ವೆಬ್ ಲೋಕದಲ್ಲಿ ಹೊಳೆಯುವ ನಕ್ಷತ್ರ...!

Monday, September 3, 2007

ಮಥುರೆಯಲ್ಲಿ ಕೃಷ್ಣಾಷ್ಟಮಿ ಸಡಗರ

ಶ್ರೀಕೃಷ್ಣ ಪರಮಾತ್ಮ ಹುಟ್ಟಿ ಬೆಳೆದ ಮಥುರೆಯಲ್ಲಿ ಕೃಷ್ಣಾಷ್ಟಮಿಯ ದಿನದಂದು ಆಚರಣೆಗಳು ಉತ್ತುಂಗಕ್ಕೇರುತ್ತವೆ. ದೆಹಲಿಯಿಂದ 145 ಕಿ.ಮೀ. ದೂರವಿರುವ ಮಥುರೆಯಲ್ಲಿ ಎಲ್ಲೆಂದರಲ್ಲಿ ಸಡಗರದ ಸಂಭ್ರಮ. ಸುಮಾರು ಐದು ಸಾವಿರ ವರ್ಷಗಳ ಹಿಂದೆ ಅಸುರರ ಅಟ್ಟಹಾಸಕ್ಕೆ ಅಂತ್ಯಹಾಡಲು ಇಲ್ಲಿ ಕೃಷ್ಣ ಪರಮಾತ್ಮ ಜನ್ಮತಾಳಿದನೆಂಬ ಪ್ರತೀತಿ ಇದೆ.

ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣ ಜನ್ಮ ತಾಳಿದ ನೈಜ ಸ್ಥಳದಲ್ಲಿ ಪ್ರಮುಖ ಆಚರಣೆ ಜರುಗುತ್ತದೆ. ಆ ಜಾಗದಲ್ಲಿಂದು ಬಹುದೊಡ್ಡ ದೇವಸ್ಥಾನ ನಿರ್ಮಾಣವಾಗಿದೆ. ಕೃಷ್ಣ ಜನ್ಮಭೂಮಿ ಮಂದಿರವೆಂದು ಕರೆಯಲ್ಪಡುವ ಈ ಮಂದಿರದಲ್ಲಿ ಭಗವಂತನ ಮೂರ್ತಿಯನ್ನು ಗರ್ಭಗೃಹದಲ್ಲಿ ಇರಿಸಲಾಗಿದೆ.

ಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಶರೀಫ್ ಪಾಕ್‌ನ ಜನಪ್ರಿಯ ನಾಯಕ

ಬೇನಜೀರ್ ಭುಟ್ಟೊ-ಮುಷರ್ರಫ್ ಅವರ ನಡುವೆ ಸಂಧಾನದ ಹಿನ್ನೆಲೆಯಲ್ಲಿ ಗಡೀಪಾರಾದ ಮಾಜಿ ಪ್ರಧಾನಮಂತ್ರಿ ನವಾಜ್ ಶರೀಫ್ ಈಗ ಪಾಕಿಸ್ತಾನದ ಅತ್ಯಂತ ಜನಪ್ರಿಯ ನಾಯಕರೆಂದು ತಿಳಿದುಬಂದಿದೆ.

ಅಧ್ಯಕ್ಷ ಮುಷರ್ರಫ್ ಜತೆ ಬೇನಜೀರ್ ಭುಟ್ಟೊ ಅಧಿಕಾರ ಹಂಚಿಕೆಯ ಹತಾಶ ಯತ್ನವು ಶರೀಫ್ ಅವರನ್ನು ಅತ್ಯಂತ ಜನಪ್ರಿಯ ನಾಯಕರನ್ನಾಗಿಸಿದೆ ಎಂದು ಗುಪ್ತಚರ ಸಂಸ್ಥೆಗಳನ್ನು ಉಲ್ಲೇಖಿಸಿ ಸರ್ಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಶರೀಫರ ಗೆಲುವು ಕೂಡ ಅವರ ಜನಪ್ರಿಯತೆಯ ರೇಖೆ ಏರಿಕೆಗೆ ಕಾರಣವಾಗಿದೆ.

