ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Friday, September 14, 2007

ಪ್ರಥಮ ಪೂಜಿತನಿಗೆ ವೆಬ್‌ದುನಿಯಾ ನಮನ

ಎಲ್ಲೆಡೆ ಶ್ರೀ ಗಣೇಶೋತ್ಸವ ಸಡಗರ, ಸಂಭ್ರಮ. ಆದಿ ಪೂಜಿತ, ಅಮರ ವಂದ್ಯನ ಉತ್ಸವದ ಕುರಿತು ವೆಬ್ ದುನಿಯಾ ಕನ್ನಡ ತಾಣವು ಹೊರತಂದಿರುವ ವಿಶೇಷ ಪುಟ, ಫೋಟೋ ಗ್ಯಾಲರಿಗಳು ಇಲ್ಲಿ ಕ್ಲಿಕ್ ಮಾಡಿದರೆ ಲಭ್ಯ.

ವೆಬ್‌ದುನಿಯಾದಲ್ಲಿ ತಿರುಪತಿ ಬ್ರಹ್ಮೋತ್ಸವ

ಶ್ರೀ ಶ್ರೀನಿವಾಸನ ಸನ್ನಿಧಿಯಿರುವ ತಿರುಪತಿಯಲ್ಲಿ ನಡೆಯುವ ಅತ್ಯಂತ ವೈಭವೋಪೇತ ಉತ್ಸವ ಶ್ರೀವಾರಿ ಬ್ರಹ್ಮೋತ್ಸವ. ಈ ಉತ್ಸವವು 9 ದಿನಗಳ ಪರ್ಯಂತ ಮುಂದುವರಿಯುತ್ತದೆ. ಈ ಬಾರಿ ಬ್ರಹ್ಮೋತ್ಸವವು ಸೆ.15ರಿಂದ 23, 2007ವರೆಗೆ ನಡೆಯಲಿದೆ.

ಬ್ರಹ್ಮೋತ್ಸವ ಕುರಿತು ಆಕರ್ಷಕ ವಿನ್ಯಾಸದ ವಿಶೇಷ ಪುಟ ಇಲ್ಲಿ ಕ್ಲಿಕ್ ಮಾಡಿದರೆ ಲಭ್ಯ. ವೆಬ್ ದುನಿಯಾ ಓದುಗರಿಗೆ ಬ್ರಹ್ಮೋತ್ಸವವನ್ನು ಕಣ್ಣಾರೆ ನೋಡುವ ಅವಕಾಶವೂ ಇಲ್ಲಿದೆ. ವಿಶೇಷ ವೀಡಿಯೋ, ಫೋಟೋ ಗ್ಯಾಲರಿಗಳಿವೆ.

Wednesday, September 12, 2007

ಟ್ವೆಂಟಿ20: ಗೇಲ್ಸ್ 57 ಎಸೆತ, 117 ರನ್ (10 ಸಿಕ್ಸ್)

ದಾಖಲೆಯ ಸವಾಲು ಬೆನ್ನತ್ತಿದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡಿಸ್ ವಿರುದ್ಧ ನಡೆದ,ಟ್ವೆಂಟಿ-20 ವಿಶ್ವಕ‌ಪ್‌ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಪಂದ್ಯವನ್ನು ಎಂಟು ವಿಕೆಟ್‌ಗಳ ಅಂತರದಿಂದ ಗೆದ್ದು ದಾಖಲೆಯ ಜಯಸಾಧಿಸಿದೆ.

