ್ಲೂರು, ಸೌಪರ್ಣಿಕಾ ತಟದಲ್ಲಿರುವ ವಾಸ್ತುಶಿಲ್ಪ ಆಧಾರಿತ ಶಾಸ್ತ್ರೋಕ್ತವಾದ ಮಧ್ಯಮ ಗಾತ್ರದ ಶಿಲಾಮಯ ಪುಣ್ಯಕ್ಷೇತ್ರ. ಇಲ್ಲಿ ಭಕ್ತ ವತ್ಸಲೆಯಾದ ಶ್ರೀದೇವಿಯು ಮೂಕಾಂಬಿಕೆಯ ರೂಪದಲ್ಲಿ ನೆಲೆಸಿ ಭಕ್ತ ಜನಕೋಟಿಯನ್ನು ಹರಸುತ್ತಿದ್ದಾಳೆ.

ವಿಶೇಷತೆ:


ಈ ಪುಣ್ಯ ಕ್ಷೇತ್ರವು ವಿದ್ಯಾದಶಮಿ ದಿನ ನಡೆಯುವ ಅಕ್ಷರಾಭ್ಯಾಸಕ್ಕೆ ಹೆಸರುವಾಸಿ. ದೇಶದೆಲ್ಲೆಡೆಯಿಂದ ಗಣ್ಯರು, ರಾಜಕಾರಣಿಗಳು, ಉದ್ಯಮಿಗಳಿಗೆ ಭಕ್ತಿಯ ತಾಣವಿದು. ತಮಿಳುನಾಡು ಮಾಜಿ ಮುಖ್ಯಮಂತ್ರಿ/ನಟ ಎಂಜಿಆರ್ ಅವರು ಈ ಕ್ಷೇತ್ರಕ್ಕೆ ಚಿನ್ನದ ಖಡ್ಗ ಒಪ್ಪಿಸಿದ್ದರೆ, ಸಂಗೀತ ನಿರ್ದೇಶಕ ಇಳಯರಾಜ ಅವರು ಕೋಟಿ ರೂ. ಮೌಲ್ಯದ ವಜ್ರ ಖಚಿತ ಹಸ್ತ, ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಒಂದು ಆನೆಯನ್ನು ಭಕ್ತಿಯಿಂದ ಸಮರ್ಪಿಸಿದ್ದಾರಲ್ಲದೆ ಚೆನ್ನೈನಿಂದ ಕೊಲ್ಲೂರಿಗೆ ಬಸ್ ಸೌಲಭ್ಯವನ್ನೂ ಕಲ್ಪಿಸಿದ್ದಾರೆ. ಉದ್ಯಮಿ ವಿಜಯ ಮಲ್ಯ ಅವರು ಧ್ವಜಸ್ಥಂಬಕ್ಕೆ ಚಿನ್ನದ ಹೊದಿಕೆ ಮಾಡಿಸಿದ್ದಾರೆ. ನಾಲ್ಕು ಕೋಟಿ ರೂ. ಅಂದಾಜು ವೆಚ್ಚದ ಸ್ವರ್ಣ ರಥ ಇಲ್ಲಿ ಗಮನ ಸೆಳೆಯುತ್ತದೆ. ಖ್ಯಾತ ಗಾಯಕ ಜೇಸುದಾಸ್ ಇಲ್ಲಿಯ ಪರಮ ಭಕ್ತರು. ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು ಸೇರಿದಂತೆ ಇವರೆಲ್ಲರೂ ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿರುತ್ತಾರೆ.


ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...
Powered By Blogger