ಪೂರ್ಣ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

Friday, August 31, 2007

ಮುಖ ತೋರಿಸದ ಹೃತಿಕ್, ಐಶ್ವರ್ಯ ಪೋಸ್ಟರ್

ಈ ವರ್ಷ ಚಿತ್ರಪ್ರೇಮಿಗಳು ಕಾತರದಿಂದ ನಿರೀಕ್ಷಿಸುತ್ತಿರುವ ಬಾಲಿವುಡ್ ಚಿತ್ರ ಜೋಧಾ ಅಕ್ಬರ್. ನಟ ಹೃತಿಕ್ ರೋಷನ್, ದಂತಕತೆ ಮೊಘಲ್ ಚಕ್ರವರ್ತಿ ಅಕ್ಬರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಭುವನ ಸುಂದರಿ ಖ್ಯಾತಿಯ ಐಶ್ವರ್ಯ ಬಚ್ಚನ್‌ಗೆ ರಜಪೂತ ರಾಣಿ ಜೋಧಾ ಪಾತ್ರ. ಇತಿಹಾಸದ ಪ್ರೇಮ ಕಥೆ ಚಿತ್ರದ ಕಥಾವಸ್ತು.
ಹೃತಿಕ್ ಯುವಕ ಅಕ್ಬರ್ ಪಾತ್ರದಲ್ಲಿ ನಟಿಸಿದ್ದು, ಇಡೀ ಚಿತ್ರದಲ್ಲಿ ಮೀಸೆಯಿರುವ, ಯೋಧನ ಉಡುಪಿನಲ್ಲಿ ಚಿತ್ರದುದ್ದಕ್ಕೂ ಮಿಂಚುತ್ತಾರೆ.
ಚಿತ್ರ: IFM

ಮೆಹಬೂಬಾ ಹಾಡಿಗೆ ನರ್ತಿಸಿಲ್ಲ:ಬಿಗ್ ಬಿ

ಚಮ್ಮಾ ಚಮ್ಮಾ, ಆಯಿಯೆ ಆ ಜಾಯಿಯೆ ಹಾಡುಗಳಿಗೆ ಲಯಬದ್ಧವಾಗಿ ನರ್ತಿಸಿ ಪ್ರೇಕ್ಷಕರಿಗೆ ಹುಚ್ಚೆಬ್ಬಿಸಿದ ಉರ್ಮಿಳಾ ಮಾತೋಂಡ್‌ಕರ್ ಬಾಲಿವುಡ್‌ನ ಬಿಗ್ ಬಿ ಜತೆಯಲ್ಲಿ ನರ್ತಿಸಿದ್ದಾಳೆಯೇ? ಇವೆಲ್ಲಾ ಊಹಾಪೋಹಗಳಿಗೆ "ಆಗ್" ಚಿತ್ರ ಬಿಡುಗಡೆಯಾಗುವ ಕೆಲವು ಗಂಟೆಗಳಿಗೆ ಮುಂಚೆ ಬಿಗ್ ಬಿ ತೆರೆಎಳೆದಿದ್ದಾರೆ.

ಆರ್‌ಜಿವಿಯ "ಆಗ್" ಚಿತ್ರದ ಮೆಹಬೂಬಾ ಹಾಡಿನಲ್ಲಿ ಕೇವಲ ಉರ್ಮಿಳಾದ್ದೇ ಕಾರುಬಾರು ಎಂದು ಬಿಗ್ ಬಿ ಹೇಳಿದ್ದಾರೆ. ರಮೇಶ್ ಸಿಪ್ಪಿಯ ಶೋಲೆ ಚಿತ್ರದಲ್ಲಿ ಗಬ್ಬರ್ ಸಿಂಗ್‌ ತರಹ, ಬಾಬ್ಬನ್ ಪಾತ್ರದಲ್ಲಿ ನಾನು ಡ್ಯಾನ್ಸ್‌ನಿಂದ ದೂರವೇ ಉಳಿದೆ ಎಂದಿದ್ದಾರೆ ಅವರು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

Thursday, August 30, 2007

ಇಂಗ್ಲೆಂಡ್-ಇಂಡಿಯಾ ಲೈವ್ ಸ್ಕೋರ್ ಕಾರ್ಡ್

ಇಂಗ್ಲೆಂಡ್-ಭಾರತ ಕ್ರಿಕೆಟ್ ಸ್ಕೋರ್

ಅವಳು ಪ್ರೀತಿಗಾಗಿ ಕಾದಿದ್ದಳು!