ಇಪ್ಪತ್ತು ಓವರುಗಳ ಆಟದಲ್ಲಿ ವೆಸ್ಟ್ ಇಂಡಿಸ್ ತಂಡ ನೀಡಿದ 206 ರನ್‌ಗಳ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಹರ್ಷಲ್ ಗಿಬ್ಸ್ ಅವರ ಮಿಂಚಿನ 90 ರನ್‌‌‌ಗಳ ನೇರವಿನಿಂದ 4 ಎಸೆತಗಳು ಬಾಕಿ ಇರುವಂತಯೇ ಗೆಲುವಿನ ಕೇಕೆ ಹಾಕಿತು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ವೈಜಯಂತಿಮಾಲಾ-ರಾಜ್ ಕಪೂರ್ ಪ್ರಣಯದ ಗುಲ್ಲು

ಹಿಂದಿ ಚಿತ್ರರಂಗದ ಹಿರಿಯ ನಟ ರಾಜಕಪೂರ್‌ ಜತೆ ತಮ್ಮ ಪ್ರಣಯದ ಗುಲ್ಲು ಹಬ್ಬಿದ್ದರಿಂದ ತೀವ್ರ ಬೇಸರವಾಯಿತೆಂದು ಹಿರಿಯ ನಟಿ ವೈಜಯಂತಿ ಮಾಲಾ ಹೇಳಿದ್ದಾರೆ.

ಶೋಮ್ಯಾನ್ ರಾಜಕಪೂರ್ ತರುವಾಯ ಸಿಕ್ಕಿದ ಪ್ರಚಾರದಿಂದ ಖುಷಿಪಟ್ಟರು. ಆದರೆ ಮಾಧ್ಯಮ ನನ್ನ ಅಭಿಪ್ರಾಯ ಕೇಳಲೇ ಇಲ್ಲ ಎಂದು ಅವರು ಗತಜೀವನದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

Monday, September 10, 2007

ಕಲಿಯುಗ ವರದ ಶಬರಿಮಲೆ ಅಯ್ಯಪ್ಪ

ಕಲಿಯುಗದಲ್ಲಿ ಕ್ಷಿಪ್ರ ವರಪ್ರಸಾದ ಅನುಗ್ರಹಿಸುವ ದೇವರು ಎಂಬ ನಂಬಿಕೆಗೆ ಪಾತ್ರವಾಗಿರುವ ಶ್ರೀ ಸ್ವಾಮಿ ಅಯ್ಯಪ್ಪನ ನೆಲೆವೀಡು ಕೇರಳದ ಶಬರಿಮಲೆ. ಇದು ವಿಶ್ವದ ಅತ್ಯಂತ ಹೆಚ್ಚು ಭಕ್ತ ಸಮುದಾಯವು ಸಂದರ್ಶಿಸುವ ಧಾರ್ಮಿಕ ತಾಣಗಳಲ್ಲೊಂದು. ಮೆಕ್ಕಾದ ಹಜ್ ಬಳಿಕ ವಿಶ್ವದ ಎರಡನೇ ಅತಿದೊಡ್ಡ ವಾರ್ಷಿಕ ಯಾತ್ರಾ ಕೇಂದ್ರ ಶಬರಿಮಲೆ ಎಂದೂ ಹೇಳಲಾಗುತ್ತಿದೆ. ಕಳೆದ ವರ್ಷದ ನವೆಂಬರ್‌ನಿಂದ ಜನವರಿವರೆಗೆ ಅಂದಾಜು ಐದು ಕೋಟಿ ಭಕ್ತರು ಈ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ.

