ಸಂಗೀತ ಸಾಮ್ರಾಟ್, ಗಾನಪ್ರಿಯ ಬಟೂಕ ಭೈರವನ ಕಥೆ. ಲಯಕರ್ತೃ ಶಿವನು ಸಂಗೀತ ಮತ್ತು ನಾಟ್ಯ ಪ್ರಿಯ ಅದರಂತೆ ಮದ್ಯಪ್ರಿಯನು ಹೌದು. ಈ ಮಂದಿರಕ್ಕೆ ಭಕ್ತರು ಸೇರಿದಂತೆ ಸಂಗೀತಾರಾಧಕರು ಮತ್ತು ಸಂಗೀತ ಕಲೆಯ ಉಪಾಸಕರು ಬರುವುದು ವಾಡಿಕೆ.ಸಂಗೀತಕ್ಕೆ ಮತ್ತು ಕಥಕ್ ನೃತ್ಯಕ್ಕೆ ಹೆಸರು ಮಾಡಿರುವ ಇದು ಕಥಕ್ ಘರಾನಾದ ಮೂಲ ಎಂದು ಪ್ರತೀತಿ ಇದೆ. ಹಿಂದೂಸ್ತಾನಿ ಸಂಗೀತದಲ್ಲಿ ಘರಾನಾ ಶಬ್ದ ಬಳಕೆಯಲ್ಲಿದ್ದು. ವಿಶಿಷ್ಟ ರೀತಿಯ ಸಂಗೀತವನ್ನು ಅಳವಡಿಸಿಕೊಂಡ ನಂತರ ಬರುವ ಶೈಲಿಗೆ, ಆ ಮನೆತನದ ಇಲ್ಲವೆ, ಆ ಪ್ರದೇಶದ ಹೆಸರನ್ನು ಮುಂದೆ ಸೂಚಿಸುವ ಮೂಲಕ ಆ ಶೈಲಿಯ ಸಂಗೀತದ ವ್ಯುತ್ಪನ್ನದ ಮೂಲವನ್ನು ಘರಾನಾ ಶಬ್ದ ತಿಳಿಸುತ್ತದೆ.

0 comments:
Post a Comment