ಅವಳು ಹುಟ್ಟು ಚೆಲುವೆ. ಲಂಡನ್ ನಗರದಲ್ಲಿ ಅವಳು ನಡೆಯುತ್ತಿದ್ದರೆ ರಸಿಕರಿಗೆ ರಸದೌತಣ. ಅಂತಹ ಸುರಸುಂದರಿಯ ಬದುಕು ಹೀಗೆ ಕೊನೆಗೊಳ್ಳುತ್ತದೆ ಎಂದು ಕನಸು ಮನಸಿನಲ್ಲಿ ವೈರಿಯೂ ಕಲ್ಪನೆ ಮಾಡಿರಲಿಕ್ಕಿಲ್ಲ.

ಅವಳು ಡಯಾನಾ ಮೌಂಟಬ್ಯಾಟನ್. ಪ್ರಿನ್ಸ್ ಆಫ್ ವೇಲ್ಸ್ - ಇಂಗ್ಲೆಂಡ್ ರಾಜಕುಮಾರ ಚಾರ್ಲ್ಸ್‌‌ನ ಧರ್ಮಪತ್ನಿ. ಲಾರ್ಡ್ ಮೌಂಟ್ ಬ್ಯಾಟನ್‌ನ ವಂಶದ ಕುಡಿ. ಅವಳದು ಅಂತಹ ಹೇಳಿಕೊಳ್ಳುವಂತಹ ಬದುಕು ಇತ್ತು ಅಲ್ಲಿ. ಅವಳು ಮೊದಲು ಗಂಡನ ಪ್ರೀತಿಗೆ ಸತತ 30 ವರ್ಷಗಳ ಕಾಲ ಕಾದು ಕುಳಿತಳು. ಉಹೂಂ ಜಪ್ಪೆನ್ನಲಿಲ್ಲ ಆಸಾಮಿ. ಗಂಡ ಹೆಂಡಿರು ಅನ್ನಿಸಿಕೊಂಡಿದ್ದಕ್ಕೆ ಇಬ್ಬರು ಮಕ್ಕಳನ್ನು ಮಾಡಿದರು. ಮಕ್ಕಳು ಮಾಡುವಾಗ ಇದ್ದ ಧಾವಂತದ ಪ್ರೀತಿ ಕೊನೆಯವರೆಗೆ ಉಳಿಯಿತಾ? ಉಹೂಂ... ಇಲ್ಲ. ದೂರದ ದಕ್ಷಿಣ ಆಫ್ರಿಕಾದಲ್ಲಿ ಸಾಗಿದ ಅವರ ಮೊದಲ ರಾತ್ರಿಯ ಮಾರನೇ ರಾತ್ರಿ ಹೇಗೆ ಕಳಚಿಕೊಂಡು ಬಿದ್ದಿತ್ತೋ... ಅದೇ ರೀತಿ ಅವರಿಬ್ಬರ ನಡುವಿನ ಧಾವಂತದ ಪ್ರೀತಿ ಸತ್ತು ಬಿದ್ದಿತ್ತು.


Wednesday, August 29, 2007

ವರ ಪ್ರಾಪ್ತಿಗೆ ಶವ ಸಾಧನೆ...!

ಕೆಲವರಿಗೆ ಕಾರಿರುಳ ರಾತ್ರಿಯ ಪಯಣಗಳು ರೋಚಕ ಅನುಭವ ನೀಡುತ್ತವೆ. ಇನ್ನು ಕೆಲವರಿಗೆ ಸಾಧನೆಯಲ್ಲಿ ಸಾಗಿ ತಮ್ಮ ಗುರಿ ಮುಟ್ಟಲು ನಟ್ಟಿರುಳ ರಾತ್ರಿಯಲ್ಲಿ ಸ್ಮಶಾನದ ಶವಗಳೇ ಬೇಕು.