ಚಕ್ ದಿಯಾ ಇಂಡಿಯಾ

ಕೊರಿಯಾವನ್ನು ಮಣಿಸಿದ ಭಾರತ

ಚೆನ್ನೈನ ಮೇಯರ್ ರಾಧಾಕೃಷ್ಣನ್ ಹಾಕಿ ಸ್ಟೆಡಿಯಂನಲ್ಲಿ ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ತನ್ನ ಚಾಂಪಿಯನ್‌ಷಿಪ್ ಪಟ್ಟವನ್ನು ಉಳಿಸಿಕೊಂಡದ್ದು ಮಹತ್ವ ಅಲ್ಲ. ವಾಸ್ತವಿಕವಾಗಿ ಟೂರ್ನಿ ಉದ್ದಕ್ಕೂ ಆಡಿದ ರೀತಿ ಇದೆಯಲ್ಲ ಅದು ಮೆಚ್ಚಬೇಕಾದ್ದು,
ಅಪ್ಪಿತಪ್ಪಿಯೂ ಸೋಲಿನತ್ತ ಸುಳಿಯದ ಚಕ್‌ ದೇ ಇಂಡಿಯಾ, ಭರ್ತಿ 57 ಗೋಲುಗಳನ್ನು ಮಾಡಿದ್ದು ಅಲ್ಲದೇ ಎದುರಾಳಿಗೆ ಬರಿ ಐದು ಗೋಲು ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದು, ನೋಡಿದರೆ, ಭಾರತದಲ್ಲಿ ಹಾಕಿಯ ಪುನರುತ್ಧಾನವಾಗಿದೆ ಯುದ್ದ ಕೂಗು ಚಕ್ ದೇ ಇಂಡಿಯಾ ಮುಗಿಲು ಮುಟ್ಟಿದೆ. ಇನ್ನು ಎರಡು ತಿಂಗಳು ಪಕ್ಕದ ಮನೆ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಅಲ್ಲೂ ನಮ್ಮವರು ಎಲ್ಲರಿಗೆ ಚಕ್ ನೀಡಿ ಬರಲಿ...

ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.

Saturday, September 8, 2007

ಕ್ರಿಕೆಟ್ ಸ್ಕೋರ್ ಕನ್ನಡದಲ್ಲಿ ಲೈವ್

ಭಾರತೀಯ ದಾಂಡಿಗರು ಇಂಗ್ಲೆಂಡ್ ವಿರುದ್ಧ ಸರಣಿ ನಿರ್ಣಾಯಕವಾಗಿರುವ ಏಳನೇ ತಥಾ ಅಂತಿಮ ಕ್ರಿಕೆಟ್ ಪಂದ್ಯದಲ್ಲಿ ಎದ್ದೂ ಬಿದ್ದು ಕಷ್ಟಪಟ್ಟು 187 ರನ್ ಸಂಪಾದಿಸಿದ್ದರೆ, ನಮ್ಮ ಆರ್.ಪಿ.ಸಿಂಗ್, ಇಂಗ್ಲೆಂಡಿನ ಆರಂಭಿಕ ದಾಂಡಿಗರಿಬ್ಬರನ್ನೂ ಪೆವಿಲಿಯನ್‌ಗೆ ಅಟ್ಟಿದ್ದಾರೆ.

ಬ್ಲಾಗ್ ಲೋಕದೊಳಗೆ ವೆಬ್‌ದುನಿಯಾ ದೃಷ್ಟಿ

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕ - ಬ್ಲಾಗ್. ಇಲ್ಲಿ ನಿಮಗೇನನಿಸುತ್ತದೋ... ಗೀಚಿ ಬಿಡಬಹುದು... ಅಲ್ಲಲ್ಲ... ಕುಟ್ಟಬಹುದು! "ವೆಬ್‌ದುನಿಯಾ ಕನ್ನಡ"ವು ವಾರಕ್ಕೊಂದು ಬ್ಲಾಗನ್ನು ವಿಶ್ಲೇಷಿಸಿ, 'ವಾರದ ಬ್ಲಾಗ್' ಎಂಬ ಅಂಕಣವನ್ನು ಆರಂಭಿಸುತ್ತಿದೆ.

ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Friday, September 7, 2007

ಬ್ಲಾಗ್ ಲೋಕದೊಳಗೆ ವೆಬ್‌ದುನಿಯಾ ದೃಷ್ಟಿ

ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ "ಬ್ಲಾಗ್" ಎಂಬ ಅಂತರ್ಜಾಲ ಪುಟಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕವಿದು ಮತ್ತು ಧನಾತ್ಮಕ ಪರಿಣಾಮಗಳಲ್ಲೊಂದು ಕೂಡ ಹೌದು.

ಸರಕಾರದ ಧೋರಣೆ ಬಗ್ಗೆ, ನಿಮ್ಮೂರಿನ ಸಮಸ್ಯೆಗಳ ಬಗ್ಗೆ... ನಿಮಗೇನನಿಸುತ್ತದೋ... ಬರೆದು ಬಿಡಿ... ಅಲ್ಲಲ್ಲ... (ಬ್ಲಾಗಿಗರ ಭಾಷೆಯಲ್ಲೇ ಹೇಳುವುದಾದರೆ) ಕೀಬೋರ್ಡ್ ಕುಟ್ಟಿ ಬಿಡಿ!

ವೆಬ್‌ದುನಿಯಾ ಕನ್ನಡ"ವು ವಾರಕ್ಕೊಂದು ಬ್ಲಾಗನ್ನು ವಿಶ್ಲೇಷಿಸಿ, 'ವಾರದ ಬ್ಲಾಗ್' ಎಂಬ ಅಂಕಣವನ್ನು ಆರಂಭಿಸುತ್ತಿದೆ.
ಪೂರ್ಣ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಗುರುವೇ ಇದು ಕನಸು.. ಬೇಡಾ

ಗುರುವೇ.... ಹೂಂ ಕೇಳಸ್ತಾ .. ನಮ್ಮ ಅಪ್ರತ್ಯಕ್ಷ ಗುರುಗಳು ಆದಂತಹಾ ಸಂದೀಪ್ ಮಿಶ್ರಾ. ಭಾರತೀಯರಿಗಾಗಿ, ಭಾರತೀಯ ಹಾಕಿಗಾಗಿ ದೊಡ್ಡ ಕನಸು ಕಟ್ಟಿಬಿಟ್ಟಿದ್ದಾರೆ.

ಎಂತಾ ಕನಸು ಅದು. ಎರಡೇ ವರ್ಷದಲ್ಲಿ ನಮ್ಮ ಹುಡುಗರು ಪ್ರಬ್ಜೋತು. ದಿಲೀಪು. ತುಷಾರ್, ಇಗ್ನೇಸ್ ಅವರ್ಮುಂದೆ ಸಚೀನೂ, ರಾಹುಲ್ ಯಾವ ಲೆಕ್ಕ ಇಲ್ಲ. ಅಯ್ಯೋ ಕರ್ಮ.. ಯಾರದು ಸಂದೀಪ್ ಮಿಶ್ರಾ ಅಂತ ಕೇಳ್ತಿಯಲ್ಲೋ...

ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ಕಿಸಿ..

Thursday, September 6, 2007

ಲೇಡಿ ಡಾನ್ - ಶಿಲ್ಪಾ

ಫರಾನ್ ಅಕ್ತರ್ ಅವರ ಚಿತ್ರದ ಡಾನ್ ಪಾತ್ರದಲ್ಲಿ ಶಾರೂಕ್ ಖಾನ್ ಅಭಿನಯ ನಿರೀಕ್ಷಿಸಿದ ಮಟ್ಟದಲ್ಲಿಲ್ಲ ಎಂದು ನೀವು ಭಾವಿಸಿದ್ದರೆ, ನಿಮಗಾಗಿ ಒಂದು ಸುದ್ದಿ ಕಾದಿದೆ. ಡಾನ್ ಪರಂಪರೆ ಮುಂದುವರಿಸುವ ಜವಾಬ್ದಾರಿಯನ್ನು ತುಳುನಾಡಿನ ಯುವತಿ ಶಿಲ್ಪಾ ಶೆಟ್ಟಿ ಹೊತ್ತಿದ್ದಾಳೆ.