ಇಷ್ಟಾರ್ಥ ಸಿದ್ದಿಗಾಗಿ ನಡೆಯುವ ಈ ಚಿದಂಬರ ರಹಸ್ಯದ ಸಾಧನೆಗಳು ನಿಜವಾಗಿ ಪ್ರಕೃತಿ ಮತ್ತು ದೇವರನ್ನು ತೃಪ್ತಿಗೊಳಿಸಬಲ್ಲವೇ ಎನ್ನುವ ಪ್ರಶ್ನೆಗೆ ಉತ್ತರವಂತೂ ಇನ್ನೂ ನಮಗೆ ಸಿಕ್ಕಿಲ್ಲ. ಆದರೆ ಅಂತಹ ಸಾಧನೆಯೊಂದನ್ನು ನೋಡುವ ಅವಕಾಶದಲ್ಲಿ ರೋಮಾಂಚನ ಅನುಭವಿಸಿದ ಪ್ರಸಂಗವೊಂದು ನಮಗೆ ಎದುರಾಗಿತ್ತು !

ನಡು ರಾತ್ರಿಯಲ್ಲಿ ನಡೆಯವ ಶವ ಸಾಧನೆಯನ್ನು ನೋಡಬೇಕೆಂಬುದು ನಮ್ಮ ಕಾತುರ. ಇದಕ್ಕೆ ಹೂಂಗುಟ್ಟಿದವರು ಚಂದ್ರಪಾಲ್ ಎನ್ನುವ ಮಾಂತ್ರಿಕ. ಮಧ್ಯಪ್ರದೇಶದ ಉಜ್ಜಯಿನಿ ಸಮೀಪ ಕ್ಷಿಪ್ರಾ ನದಿ ಬಳಿಯ ಚಕ್ರತೀರ್ಥ ಸ್ಮಶಾನದಲ್ಲಿ ಚಂದ್ರಪಾಲ್ ಮಾಡಿದ ಶವ ಸಾಧನೆಯ ತುಣುಕುಗಳನ್ನು ನೋಡಿ ಭಯದಿಂದ ತಲೆ ಸುತ್ತುವುದು ಒಂದು ಬಾಕಿ.

ಕ್ಷಿಪ್ರಾ ನದಿ ತಟದ ಮೇಲೆ ನಡೆದ ಆ ಶವ ಸಾಧನೆಯ ಆರಂಭಿಕ ಹಂತಗಳ ಪರಿಚಯ ಮಾತ್ರ ಓದುಗರಿಗೆ ನೀಡಬಹುದು. ಅಂತಿಮ ಹಂತದ ಶವ ಸಾಧನೆಯ ಕ್ರಮಗಳು ನಮಗೆ ದೊರೆತಿಲ್ಲ.

ಅದು ಶವಸಾಧನೆಯ ಮಧ್ಯರಾತ್ರಿ. ಮಾಂತ್ರಿಕ ಚಂದ್ರಪಾಲ್ ಶವ ಪೂಜೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತ ಕ್ಷಿಪ್ರಾ ನದಿಯಲ್ಲಿ ದೀಪಗಳನ್ನು ತೇಲಿ ಬಿಡುತ್ತಾರೆ. ಆ ದೀಪಗಳು ಆ ಶವದ ಆತ್ಮಕ್ಕೆ ದಾರಿದೀಪವಾಗಿ ಶವ ಸಾಧಕನ ಇಚ್ಛೆಗಳನ್ನು ಪೂರೈಸಲು ಬರುತ್ತವೆ.

ಬಿಪ್ಸ್ - ಜಾನು ಮತ್ತೆ ಒಂದು

ಬಾಲಿವುಡ್ ಜೋಡಿ ಹಕ್ಕಿ ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಮತ್ತೆ ಜೊತೆ ಜೊತೆಯಲಿ ಮುಂಬೈನ ದೊಡ್ಡ ದೊಡ್ಡ ಅಂಗಡಿಗಳಿಗೆ ಚಕ್ಕರ್ ಹಾಕುತ್ತಿರುವುದನ್ನು ನೋಡಿ ಬಾಲಿವುಡ್ "ಥಂಡಾ" ಹೊಡೆದಿದೆ.