"ಶಿಲ್ಪಾ ದಿ ಬಿಗ್ ಡಾನ್‌"ನಲ್ಲಿ ಅವಳದ್ದು ಲೇಡಿ ಡಾನ್ ಪಾತ್ರ. ಶಿಲ್ಪಾಗೆ ಹಾಲಿವುಡ್ ಚಿತ್ರ "ಪಿಂಕ್ ಪ್ಯಾಂಥರ್ 2"ನಲ್ಲಿ ನಟಿಸುವ ಆಫರ್ ಇತ್ತು. ಆದರೆ ಶಿಲ್ಪಾ ಅದನ್ನು ನಿರಾಕರಿಸಿದಳೆಂಬ ಗುಸು ಗುಸು ಬಾಲಿವುಡ್‍‌ನಲ್ಲಿ ಹರಡಿದೆ.

ಸಚಿನ್, ಉತ್ತಪ್ಪ ಅಬ್ಬರ: ಸರಣಿ ಸಮಬಲ

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರ ಮಿಂಚಿನ 94 ರನ್‌ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಓವಲ್‌ನಲ್ಲಿ ನಡೆದ ಸರಣಿಯ ಆರನೆ ಪಂದ್ಯವನ್ನು ಎರಡು ವಿಕೆಟ್‌ಗಳ ಅಂತರದಿಂದ ಗೆದ್ದ ಟೀಮ್ ಇಂಡಿಯಾ. ಕಂಡರಿಯದ ರೀತಿಯಲ್ಲಿ ಸರಣಿಯನ್ನು 3-3 ಅಂತರಕ್ಕೆ ತಂದು ನಿಲ್ಲಿಸಿದೆ. ಲಾರ್ಡ್ಸ್‌ನಲ್ಲಿ ಶನಿವಾರ ನಡೆಯಲಿರುವ ಅಂತಿಮ ಪಂದ್ಯ ಉಭಯ ತಂಡಗಳ ಪಾಲಿಗೆ ಸತ್ವ ಪರೀಕ್ಷೆಯಾಗಲಿದೆ.

ಎದುರಾಳಿ ಪಾಲ್ ಕಾಲಿಂಗ್‌ವುಡ್ ನೇತೃತ್ವದ ಬ್ರಿಟಿಷ್ ಪಡೆ ನೀಡಿದ ಆಸಾಧ್ಯದ 316 ರನ್‌ಗಳ ಸವಾಲನ್ನು ಬೆನ್ನತ್ತಿದ ಭಾರತ, ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಕೇಕೆ ಹಾಕಿತು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

Wednesday, September 5, 2007

ಕನ್ನಡದಲ್ಲಿ ಲೈವ್ ಸ್ಕೋರ್ ಕಾರ್ಡ್


ಶಿಕ್ಷಕರ ದಿನಾಚರಣೆ ವಿಶೇಷ: ದಾರಿ ತೋರುವ ಗುರು

ಗುರು ಎಂಬ ಶಬ್ದ ಎಷ್ಟೊಂದು ಪಾವನವಾದುದು ಮತ್ತು ಗೌರವಯುತವಾದುದು ಎಂದರೆ ಇದನ್ನು ಕೇಳಿದ ತಕ್ಷಣವೇ ಶಿಷ್ಯರ ತಲೆ ಗೌರವದಿಂದ ಸ್ವಯಂ ಆಗಿ ಬಾಗುತ್ತದೆ. ಗುರುವು ದೂರ ಮಾಡಿದರೂ ತನ್ನ ಒಳಮನಸ್ಸು ಸ್ವೀಕರಿಸಿದ್ದವರನ್ನೇ ಗುರುವೆಂದು ಪರಿಭಾವಿಸಿಕೊಂಡು, ಏಕಾಗ್ರತೆಯಿಂದ ಬಿಲ್ವಿದ್ಯೆ ಸಾಧಿಸಿ, ಗುರುದಕ್ಷಿಣೆಯಾಗಿ ಕೊಂಬೆರಳು ಕತ್ತರಿಸಿದ ಗುರುವನ್ನು ನಮ್ಮ ಇತಿಹಾಸ ಕಂಡಿದೆ. ಎಲ್ಲೋ ದಟ್ಟ ಹಳ್ಳಿಯೊಂದರಲ್ಲಿ, ಮೂಲಭೂತ ಸೌಕರ್ಯವೂ ಇಲ್ಲದ ಶಾಲೆಯಲ್ಲಿ ಎಲ್ಲಾ ನೋವು ನುಂಗಿಕೊಂಡು, ತನ್ನನ್ನೇ ನೆಚ್ಚಿಕೊಂಡು ಬಂದ ಮಕ್ಕಳಿಗೆ ವಿದ್ಯೆಯನ್ನು ಧಾರೆಯೆರೆದು, ಅವರ ಭವಿಷ್ಯ ಉಜ್ವಲವಾಗಿಸುವಲ್ಲೇ ಸಂತೋಷ ಕಾಣುವ ಶಿಕ್ಷಕರ ಬಗ್ಗೆಯೂ ಆಗೀಗ್ಗೆ ಕೇಳುತ್ತೇವೆ.

ಮಗುವಿನ ಮನಸ್ಸು ಹಸಿ ಮಣ್ಣಿನಂತೆ. ಅದನ್ನು ಎರಡೂ ಕೈಗಳಿಂದ ಆದರದಿಂದ ತಟ್ಟಿ, ತಟ್ಟಿ ಸುಂದರವಾದ, ಕಲಾತ್ಮಕವಾದ ವಿಗ್ರಹ ರೂಪಿಸುವುದು ಗುರುವಿನ ಗುರಿ. ಗುರುವಿಲ್ಲದ ಗುರಿಯು ಕೂಡ ಸಾಧಿಸಲಸದಳ. ಅದಕ್ಕೇ ಹೇಳುವುದು ವಿದ್ಯೆಯು ದುಡ್ಡುಕೊಟ್ಟು ಖರೀದಿಸಬಲ್ಲ ಸೊತ್ತಲ್ಲ. ಅಥವಾ ವಿದ್ಯೆ ಎಂಬುದು ಮಾರಾಟದ ಸೊತ್ತೂ ಅಲ್ಲ. ವಿದ್ಯೆಯನ್ನಂತೂ ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವೇ ಇಲ್ಲ.

ಪೂರ್ಣ ಲೇಖನವನ್ನು ಇಲ್ಲಿ ಓದಿ.

Tuesday, September 4, 2007

ಸಾನಿಯಾ ಎಂಟರ ಘಟ್ಟಕ್ಕೆ, ಪೇಸ್ ಸೆ.ಫೈನಲ್‌ಗೆ

ಮಾಜಿ ಚಾಂಪಿಯನ್ನರಾದ ಲೀಸಾ ರೇಮಂಡ್ ಮತ್ತು ಸಮಂತಾ ಸ್ಟಾಸರ್ ಅವರಿಗೆ ಆಘಾತ ನೀಡಿದ ಭಾರತದ ಸಾನಿಯಾ ಮಿರ್ಜಾ ಮತ್ತು ಅಮೆರಿಕದ ಬೆಥನಿ ಮಾಟೆಕ್ ಅವರು, ಯುಎಸ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲಿಗೆ ಏರಿದ್ದಾರೆ.

ಆದರೆ, ಮಿಕ್ಸೆಡ್ ಡಬಲ್ಸ್ ಪಂದ್ಯದಲ್ಲಿ ಸಾನಿಯಾ ಮತ್ತು ಮಹೇಶ್ ಭೂಪತಿ ಜೋಡಿಯು ಬೆಲಾರುಸ್ ಜೋಡಿಯೆದುರು ಪರಾಭವ ಅನುಭವಿಸಿ ಕೂಟದಿಂದ ಹೊರಬಿದ್ದಿದೆ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...
Powered By Blogger