ಕ್ರಿಸ್ಟಿಯಾನೊ ಕಿಸ್‌ ಪ್ರಕರಣದ ನಂತರ ಜೋಡಿ ಹಕ್ಕಿಗಳು ತಮ್ಮ ತಮ್ಮ ಗೂಡು ಸೇರಿಕೊಂಡವು. ಇನ್ನೂ ಯಾರಿಗೂ ಹೊಟ್ಟೆಕಿಚ್ಚು ಇಲ್ಲ ಜಾನ್ ಅಬ್ರಹಾಂ ಲವರ್ ಪೋಸ್ಟ್ ಖಾಲಿ ಅದರಂತೆ ಬಿಪ್ಸ್ ಪೋಸ್ಟ್ ಕೂಡ ಖಾಲಿಯಾಗಿದೆ ಅರ್ಜಿ ಗುಜರಾಯಿಸುವುದಕ್ಕೆ ಸಿದ್ದವಾಗಿದ್ದವರು ಮತ್ತೆ ಬಿಪ್ಸ್- ಜಾನು ಜೋಡಿ ತಿರುಗಾಟ ಶುರು ಹಚ್ಚಿಕೊಂಡಿರುವುದನ್ನು ನೋಡಿ ಮೆತ್ತಗೆ ಅರ್ಜಿಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಬಾಲಿವುಡ್‌ನಲ್ಲಿ ಗುಲ್ಲೊ ಗುಲ್ಲು.

ಪೂರ್ಣ ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

Friday, August 24, 2007

ನಟ ಸಲ್ಮಾನ್ ಖಾನ್ ಮೇಲ್ಮನವಿ ತಿರಸ್ಕೃತ

ಚಿಂಕಾರಾ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಳನ್ಯಾಯಾಲಯ ವಿಧಿಸಿದ್ದ ಐದು ವರ್ಷಗಳ ಜೈಲು ಶಿಕ್ಷೆ ವಿರುದ್ಧ ಬಾಲಿವುಡ್ ಚಿತ್ರನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಮೇಲ್ಮನವಿಯನ್ನು ಜೋಧ್‌ಪುರದ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.

ಇದರಿಂದಾಗಿ ಸಲ್ಮಾನ್ ಖಾನ್ ಇಕ್ಕಟ್ಟಿಗೆ ಸಿಕ್ಕಿಬಿದ್ದಿದ್ದು, ಅವರ ವಿರುದ್ಧ ಬಂಧನದ ವಾರಂಟ್ ಜಾರಿಯಾಗಲಿದೆ. ಸಲ್ಮಾನ್ ಸೋಮವಾರ ಶರಣಾಗುವರೆಂದು ನಿರೀಕ್ಷಿಸಲಾಗಿದ್ದು, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆಗೆ ಕೋರ್ಟ್ ಅವಕಾಶ ನೀಡಿದೆ.
ಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Wednesday, August 22, 2007

ಭಾರತೀಯ ಸಂಸ್ಕೃತಿ ಪಸರಿಸಲು "ಮಿಸ್ ಬಾಲಿವುಡ್"

ಬಿಗ್ ಬ್ರದರ್ ರಿಯಾಲಿಟಿ ಶೋದಲ್ಲಿ ಅಂತಾರಾಷ್ಟ್ರೀಯವಾಗಿ ಪ್ರಖ್ಯಾತಿ ಗಳಿಸಿರುವ ಕರ್ನಾಟಕದ ತರಳೆ ಶಿಲ್ಪಾ ಶೆಟ್ಟಿ ಮತ್ತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡತೊಡಗಿದ್ದಾರೆ.

ಲಂಡನ್‌ನಲ್ಲಿ ತನ್ನ ಪರಿಮಳದ್ರವ್ಯವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಬಳಿಕ, ಜರ್ಮನಿಯಲ್ಲಿ ತನ್ನ ಬ್ರಾಡ್‌ವೇ ಸಂಗೀತ-ನೃತ್ಯ ಪ್ರದರ್ಶನ "ಮಿಸ್ ಬಾಲಿವುಡ್"ನ ಪ್ರೀಮಿಯರ್ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ.


ನಟಿಯು ಈಗ "ಮಿಸ್ ಬಾಲಿವುಡ್"ಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಇದು ಲಾಯ್ಡ್ ವೆಬರ್ ಅವರ ಬಾಂಬೇ ಡ್ರೀಮ್ಸ್ ಮಾದರಿಯಲ್ಲಿರುತ್ತದೆ.


ಇದು ಸೂರಿಯ ಹೊಸ ಚಿತ್ರ ಕಥೆ

ಕಲ್ಪನೆಗಳು ಅರಳುವುದೇ ಪತ್ರಗಳ ಪದಗಳಲ್ಲಿ, ಪದ ಪ್ರಯೋಗಗಳ ಭಾಷಾಲಂಕಾರದಲ್ಲಿ ಮನದಲ್ಲಿ ಮಿಡಿದದ್ದನ್ನು ಮಿಡಿದ ಹಾಗೆ ನಾಡಿ ಮಿಡಿತದ ತರಂಗಗಳಂತೆ ಉಭಯ ಕುಶಲೋಪರಿ ಸಾಂಪೃತದಿಂದ ಮೇಳೈಸಿ ಪುಟಾನುಗಟ್ಟಲೆ ಗೀಚುತ್ತಾ ಕೊನೆಗೆ ಇಂತಿ ನಿನ್ನ ಪ್ರೀತಿಯ...ಲ್ಲಿ ಅನ್ನುತ್ತಾ ಪೆನ್ನನ್ನು ಕೆಳಗಿಳಿಸಿದಾಗಲೇ ತೃಪ್ತಿ.

ಅದನ್ನೇ ಕಾನ್ಸೆಪ್ಟ್ ಆಗಿ ಒಂದು ಚಿತ್ರ ಕಥೆಯಾಗಿ ಮಾಡಿದರೆ ಹೇಗೆ? ಎಂಬ ಕಲ್ಪನಾ ಲಹರಿಯ ಹಂದರದ ವಸ್ತುವೇ ಇಂತಿ ನಿನ್ನ ಪ್ರೀತಿಯ ಸೂರಿಯ ಬಂಡವಾಳ. ಇದೊಂದು ವಿಚಿತ್ರ. ಸ್ಪೆಷಲ್ ಕಾನ್ಸೆಪ್ಟ್ಗಳ ಕಡೆ ಜನ ನೋಡ್ತಾರೆ ಆದ್ರೆ ನಮ್ಮ ಜೊತೇನೇ ಇರೋದನ್ನ ಗುರ್ತಿಸೋದೇ ಇಲ್ಲ. ಇನ್ನೂ ಕೆಲವರಿರ್ತಾರೆ ಹೊಸದನ್ನ ಹುಡುಕುತ್ತ ಹೋಗಿ ಕೊನೆಗೆ ಹಳೆಯದಕ್ಕೇ ಜೋತು ಬೀಳ್ತಾರೆ ಹೇಗೆಂದ್ರೆ ಹೊಸ ರುಚಿ ಸ್ವಲ್ಪ ಡಿಫರೆಂಟಾಗಿರ್ಬೇಕು ಅಂತ.


Tuesday, August 21, 2007

ಸಂಸದರ ಕ್ಷಮೆ ಕೇಳಿದ ರಾಯಭಾರಿ

ನವದೆಹಲಿ: ಅಣು ಒಪ್ಪಂದಕ್ಕೆ ಸಂಬಂಧಪಟ್ಟಂತೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ತಾನು ಉಪಯೋಗಿಸಿದ ವಾಕ್ಯ, ಮಾಧ್ಯಮ ಮಿತ್ರರಿಗೆ ಅನ್ವಯಿಸುತ್ತದೆ ವಿನಃ ಭಾರತೀಯ ಸಂಸದರಿಗಲ್ಲ ಎಂದು ಭಾರತೀಯ ರಾಯಭಾರಿ ರೋನ್ ಸೇನ್ ಹೇಳಿಕೆ ನೀಡಿದ್ದು, ಭಾರತೀಯ ಸಂಸದರ ಮನಸ್ಸಿಗೆ ಬೇಸರವಾಗಿದ್ದಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ಮಾಧ್ಯಮಗಳು ಅಣು ಒಪ್ಪಂದಕ್ಕೆ ಸಂಬಂಧ ಪಟ್ಟಂತೆ ತಲೆ ಇಲ್ಲದೇ ಜನಪ್ರತಿನಿಧಿಗಳ ಮತ್ತು ಉನ್ನತ ಅಧಿಕಾರವರ್ಗದ ಹೇಳಿಕೆಗಳತ್ತ ತಿರುಗುತ್ತಿದ್ದು ಅದೇ ಮಾತನ್ನೇ ಸಂದರ್ಶನದಲ್ಲಿ ಹೇಳಿದ್ದೆ. ಈ ಹೇಳಿಕೆಯಲ್ಲಿ ಸಂಸದರ ಅಭಿಪ್ರಾಯ ಮತ್ತು ನಿಲುವುಗಳಿಗೆ ಸಂಬಂಧಿಸಿದ್ದಲ್ಲ ಎಂದು ರೋನ್ ಸೇನ್ ನೀಡಿದ ಸ್ಪಷ್ಟೀಕರಣವನ್ನು ಲೋಕಸಭೆಯಲ್ಲಿ ಇಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಪ್ರಣಬ್ ಮುಖರ್ಜಿ ಓದಿದರು.

ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ಕಾಲಸರ್ಪ ಯೋಗ ಮತ್ತು ಪರಿಹಾರ

ಜನ್ಮಕುಂಡಲಿಯಲ್ಲಿನ ಗ್ರಹಗತಿಗಳು ವ್ಯಕ್ತಿಯ ಶ್ರೇಯಸ್ಸಿಗೆ ಧಕ್ಕೆ ತರಲು ಸಾಧ್ಯವೇ ? ವ್ಯಕ್ತಿಯನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸಿ ಜೀವನದಲ್ಲಿ ಜರ್ಜರಿತನನ್ನಾಗಿ ಮಾಡುತ್ತವೆಯೆ ? ಇಂತಹ ವಿಚಾರಗಳ ಕುರಿತು ಮಾತನಾಡುವುದು ಆಗಲಿ ಅಭಿಪ್ರಾಯ ವ್ಯಕ್ತಪಡಿಸುವುದು ಆಗಲಿ ಸಾಧ್ಯವಿಲ್ಲದ ಮಾತು. ಕೆಲವರು ಇದು ಶುದ್ದ ಸುಳ್ಳು ಎಂದು ವಾದಿಸಬಹುದು. 21 ನೇ ಶತಮಾನದಲ್ಲಿ ಇದ್ದರೂ ಸಾವಿರಾರು ಜನರು ಗ್ರಹದೋಷಗಳನ್ನು ನಂಬುತ್ತಾರೆ.

ಅಂತಹ ನಂಬಿಕೆಯಲ್ಲಿ ಕಾಲಸರ್ಪ ಯೋಗವೂ ಒಂದು. ನಂಬಿಕೆ, ಅಪನಂಬಿಕೆಗಳ ನಡುವೆ ಸಾಗುತ್ತಿರುವ ನಮ್ಮ ಪಯಣ ಸದ್ಯ ತ್ರ್ಯಂಬಕೇಶ್ವರ ಎಂಬ ಗ್ರಾಮಕ್ಕೆ ಬಂದು ನಿಂತಿದೆ. ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಗ್ರಾಮ ಕಾಲ ಸರ್ಪ ಯೋಗ ವಿಮೋಚನೆಗೆ ಪ್ರಸಿದ್ದಿ ಪಡೆದಿದೆ ಎಂಬ ಪ್ರತೀತಿ ಇದೆ. ಗ್ರಾಮಕ್ಕೆ ತೆರಳಿ ಅಲ್ಲಿ ನಡೆಯುವ ಸರ್ಪದೋಷ ವಿಮೋಚನೆಗಳನ್ನು ಕಣ್ಣಾರೆ ಕಾಣಬೇಕು ಎಂಬ ಉತ್ಸಾಹ ಮೇಲಾಗಿ ತಣಿಯದ ಕುತೂಹಲ ನಮ್ಮನ್ನಿಂದು ತ್ರ್ಯಂಬಕ ಗ್ರಾಮಕ್ಕೆ ಬರುವಂತೆ ಮಾಡಿದೆ. ಗ್ರಾಮಕ್ಕೆ ಹೋಗುವುದಕ್ಕೆ ಎಂದು ನಾವು ಟ್ಯಾಕ್ಸಿಗೆ ಕಾಯುತ್ತಿದ್ದೆವು. ಅಲ್ಲಿಗೆ ಬಂದ ಒಂದು ಟ್ಯಾಕ್ಸಿಯನ್ನೇರಿ ತ್ರ್ಯಂಬಕದತ್ತ ಸಾಗಿತು ನಮ್ಮ ನಂಬಿಕೆ, ಅಪನಂಬಿಕೆಗಳ ಪಯಣ...



Monday, August 20, 2007

ಮದ್ಯಂತರ ಚುನಾವಣೆಗೆ ಕಾಂಗ್ರೆಸ್ ಆದ್ಯತೆ: ಖರ್ಗೆ

ಬೆಂಗಳೂರು: ಸಮ್ಮಿಶ್ರ ಸರಕಾರದಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಉಂಟಾಗುತ್ತಿರುವ ತಿಕ್ಕಾಟವನ್ನು ಗಮನಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ಒಂದು ವೇಳೆ ಬಿಜೆಪಿ ಮತ್ತು ಜೆಡಿ ಎಸ್ ನಡುವೆ ಅಧಿಕಾರ ಹಸ್ತಾಂತರ ಸಮಸ್ಯೆಯಾಗಿ ಪರಿಣಮಿಸಿದರೆ, ತಾನು ಜೆಡಿಎಸ್ ಜೊತೆ ಮತ್ತೆ ಕೈಗೂಡಿಸಿ ಅಧಿಕಾರಕ್ಕೆ ಏರುವುದಿಲ್ಲ. ಸಮ್ಮಿಶ್ರ ಸರಕಾರದ ರಚನೆಗೆ ಬದಲು ಮದ್ಯಂತರ ಚುನಾವಣೆಗೆ ಆದ್ಯತೆ ನೀಡುವುದಾಗಿ ತನ್ನ ನಿಲುವು ಪ್ರಕಟಿಸಿದೆ.

ಗುಲ್ಬರ್ಗಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಮ್ಮಿಶ್ರ ಸರಕಾರದಲ್ಲಿ ಬಿಕ್ಕಟ್ಟು ಉಂಟಾದಲ್ಲಿ, ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳೊಂದಿಗೆ ಕೈಗೂಡಿಸುವುದಕ್ಕೆ ಕಾಂಗ್ರೆಸ್ ಮುಂದಾಗದು. ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳುವುದು ಸರಿಯಾದ ಮಾರ್ಗ ಎಂದು ಹೇಳಿದ್ದಾರೆ.

ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಬಚಕೇ ರಹನಾರೇ ಬಾಬಾ ತೆಲುಗಿಗೆ

ಮುಂಬೈ,: ದಕ್ಷಿಣ ಭಾರತದ ಚಿತ್ರಗಳನ್ನು ಬಾಲಿವುಡ್‌ಗೆ ಡಬ್ಬಿಂಗ್ ಮಾಡುವುದು ಹೊಸತಲ್ಲ.

ಆದರೆ ಬಾಲಿವುಡ್‌ನಿಂದ ಟಾಲಿವುಡ್ ಚಿತ್ರರಂಗಕ್ಕೆ ಡಬ್ ಮಾಡುತ್ತಿರುವುದು ಆಶ್ಚರ್ಯ ಮೂಡಿಸಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಬಾಲಿವುಡ್ ಸೆಕ್ಸ್ ಬಾಂಬ್ ಮಲ್ಲಿಕಾ ಶೆರಾವತ್ ಹಾಗೂ ಚಿರಯವ್ವನೆ ರೇಖಾ ಅಭಿನಯದ 2005ರಲ್ಲಿ ತೆರೆಕಂಡ "ಬಚಕೇ ರಹೇನಾರೇ ಬಾಬಾ" ಬಾಲಿವುಡ್ ಚಿತ್ರ ತೆಲುಗಿಗೆ ಡಬ್ ಮಾಡಲಾಗುತ್ತಿದೆ.



ಚಿತ್ರಕ್ಕೆ ತೇಂಟಿಗಾಲು ಎಂದು ಹೆಸರಿಸಲಾಗಿದ್ದು, ಆಂಧ್ರದಾದ್ಯಂತ ಏಕ ಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರ ಬಿಡುಗಡೆಗಿಂತ ಮೊದಲು ಟಾಲಿವುಡ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.

ಇದರ ಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?

About Me

My photo
Chennai, India
Kannada Portal With Lots of Online options in Kannada- Games, Greetings, Mail, Quiz, Dosti community site and more...
Powered By Blogger